ಭಟ್ಕಳದಲ್ಲಿ ಸಾರ್ವಜನಿಕ ರಕ್ತದಾನ ಶಿಬಿರ

ಭಟ್ಕಳ, ನ. 15: ಶಾಹೀನ್ ಸ್ಪೋರ್ಟ್ಸ್ ಸೆಂಟರ್ ಭಟ್ಕಳ ಹಾಗೂ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ ಇದರ ಜಂಟಿ ಆಶ್ರಯದಲ್ಲಿ ಭಟ್ಕಳ ಮುಸ್ಲಿಂ ಯೂತ್ ಫೆಡರೇಶನ್ ಹಾಗೂ ರೆಡ್ ಕ್ರಾಸ್ ಸೊಸೈಟಿ ಮಂಗಳೂರು ಇದರ ಸಹಯೋಗದಲ್ಲಿ ಸಾರ್ವಜನಿಕ ರಕ್ತದಾನ ಶಿಬಿರ ಭಟ್ಕಳದ ಮಖ್ದೂಮ್ ಕಾಲನಿಯ ಫಾತಿಮ ಅಲಿ ಹಾಲ್ ನಲ್ಲಿ ನಡೆಯಿತು.
ರಕ್ತದಾನ ಶಿಬಿರವನ್ನು ಭಟ್ಕಳ ಮಖ್ದೂಮಿಯ ಜಾಮಿಯಾ ಮಸ್ಜಿದ್ ಖತೀಬ್ ಮೌಲಾನಾ ನಿಯಮತುಲ್ಲಾಹ್ ಅಸ್ಕರಿ ದುಆ ಮಾಡಿ ಉದ್ಘಾಟಿಸಿದ ನಂತರ ಸ್ವಯಂ ರಕ್ತದಾನ ಮಾಡಿ ಶಿಬಿರಕ್ಕೆ ಚಾಲನೆಯನ್ನು ನೀಡಿದರು.
ನಂತರ ಮಾತನಾಡಿದ ಅವರು, ಸೃಷ್ಟಿಕರ್ತನು ಮಾನವನ ದೇಹದಲ್ಲಿ ಅವಶ್ಯಕವಾಗಿರುವ ವಿವಿಧ ಅಗತ್ಯತೆಗಳನ್ನು ಇಟ್ಟಿರುತ್ತಾನೆ. ಅದರಲ್ಲಿ ರಕ್ತವು ಅಮೂಲ್ಯ ಅವಶ್ಯಕತೆಯಾಗಿದೆ. ರಕ್ತದಾನ ಮಾಡುವುದರಿಂದ ಹಲವಾರು ರೋಗಿಗಳು ಚೇತರಿಸಿಕೊಳ್ಳುತ್ತಾರೆ. ಏಕೆಂದರೆ ರಕ್ತವು ಆರೋಗ್ಯಕರವಾಗಿರಲು ಅತೀ ಅವಶ್ಯಕತೆಯಾಗಿದೆ. ಕೆಲವೊಮ್ಮೆ ಜನರು ರಕ್ತದ ಹುಡುಕಾಟದಲ್ಲಿ ಒತ್ತಡದಲ್ಲಿ ಸಿಲುಕಿರುತ್ತಾರೆ. ರಕ್ತದಾನ ಶಿಬಿರಗಳ ಮೂಲಕ ಈ ಒಂದು ಕಾರ್ಯವನ್ನು ಸರಳ ಗೊಳಿಸುವುದಕ್ಕಾಗಿ ಆಯೋಜ ಕರನ್ನು ಅಭಿನಂದಿಸುತ್ತಾ ಶಿಬಿರದ ಯಶಸ್ವಿಗಾಗಿ ಹಾರೈಸಿದರು.
ಶಾಹೀನ್ ಸ್ಪೋರ್ಟ್ಸ್ ಸೆಂಟರ್ ಅಧ್ಯಕ್ಷ ಮುಹಮ್ಮದ್ ಸಾದಿಕ್ ಮಟ್ಟ ರವರ ಅಧ್ಯಕ್ಷತೆಯಲ್ಲಿ ನಡೆದ ಸಭಾಕಾರ್ಯಕ್ರಮವನ್ನು ಹಾಫಿಝ್ ಮುಹಮ್ಮದ್ ಮುಝಮ್ಮಿಲ್ ಹಲ್ಲರೆ ಉದ್ಘಾಟಿಸಿದರು. ಸಂಸ್ಥೆಯ ಕಾರ್ಯದರ್ಶಿ ಮುಬಸ್ಸಿರ್ ಹಲ್ಲರೆ ಸ್ವಾಗತಿಸಿದರೆ, ಇಂಷಾದ್ ಮುಕ್ತೇಸರ್ ವಂದಿಸಿದರು.
ಕಾರ್ಯಕ್ರಮದಲ್ಲಿ ಇಕ್ಬಾಲ್ ಸಈದಿ, ಮೌಲಾನಾ ಶುಜಾಉದ್ದೀನ್ ನದ್ವಿ , ಮುಹಮ್ಮದ್ ಉಸ್ಮಾನ್ ಹಲ್ಲರೆ, ಸಮೀಉಲ್ಲಾಹ್, ಇಂತಿಯಾಝ್ ಉದ್ಯಾವರ್, ಅಬ್ದುಲ್ ವಾಜಿದ್ ಕೋಲ , ಮೊಹಿದೀನ್ ಅಲ್ತಾಫ್ ಖರೂರಿ , ಅಸ್ರಾರ್ ಜಂಷೇರ್, ಮುಖ್ತಾರ್ ಮುಕ್ತೇಸರ್, ನಿಸಾರ್ ಖಾನ್, ಹಸನ್ ಶಬೀರ್, ನಝೀರ್ ಖಾಸಿಂಜೀ, ನಿಸಾರ್ ರುಕ್ನದ್ದೀನ್, ಅಶ್ರಫ್ ಸದ ಹಾಗೂ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ ಇದರ ಅಡ್ಮಿನ್ ಗಳಾದ ಫಯಾಝ್ ಬೈಂದೂರು, ನಾಚಿ ಆರ್.ಬಿ, ನಝೀರ್ ಪಿ.ಸಿ ಅಡ್ಡೂರು, ಸತ್ತಾರ್ ಕೃಷ್ಣಾಪುರ ಹಾಗು ಇತರರು ಈ ಸಂದರ್ಭ ಉಪಸ್ಥಿತರಿದ್ದರು.







