‘ನೈಜ ನಾಗರಿಕರು’ ಒಪ್ಪಿದರೆ ಮಾತ್ರ ರೋಹಿಂಗ್ಯನ್ನರ ಸ್ವೀಕಾರ: ಮ್ಯಾನ್ಮಾರ್ ಸೇನಾ ಮುಖ್ಯಸ್ಥ

ಯಾಂಗನ್ (ಮ್ಯಾನ್ಮಾರ್), ನ. 16: ರೊಹಿಂಗ್ಯಾ ನಿರಾಶ್ರಿತರನ್ನು ‘ಮ್ಯಾನ್ಮಾರ್‌ನ ನಿಜವಾದ ನಾಗರಿಕರು’ ಸ್ವೀಕರಿಸಲು ಸಿದ್ಧವಾಗುವವರೆಗೆ ಅವರು ರಖೈನ್ ರಾಜ್ಯಕ್ಕೆ ಮರಳುವಂತಿಲ್ಲ ಎಂದು ಮ್ಯಾನ್ಮಾರ್‌ನ ಸೇನಾ ಮುಖ್ಯಸ್ಥ ಮಿನ್ ಆಂಗ್ ಹಲೈಂಗ್ ಗುರುವಾರ ಹೇಳಿದ್ದಾರೆ.
ಇದು ಸೇನೆಯ ದೌರ್ಜನ್ಯಕ್ಕೆ ಬೆದರಿ ಬಾಂಗ್ಲಾದೇಶಕ್ಕೆ ಪಲಾಯನಗೈದಿರುವ ಲಕ್ಷಾಂತರ ರೊಹಿಂಗ್ಯಾ ನಿರಾಶ್ರಿತರನ್ನು ವಾಪಸ್ ಕರೆಸಿಕೊಳ್ಳುವುದಾಗಿ ಹೇಳುತ್ತಿರುವ ಮ್ಯಾನ್ಮಾರ್ ಸರಕಾರದ ಪ್ರಾಮಾಣಿಕತೆಯನ್ನು ಸಂಶಯದಿಂದ ನೋಡುವಂತೆ ಮಾಡಿದೆ.
ರಖೈನ್ ರಾಜ್ಯದಲ್ಲಿರುವ ಹೆಚ್ಚಿನ ಬೌದ್ಧರು ಮುಸ್ಲಿಮರನ್ನು ದ್ವೇಷಿಸುತ್ತಾರೆ ಹಾಗೂ ಅವರ ಪೈಕಿ ಹೆಚ್ಚಿನವರು ರೊಹಿಂಗ್ಯಾ ವಿರುದ್ಧದ ಕಾರ್ಯಾಚರಣೆಯಲ್ಲಿ ಸೇನೆಗೆ ಸಹಾಯ ಮಾಡಿದ ಆರೋಪವನ್ನು ಎದುರಿಸುತ್ತಿದ್ದಾರೆ.
Next Story





