ಆರೋಗ್ಯ ಸೇವೆಗಳ ಶುಲ್ಕ ಹೆಚ್ಚಳ: ಏಮ್ಸ್ ಹೃಷಿಕೇಶ್‌ಗೆ ಹೈಕೋರ್ಟ್ ನೋಟಿಸ್

ಡೆಹ್ರಾಡೂನ್,ನ.16: ವಿವಿಧ ಆರೋಗ್ಯ ಸೇವೆಗಳಿಗೆ ಶುಲ್ಕ ಏರಿಕೆಗೆ ಸಂಬಂಧಿಸಿದಂತೆ ಹೃಷಿಕೇಶ್‌ನಲ್ಲಿರುವ ಅಖಿಲ ಭಾರತೀಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಏಮ್ಸ್), ಕೇಂದ್ರ ಆರೋಗ್ಯ ಸಚಿವಾಲಯ ಮತ್ತು ರಾಜ್ಯ ಆರೋಗ್ಯ ಇಲಾಖೆಗೆ ಉತ್ತರಾಖಂಡ ಉಚ್ಚ ನ್ಯಾಯಾಲಯವು ನೋಟಿಸ್‌ಗಳನ್ನು ಹೊರಡಿಸಿದ್ದು, ನಾಲ್ಕು ವಾರಗಳಲ್ಲಿ ಉಚ್ಚರಿಸುವಂತೆ ಸೂಚಿಸಿದೆ.
ರೋಗಿಗಳ ಪ್ರತಿಭಟನೆಯಿಂದಾಗಿ ಏಮ್ಸ್ ಹೃಷಿಕೇಶ್ ಕಳೆದ ತಿಂಗಳು ಶುಲ್ಕ ಏರಿಕೆಯನ್ನು ಹಿಂದೆಗೆದುಕೊಂಡಿತ್ತು.
ಏಮ್ಸ್ ಅ.3ರಂದು ದಿಢೀರ್‌ನೆ ತೀವ್ರ ಶುಲ್ಕ ಹೆಚ್ಚಳವನ್ನು ಜಾರಿಗೊಳಿಸಿದ್ದು, ಇದು ಬಡರೋಗಿಗಳನ್ನು ಸಂಕಷ್ಟದಲ್ಲಿ ತಳ್ಳಿದೆ ಎಂದು ವಾರಣಾಸಿಯ ನಿವಾಸಿ ಪ್ರವೀಣ ಕುಮಾರ್ ಸಿಂಗ್ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ಆರೋಪಿಸಿದ್ದಾರೆ. ಶುಲ್ಕ ಏರಿಕೆ ಜಾರಿಯಲ್ಲಿದ್ದಾಗ ರೋಗಿಗಳು ಪಾವತಿಸಿದ್ದ ಹೆಚ್ಚುವರಿ ಹಣವನ್ನಿನ್ನೂ ಆಸ್ಪತ್ರೆಯು ಮರುಪಾವತಿಸಬೇಕಿದೆ ಎಂದೂ ಅವರು ಅರ್ಜಿಯಲ್ಲಿ ವಾದಿಸಿದ್ದಾರೆ.
Next Story





