ಮೈಸೂರು: ಕಾರ್ಖಾನೆಯಲ್ಲಿ ಯಂತ್ರಕ್ಕೆ ಸಿಲುಕಿ ಕಾರ್ಮಿಕ ಮೃತ್ಯು
ಮೈಸೂರು, ನ.16: ನಿದ್ದೆ ಮಂಪರಿನಲ್ಲಿ ಕೆಲಸ ಮಾಡುತ್ತಿರುವಾಗ ಯಂತ್ರಕ್ಕೆ ಸಿಲುಕಿ ದಿನಗೂಲಿ ಕಾರ್ಮಿಕ ಮೃತಪಟ್ಟಿರುವ ಘಟನೆ ಜೆ.ಕೆ ಟೈರ್ಸ್ ಕಾರ್ಖಾನೆಯಲ್ಲಿ ಗುರುವಾರ ಬೆಳಗಿನ ಜಾವ ನಡೆದಿದೆ.
ನಗರದ ಸುಣ್ಣದಕೇರಿ ನಿವಾಸಿ ರವಿ (31) ಎಂಬಾತ ಮೃತ ಕಾರ್ಮಿಕ ಎಂದು ಗುರುತಿಸಲಾಗಿದೆ.
ಈತ ಕಳೆದ 7 ವರ್ಷಗಳಿಂದ ನಗರದ ಕೆ.ಆರ್ ರಸ್ತೆಯಲ್ಲಿರುವ ಜೆ.ಕೆ ಟೈರ್ಸ್‍ನಲ್ಲಿ ದಿನಗೂಲಿ ನೌಕರನಾಗಿ ಕೆಲಸ ಮಾಡುತ್ತಿದ್ದ. ಇಂದು ಬೆಳಗಿನ ಜಾವ ನಿದ್ದೆ ಮಂಪರಿನಲ್ಲಿ ಕೆಲಸ ಮಾಡುತ್ತಿರುವಾಗ ಯಂತ್ರಕ್ಕೆ ಸಿಲುಕಿ ಮೃತಪಟ್ಟಿದ್ದಾರೆ.
ಮೃತದೇಹವನ್ನು ತೆಗೆಯಲು ಆಗುವುದಿಲ್ಲ ತುಂಡರಿಸಿದ ದೇಹವನ್ನು ಕೊಡಲಾಗುವುದು ಎಂದು ಕಂಪೆನಿಯವರು ಹೇಳುತ್ತಿದ್ದಂತೆ ಆಕ್ರೋಶಗೊಂಡ ಮೃತನ ಮನೆಯವರು, ನಮ್ಮ ಮಗನ ದೇಹ ಹೇಗಿತ್ತೊ ಅದೇ ರೀತಿ ನೀಡಬೇಕು ಎಂದು ಪ್ರತಿಭಟಸಿದರು. ಇದಿಂದ ಕೆಲಕಾಲ ಗೊಂದಲಕ್ಕೀಡಾದ ಅಧಿಕಾರಿಗಳು ಇಡೀ ಯಂತ್ರವನ್ನು ಬಿಚ್ಚಿ ನಂತರ ಮೃತದೇಹವನ್ನು ಹೊರತೆಗೆದು ಕುಟುಂಬದವರಿಗೆ ನೀಡಿದರು.
ದೇಶದಲ್ಲಿಯೇ ಹೆಸರು ಮಾಡಿರುವ ಇಂತಹ ದೊಡ್ಡ ಕಾರ್ಖಾನೆಯಲ್ಲಿಯೇ ಕಾರ್ಮಿಕರಿಗೆ ರಕ್ಷಣೆ ಇಲ್ಲ ಎಂದರೆ ಇನ್ನು ಸಣ್ಣ ಪುಟ್ಟ ಕಾರ್ಖಾನೆಯ ಸ್ಥಿತಿ ಏನು ಎಂದು ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದರು.
ವಿಚಾರ ತಿಳಿದು ಕಾರ್ಖಾನೆಗೆ ಬಂದ ಕುಟುಂಬಸ್ಥರನ್ನು ಆಡಳಿತ ಸಿಬ್ಬಂದಿ ಒಳಗೆ ಬಿಡಲು ನಿರಾಕರಿಸಿದರು ಎನ್ನಲಾಗಿದೆ. ಇದರಿಂದ ಕೆಲಕಾಲ ಜೆ.ಕೆ ಟೈರ್ಸ್‍ನ ಕಾರ್ಖಾನೆ ಎದುರು ಬಿಗುವಿನ ವಾತಾವರಣ ಉಂಟಾಗಿತ್ತು. ಸ್ಥಳಕ್ಕೆ ಮೇಟಗಳ್ಳಿ ಠಾಣಾ ಪೆÇಲೀಸರು ಆಗಮಿಸಿ ಪರಿಸ್ಥಿತಿಯನ್ನು ನಿಯಂತ್ರಿಸಿದರು.
ಕುಟುಂಬಕ್ಕೆ ಹೆಚ್ಚಿನ ಪರಿಹಾರ ನೀಡಬೇಕೆಂದು ಕಾರ್ಖಾನೆಯ ಮುಂದೆ ಪ್ರತಿಭಟನೆ ನಡೆಸಿದರು. ಇದಕ್ಕೆ ಸ್ಪಂಧಿಸಿದ ವ್ಯವಸ್ಥಾಪಕ ನಿರ್ದೇಶಕರು ಈತನ ಸಹೋದರನಿಗೆ ಕಂಪೆನಿ ಕಾರ್ಮಿಕನಾಗಿ ಕೆಲಸ ಕೊಡುವುದಾಗಿ ಭರವಸೆ ನೀಡಿದ್ದಾರೆ.
ಈ ಸಂಬಂಧ ಮೇಟಗಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.







