ಬಾಲಕನಿಂದ ಮಹಿಳೆಯ ಅತ್ಯಾಚಾರಕ್ಕೆ ಯತ್ನ
ಮಡಿಕೇರಿ,ನ.16: ಅಪ್ರಾಪ್ತ ಬಾಲಕನೊಬ್ಬಾತ ಮಹಿಳೆಯ ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ದಕ್ಷಿಣ ಕೊಡಗಿನ ವೆಸ್ಟ್‍ನೆಮ್ಮಲೆ ಗ್ರಾಮದಲ್ಲಿ ನಡೆದಿದೆ.
ವೆಸ್ಟ್‍ನೆಮ್ಮಲೆಯ ದಾಸನಕೊಲ್ಲಿ ಗ್ರಾಮದ ಮಹಿಳೆಯೊಬ್ಬರು ಮಧ್ಯಾಹ್ನ ಕರ್ತವ್ಯ ಮುಗಿಸಿ ಮನೆಗೆ ಹಿಂತೆರಳುತ್ತಿದ್ದ ಸಂದರ್ಭ ಅವರನ್ನು ಬಾಲಕ ಬಲತ್ಕಾರವಾಗಿ ಪಕ್ಕದ ತೋಟಕ್ಕೆ ಎಳೆದೊಯ್ದು ಅತ್ಯಾಚಾರಕ್ಕೆ ಯತ್ನಿಸಿದ್ದಾನೆ ಎಂದು ಆರೋಪಿಸಲಾಗಿದೆ.
ಈ ಹಂತದಲ್ಲಿ ಮುಖ್ಯ ರಸ್ತೆಯಲ್ಲಿ ಬಂದ ದ್ವಿಚಕ್ರ ವಾಹನವನ್ನು ಕಂಡು ಬಾಲಕ ಸ್ಥಳದಿಂದ ಕಾಲ್ಕಿತ್ತಿದ್ದಾನೆ ಎನ್ನಲಾಗಿದೆ.
ಬಳಿಕ ಮಹಿಳೆ ದ್ವಿಚಕ್ರ ವಾಹನ ಸವಾರನ ಸಹಕಾರ ಪಡೆದು ಶ್ರೀಮಂಗಲ ಠಾಣೆಗೆ ತೆರಳಿ ದೂರು ನೀಡಿದ್ದು, ಪೊಲೀಸರು ತಕ್ಷಣ ಕಾರ್ಯಪ್ರವೃತ್ತರಾಗಿ ಬಾಲಕನನ್ನು ವಶಕ್ಕೆ ಪಡೆದಿದ್ದಾರೆ.
Next Story





