ಹನೂರು: ಗೋ ಮಧುಸೂಧನ್ ಗಡಿ ಪಾರಿಗೆ ದಸಂಸ ಆಗ್ರಹ

ಹನೂರು, ನ.15: ಡಾ.ಬಿ.ಆರ್ ಅಂಬೇಡ್ಕರ್ ಬರೆದಿರುವ ಸಂವಿಧಾನವನ್ನು ಸುಳ್ಳಿನ ಸಂವಿಧಾನ ಎಂದು ಹೇಳಿಕೆ ನೀಡಿರುವ ಗೋ ಮಧುಸೂಧನ್ ಅವರನ್ನು ಗಡಿ ಪಾರು ಮಾಡುಬೇಕು ಎಂದು ಸರ್ಕಾರಕ್ಕೆ ದಲಿತ ಸಂಘರ್ಷ ಸಮಿತಿಯ ಪದಾಧಿಕಾರಿಗಳು ಒತ್ತಾಯಿಸಿದ್ದಾರೆ.
ಹನೂರು ಸಮೀಪದ ಕೌದಳ್ಳಿ ಗ್ರಾಮದ ಮುಖ್ಯ ಮುಖ್ಯ ರಸ್ತೆಯಲ್ಲಿ ದಲಿತ ಸಂಘರ್ಷ ಸಮಿತಿ ವತಿಯಿಂದ ಮೌನ ಪ್ರತಿಭಟನೆ ಮಾಡಿ ಬಳಿಕ ರಸ್ತೆಯಲ್ಲಿ ಮಾನವ ಸರಪಳಿ ನಿರ್ಮಿಸಿದರು.
ನಂತರ ಸುದ್ದಿಗಾರರೂಂದಿಗೆ ಮಾತನಾಡಿದ ಜಿಲ್ಲಾ ದಲಿತ ಸಂಘದ ಸಂಚಾಲಕ ಗೋವಿಂದರಾಜು, ಡಾ.ಬಿ. ಆರ್ ಅಂಬೇಡ್ಕರ್ ಬರೆದಿರುವ ಸಂವಿಧಾನ ಸುಳ್ಳಿನ ಸಂವಿಧಾನ ಎಂದು ಹೇಳಿಕೆ ನೀಡಿರುವ ಗೋ ಮಧುಸೂಧನ್ ಅವರ ವರ್ತನೆ ರಾಷ್ಟ್ರದ್ರೋಹಿ ವರ್ತನೆಯಾಗಿದ್ದು, ಸಂವಿದಾನವನ್ನು ವಿರೋಧಿಸುವವರಿಗೆ ಭಾರತ ದೇಶದಲ್ಲಿ ವಾಸಿಸುವ ಹಕ್ಕಿಲ್ಲ. ಅಂತವರನ್ನು ಈ ಕೂಡಲೇ ಸರ್ಕಾರ ಅವರನ್ನು ಗಡಿಪಾರು ಮಾಡಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಹನೂರು ತಾಲೂಕು ಎಸ್ ಡಿಪಿಐ ಅಧ್ಯಕ್ಷ ನೂರುಲ್ಲಾ, ಯುವಜನ ಕಲಾ ಸಂಘದ ಅಧ್ಯಕ್ಷ ಸುಂದರೇಶ್, ಪಳನೀಮೇಡು ದಲಿತ ಸಂಘದ ಅಧ್ಯಕ್ಷರಾದ ಯು.ಟಿ ಕಾರ್ತಿಕ್, ದೊರೆಸ್ವಾಮಿ ಇನ್ನಿತರರು ಹಾಜರಿದ್ದರು.





