ನಕಲಿ ಟೀ ಪುಡಿ ಮಾರಾಟ: ಇಬ್ಬರ ಬಂಧನ
ಬೆಂಗಳೂರು, ನ.16: ಹಿಂದೂಸ್ಥಾನ್ ಲಿವರ್ ಕಂಪೆನಿಯ ಹೆಸರಿನಲ್ಲಿ ನಕಲಿ ಟೀ ಪುಡಿ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಇಬ್ಬರನ್ನು ಬಂಧಿಸಿ 20 ಸಾವಿರ ಮೌಲ್ಯದ ನಕಲಿ ಟೀ ಪುಡಿಯನ್ನು ಸಿಸಿಬಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ರಾಜಾಜಿನಗರದ ರಾಮಚಂದ್ರರಾವ್ ಹಾಗೂ ದೀಪಕ್ ಬಂಧಿತ ಆರೋಪಿಗಳೆಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತರು ಹಿಂದೂಸ್ತಾನ್ ಕಂಪೆನಿಯ ತ್ರಿ ರೋಸಸ್ ಲೇಬಲ್ ಹಚ್ಚಿ ನಕಲಿ ಟೀಪುಡಿ ಮಾರಾಟ ಮಾಡುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ಆರೋಪಿಗಳನ್ನು ಬಂಧಿಸಿರುವ ಪೊಲೀಸರು 20 ಸಾವಿರ ಮೌಲ್ಯದ ನಕಲಿ ಟೀ ಪುಡಿಯನ್ನು ವಶಪಡಿಸಿಕೊಂಡು ಇಲ್ಲಿನ ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
Next Story





