ನ.19ರಂದು ಪ್ರೆಸ್ಟೀಜ್ ಎಂಥಸಿಯಾ-2017

ಮಂಗಳೂರು, ನ.16: ಪ್ರೇಸ್ಟಿಜ್ ಇಂಟರ್‌ನ್ಯಾಶನಲ್ ಸ್ಕೂಲ್ ಮತ್ತು ಪ.ಪೂ. ಕಾಲೇಜು ವತಿಯಿಂದ ಸಾಹಿತ್ಯ ಕಲಾ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳು, ಆಟೋಟಗಳು ಹಾಗೂ ವಿವಿಧ ಖಾದ್ಯಗಳನ್ನು ಪ್ರದರ್ಶಿಸುವ ಪ್ರೆಸ್ಟೀಜ್ ಎಂಥಸಿಯಾ-2017 ಕಾರ್ಯಕ್ರಮ ನ.19ರಂದು ಬೆಳಗ್ಗೆ 9 ಗಂಟೆಗೆ ಕಾಲೇಜು ಆವರಣದಲ್ಲಿ ನಡೆಯಲಿದೆ.
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಿಯು ಕಾಲೇಜಿನ ಡೀನ್ ಶೋಭಾ ಇ.ಕೆ., ಎಂಥಸಿಯಾ-2017ನಲ್ಲಿ ವಿವಿಧ ವಿಭಾಗಗಳಲ್ಲಿ ಹಲವು ಸ್ಪರ್ಧೆಗಳನ್ನು ಆಯೋಜಿಸ ಲಾಗಿದೆ. ಈ ಕಾರ್ಯಕ್ರಮದ ತಯಾರಿಯ ಮೂಲಕ ವಿದ್ಯಾರ್ಥಿಗಳಲ್ಲಿ ಅಡಗಿರುವ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವುದು ಕಾರ್ಯಕ್ರಮದ ಉದ್ದೇಶ ಎಂದು ಅವರು ಹೇಳಿದರು.
ಈ ಕಾರ್ಯಕ್ರಮದಲ್ಲಿ ವಿವಿಧ ಸಂಸ್ಥೆಗಳ ವಿದ್ಯಾರ್ಥಿಗಳು, ಸಾರ್ವಜನಿಕರು ಭಾಗವಹಿಸಬಹುದಾಗಿದ್ದು, ತಮ್ಮ ಹೆಸರುಗಳನ್ನು ಆ ದಿನ ಬೆಳಗ್ಗೆ ಕಾಲೇಜಿನಲ್ಲಿ ನೊಂದಾಯಿಸಿ ಕೊಳ್ಳಬೇಕು. ಕಾರ್ಯಕ್ರಮವನ್ನು ಸಚಿವ ಬಿ.ರಮಾನಾಥ ರೈ ಉದ್ಘಾಟಿಸಲಿರುವರು. ಮುಖ್ಯ ಅತಿಥಿಗಳಾಗಿ ಮನಪಾ ಮುಖ್ಯ ಸಚೇತಕ ಎಂ.ಶಶಿಧರ್ ಹೆಗ್ಡೆ, ಕಾರ್ಪೋರೇಟರ್ ಜಿ.ಸುರೇಂದ್ರ ಆಗಮಿಸಲಿದ್ದು, ಪ್ರೇಸ್ಟಿಜ್ ಇಂಟರ್‌ನ್ಯಾಶನಲ್ ಸ್ಕೂಲ್ ಮತ್ತು ಪ.ಪೂ. ಕಾಲೇಜಿನ ಅಧ್ಯಕ್ಷ ಹೈದರ್ ಆಲಿ ಕೆ. ಅಧ್ಯಕ್ಷತೆ ವಹಿಸಲಿರುವರು ಎಂದು ಅವರು ತಿಳಿಸಿದರು.
ಸಾರ್ವಜನಿಕ ಸಂಪರ್ಕಾಧಿಕಾರಿ ಅಕ್ಷತಾ ಲತೀಶಾ ಶೆಟ್ಟಿ, ಪ್ರೈಮರಿ ಸಂಯೋಜಕಿ ಶರ್ಮಿಳಾ ಕುಮಾರ್, ಹೈಸ್ಕೂಲ್ ಸಂಯೋಜಕಿ ಶಬನಾ ಸೈಯದ್, ಹಾಯರ್ ಪ್ರೈಮರಿ ಸಂಯೋಜಕಿ ತುಳ್ಸಿ ಸಿ.ಬಿ. ಉಪಸ್ಥಿತರಿದ್ದರು.







