ಕಪಿಲ್‌ದೇವ್ ಕಳಪೆ ದಾಖಲೆ ಸರಿಗಟ್ಟಿದ ಕೊಹ್ಲಿ

ಕೋಲ್ಕತಾ, ನ.16: ಕೋಲ್ಕತಾದಲ್ಲಿ ಗುರುವಾರ ಆರಂಭವಾದ ಶ್ರೀಲಂಕಾ ವಿರುದ್ಧದ ಮಳೆಬಾಧಿತ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತದ ನಾಯಕ ವಿರಾಟ್ ಕೊಹ್ಲಿ ಶೂನ್ಯಕ್ಕೆ ಔಟಾಗಿದ್ದಾರೆ. ಈವರ್ಷ ಐದನೇ ಬಾರಿ ಶೂನ್ಯ ಸಂಪಾದಿಸಿರುವ ಕೊಹ್ಲಿ ಕ್ಯಾಲೆಂಡರ್ ವರ್ಷದಲ್ಲಿ ಗರಿಷ್ಠ ಸೊನ್ನೆ ಸುತ್ತಿದ ಭಾರತದ ನಾಯಕರ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ.
ಈ ಮೂಲಕ ಭಾರತದ ಮಾಜಿ ನಾಯಕ ಕಪಿಲ್‌ದೇವ್ ಕಳಪೆ ದಾಖಲೆಯನ್ನು ಸರಿಗಟ್ಟಿದ್ದಾರೆ. 1983ರಲ್ಲಿ ಕಪಿಲ್‌ದೇವ್ 5 ಬಾರಿ ಶೂನ್ಯಕ್ಕೆ ಔಟಾಗಿದ್ದರು.
ಕೊಹ್ಲಿ ಈ ವರ್ಷ ಟೆಸ್ಟ್ ಹಾಗೂ ಏಕದಿನ ಪಂದ್ಯದಲ್ಲಿ ತಲಾ 2 ಬಾರಿ, ಟ್ವೆಂಟಿ-20ಯಲ್ಲಿ 1 ಬಾರಿ ಶೂನ್ಯಕ್ಕೆ ಔಟಾಗಿದ್ದಾರೆ. ಕುತೂಹಲ ಅಂಶವೆಂದರೆ ಈ ವರ್ಷ ಕೊಹ್ಲಿ ಆಸ್ಟ್ರೇಲಿಯ ಹಾಗೂ ಶ್ರೀಲಂಕಾ ವಿರುದ್ಧವೇ ಶೂನ್ಯಕ್ಕೆ ಔಟಾಗಿದ್ದಾರೆ. ಆಸೀಸ್ ವಿರುದ್ಧ 3 ಹಾಗೂ ಶ್ರೀಲಂಕಾ ವಿರುದ್ಧ 2 ಬಾರಿ ಈ ಕಳಪೆ ದಾಖಲೆ ಮಾಡಿದ್ದಾರೆ.
ಕೊಹ್ಲಿ ಈಡನ್‌ಗಾರ್ಡನ್ಸ್ ಸ್ಟೇಡಿಯಂನಲ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ ರನ್‌ಗಾಗಿ ಪರದಾಟ ಮುಂದುವರಿಸಿದ್ದಾರೆ. ಈ ಸ್ಟೇಡಿಯಂನಲ್ಲಿ ಆಡಿರುವ 4 ಟೆಸ್ಟ್‌ನಲ್ಲಿ ಕೊಹ್ಲಿ ಕೇವಲ 13.83 ಸರಾಸರಿ ಹೊಂದಿದ್ದಾರೆ.
ಕೊಹ್ಲಿ ಈ ವರ್ಷ ಹೆಚ್ಚು ಬಾರಿ ಶೂನ್ಯಕ್ಕೆ ಔಟಾಗಿದ್ದಾರೆ. ಕೊಹ್ಲಿಯ ಬಳಿಕ ಬಾಂಗ್ಲಾದೇಶದ ಮಶ್ರಾಫೆ ಮೊರ್ತಝಾ(3) ಹಾಗೂ ಝಿಂಬಾಬ್ವೆಯ ಗ್ರೆಮ್ ಕ್ರಿಮರ್(3) ಇದ್ದಾರೆ.
ಕೊಹ್ಲಿ 2011 ಹಾಗೂ 2014ರ ಬಳಿಕ ಮೂರನೆ ಬಾರಿ ಟೆಸ್ಟ್‌ನಲ್ಲಿ ಎರಡು ಬಾರಿ ಶೂನ್ಯಕ್ಕೆ ಔಟಾಗಿದ್ದಾರೆ. 1983ರಲ್ಲಿ ಕಪಿಲ್‌ದೇವ್ 5 ಬಾರಿ ಶೂನ್ಯಕ್ಕೆ ಔಟಾಗಿದ್ದರು. 1976ರಲ್ಲಿ ಬಿಷನ್ ಸಿಂಗ್ ಬೇಡಿ ನಾಲ್ಕು ಬಾರಿ ರನ್ ಖಾತೆ ತೆರೆಯಲು ವಿಫಲರಾಗಿದ್ದರು. ಸೌರವ್ ಗಂಗುಲಿ 2001 ಹಾಗೂ 2002ರಲ್ಲಿ ಎರಡು ಬಾರಿ ಈ ಕಳಪೆ ದಾಖಲೆ ನಿರ್ಮಿಸಿದ್ದರು. ಎಂ.ಎಸ್. ಧೋನಿ 2011ರಲ್ಲಿ 4 ಬಾರಿ ಶೂನ್ಯಕ್ಕೆ ಔಟಾಗಿದ್ದರು.
ಈ ವರ್ಷ ಕೊಹ್ಲಿ ಶೂನ್ಯಕ್ಕೆ ಔಟಾದ ಸಂದರ್ಭಗಳು...
ಫೆ.23 ಪುಣೆಯಲ್ಲಿ ಆಸ್ಟ್ರೇಲಿಯ ವಿರುದ್ಧ ಟೆಸ್ಟ್
ಜೂ.8 ರಂದು ದಿ ಓವಲ್‌ನಲ್ಲಿ ಶ್ರೀಲಂಕಾ ವಿರುದ್ಧ ಏಕದಿನ
ಸೆ.17 ರಂದು ಚೆನ್ನೈನಲ್ಲಿ ಆಸ್ಟ್ರೇಲಿಯ ವಿರುದ್ಧ ಏಕದಿನ
ಅ.10 ರಂದು ಗುವಾಹಟಿಯಲ್ಲಿ ಆಸ್ಟ್ರೇಲಿಯ ವಿರುದ್ಧ ಟ್ವೆಂಟಿ-20.







