ನ.18: ಕಂಬಳ ಕುರಿತಾದ ಟೆಲಿಚಿತ್ರ ‘ತುಳುನಾಡ ಕಂಬಳ’ ಬಿಡುಗಡೆ
ಮಂಗಳೂರು, ನ.16: ತುಳುನಾಡಿನ ಜಾನಪದ ಕ್ರೀಡೆಗಳಲ್ಲಿ ಒಂದಾದ ಕಂಬಳ ಕುರಿತಾದ ಟೆಲಿಚಿತ್ರ ಱತುಳುನಾಡ ಕಂಬಳೞನ.18ರಂದು ಸಂಜೆ 5ಗಂಟೆಗೆ ಮಂಗಳೂರಿನ ಡಾನ್ ಬಾಸ್ಕೋ ಹಾಲ್‌ನಲ್ಲಿ ಬಿಡುಗಡೆಯಾಗಲಿದೆ ಎಂದು ಸಿನಿಮಾದ ನಾಯಕ ನಟ ಆಶಿಕ್ ಮಾಡೂರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತುಳುನಾಡಿನ ಹೆಮ್ಮೆಯ ಕ್ರೆಡೆ ಕಂಬಳವನ್ನು ನಿಷೇಧಿಸುವ ಪ್ರಸಾತಿಪ ಬಂದಾಗ ಹೋರಾಟದ ಮೂಲಕ ಮತೆತಿ ತುಳುನಾಡಿನಲ್ಲಿ ಕಂಬಳ ನಡೆಯಲು ಅನುಮತಿ ದೊರಕಿದೆ. ಇಂತಹ ಕ್ರೀಡೆ ಮುಂದಿನ ಪೀಳಿಗೆಗೆ ಉಳಿಯಬೇಕಾಗಿದೆ. ಇಂತಹ ವಿಚಾರಗಳನ್ನೇ ಕಥಾವಸ್ತುವನ್ನಾಗಿಸಿಕೊಂಡ ಈ ಟೆಲಿಚಿತ್ರ ನಿರ್ಮಿಸಲಾಗಿದ್ದು, ಹರ್ಷಿತ್ ಸೋಮೇಶ್ವರ ಟೆಲಿಚಿತ್ರವನ್ನು ರಚಿಸಿ, ನಿರ್ದೇಶಿಸಿದ್ದಾರೆ ಎಂದರು.
ಚಿತ್ರದ ಗೌರವ ಪಾತ್ರದಲ್ಲಿರುವ ರವೀಂದ್ರ ಶೆಟ್ಟಿ ಉಳಿದೊಟ್ಟು ಮಾತನಾಡಿ, ಕಂಬಳವನ್ನು ಉಳಿಸುವ ನಿಟ್ಟಿನಲ್ಲಿ ಒಬ್ಬ ಯುವಕನ ಪರಿಶ್ರಮವನ್ನು ಎಳೆಎಳೆಯಾಗಿ ಬಿಚ್ಚಿಟ್ಟಿರುವುದೇ ಈ ಟೆಲಿಚಿತ್ರದ ಮುಖ್ಯ ಉದ್ದೇಶ ಎಂದರು.
ರಕ್ಷಣ್ ಮಾಡೂರು, ಸಂದೀಪ್ ಸೋಮೇಶ್ವರ, ಸದಾಶಿವ ಶೆಟ್ಟಿ, ದೀಪಕ್‌ದಾಸ್, ಕೀರ್ತನ್ ಕುಮಾರ್, ಸನೂಪ್ ಕುಮಾರ್, ಮಹೇಶ್ ಕೊಲ್ಯ, ನಿಖಿಲ್ ಸೋಮೇಶ್ವರ, ಲಕ್ಷ್ಮಿತಾ ಸೋಮೇಶ್ವರ, ದಿಯಾ ಕೈಕಂಬ, ಬೇಬಿ ಶ್ರೇಯಾ ತಾರಾಗಣದಲ್ಲಿದ್ದಾರೆ ಎಂದು ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಹರ್ಷಿತ್ ಕುಮಾರ್, ಆಶಿಕ್ ಮಾಡೂರು, ರಕ್ಷಣ್ ಮಾಡೂರು, ನಾರಾಯಣ ಕುಂಪಲ ಉಪಸ್ಥಿತರಿದ್ದರು.







