ಕರಾವಳಿ ಫಾರ್ಮಸಿ ಕಾಲೇಜು ವತಿಯಿಂದ ಆರೋಗ್ಯ ಜನಜಾಗೃತಿ ಜಾಥಾ

ಮಂಗಳೂರು, ನ.16: ಉತ್ತಮ ಆರೋಗ್ಯಕ್ಕಾಗಿ ಆರೋಗ್ಯ ಸಂರಕ್ಷಣೆಯ ಸೂತ್ರಗಳನ್ನು ಪರಿಪಾಲಿಸಬೇಕು. ಕೇವಲ ದೈಹಿಕ ಆರೋಗ್ಯ ಮಾತ್ರ ಆರೋಗ್ಯವೆಂದು ಭಾವಿಸುವುದು ತಪ್ಪುಗ್ರಹಿಕೆಯಾಗಿದೆ. ದೈಹಿಕವಾಗಿ ಸದೃಢವಾಗಬೇಕಾದರೆ ಮಾನಸಿಕವಾಗಿ ಮತ್ತು ಬೌದ್ಧಿಕವಾಗಿ ಆರೋಗ್ಯದಿಂದ ಇರುವುದು ಕೂಡಾ ಅಷ್ಷೇ ಮುಖ್ಯ ಎಂದು ಕರಾವಳಿ ಕಾಲೇಜುಗಳ ಸಮೂಹದ ಆಡಳಿತ ಮಂಡಳಿ ಹಾಗೂ ಜಿ.ಆರ್.ಎಜುಕೇಶನ್ ಟ್ರಸ್ಟ್ (ರಿ)ನ ಸ್ಧಾಪಕಾಧ್ಯಕ್ಷ ಎಸ್.ಗಣೇಶ್ ರಾವ್ ಹೇಳಿದರು.
ನಗರದ ಕರಾವಳಿ ಫಾರ್ಮಸಿ ಕಾಲೇಜಿನಲ್ಲಿ ಹಮ್ಮಿಕೊಂಡಿರುವ ರಾಪ್ಟ್ರೀಯ ಫಾರ್ಮಸಿ ಸಪ್ತಾಹದ ಅಂಗವಾಗಿ ಮಂಗಳೂರಿನ ಜ್ಯೋತಿ ವೃತ್ತದಿಂದ ನೆಹರೂ ಮೈದಾನದವರೆಗೆ ಗುರುವಾರ ಏರ್ಪಡಿಸಲಾದ ಆರೋಗ್ಯ ಜನಜಾಗೃತಿ ಜಾಥಾವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕರಾವಳಿ ಫಾರ್ಮಸಿ ಕಾಲೇಜಿನ ಪ್ರಾಂಶುಪಾಲ ಡಾ.ನಾರಾಯಣ ಸ್ವಾಮಿ ಉಪಸ್ಧಿತರಿದ್ದರು. ಶಬ್‌ನಮ್ ಸ್ವಾಗತಿಸಿದರು. ಸಲ್ಮಾನ್ ವಂದಿಸಿದರು.
Next Story





