ಸ್ಪೈಸ್‌ಜೆಟ್ ವಿಮಾನದಲ್ಲಿ ಬೆಂಕಿ ಆಕಸ್ಮಿಕ

ಹೊಸದಿಲ್ಲಿ, ನ. 17: ಡಾಕಾದ ಹಝ್ರತ್ ಶಹಜ್‌ಲಾಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸ್ಪೈಸ್ ಜೆಟ್ ವಿಮಾನಕ್ಕೆ ಶುಕ್ರವಾರ ಬೆಂಕಿ ಹತ್ತಿಕೊಂಡಿತು. ಕೂಡಲೇ ಪ್ರಯಾಣಿಕರು ಹಾಗೂ ಸಿಬ್ಬಂದಿಯನ್ನು ವಿಮಾನದಿಂದ ತೆರವುಗೊಳಿಸಲಾಯಿತು. ವಿಮಾನ ಹಾರಾಟ ಆರಂಭಿಸಿ ಟ್ಯಾಕ್ಸಿವೇಯಿಂದ ರನ್‌ವೇಯತ್ತ ತೆರಳುತ್ತಿದ್ದ ಸಂದರ್ಭ ಬೆಳಗ್ಗೆ 10.40ರ ಹೊತ್ತಿಗೆ ಈ ಘಟನೆ ಸಂಭವಿಸಿದೆ. ಕೋಲ್ಕತ್ತಾಕ್ಕೆ ತೆರಳುತ್ತಿದ್ದ ಈ ವಿಮಾನದಲ್ಲಿ 74 ಮಂದಿ ಪ್ರಯಾಣಿಕರಿದ್ದರು.
ಈ ಬಗ್ಗೆ ಪರಿಶೀಲನೆ ನಡೆಸಲಾಗುವುದು. ವಿಮಾನದ ಎದುರಿನ ಚಕ್ರಕ್ಕೆ ಬೆಂಕಿ ಹತ್ತಿಕೊಂಡಿತು. ಕೂಡಲೇ ಅಗ್ನಿಶಾಮಕ ದಳದವರನ್ನು ಕರೆಸಿ ಬೆಂಕಿ ನಂದಿಸಲಾಯಿತು ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.
ಇದರಿಂದಾಗಿ ವಿಮಾನ ಹಾರಾಟಕ್ಕೆ ಒಂದು ಗಂಟೆಗಳ ಕಾಲ ಅಡ್ಡಿ ಉಂಟಾಯಿತು.
Next Story





