ನ. 19: ಪಾಪ್ಯುಲರ್ ಪ್ರಂಟ್ ನಿಂದ ತುಂಬೆಯಲ್ಲಿ ರಕ್ತದಾನ ಶಿಬಿರ
ಫರಂಗಿಪೇಟೆ, ನ 18: ಪಾಪ್ಯುಲರ್ ಪ್ರಂಟ್ ಆಫ್ ಇಂಡಿಯಾ ಬಿ.ಸಿ.ರೋಡ್ ವಲಯ ಮತ್ತು ಫಾದರ್ ಮುಲ್ಲರ್ ಅಸ್ಪತ್ರೆ ಮಂಗಳೂರು ಇದರ ಸಹಯೋಗದಲ್ಲಿ ನ. 19 ರಂದು ತುಂಬೆಯ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ರಕ್ತದಾನ ಶಿಬಿರ ಹಮ್ಮಿಕೊಂಡಿದೆ.
ಶಿಬಿರದ ಉದ್ಘಾಟನೆಯನ್ನು ಪಿ.ಎಫ್.ಐ. ಬಂಟ್ವಾಳ ತಾಲೂಕು ಅದ್ಯಕ್ಷ ಇಜಾಝ್ ಅಹಮದ್ ಮಾಡಲಿದ್ದಾರೆ, ಅದ್ಯಕ್ಷತೆಯನ್ನು ವಲಯಾದ್ಯಕ್ಷ ಇಮ್ತಿಯಾಝ್ ತುಂಬೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಬಿಎ ಸಮೂಹ ಸಂಸ್ಥೆ ನಿರ್ದೇಶಕರಾದ ಡಾ ಬಿ ಅಹಮದ್ ಹಾಜಿ ಮೊಹಿದ್ದೀನ್, ಜಿಲ್ಲಾ ಕುಟುಂಬ ಕಲ್ಯಾಣ ಇಲಾಖೆ ಮಂಗಳೂರು ಅಧಿಕಾರಿಯಾದ ಡಾ ಸಿಕಂದರ್ ಪಾಶಾ, ತುಂಬೆ ಪಿಡಿಒ ಸ್ರೀಮತಿ ಚಂದ್ರಾವತಿ, ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆ ಆಡಳಿತಾಧಿಕಾರಿ ರೋಹನ್ ಕ್ರಾಸ್ತಾ, ಅರಫಾ ಗ್ರೂಪ್ ಮಾಲಕ ಸಾವುಂಞಿ, ಮೊಹಿದ್ದೀನ್ ಜುಮಾ ಮಸೀದ್ ತುಂಬೆ ಅದ್ಯಕ್ಷ ಅಝೀಝ್ ತುಂಬೆ, ತುಂಬೆ ಗ್ರಾಮ ಪಂಚಾಯತ್ ಸದಸ್ಯ ಝಹೂರ್ ತುಂಬೆ ಮುಂತಾದವರು ಬಾಗವಹಿಸಲಿಕ್ಕಿದ್ದಾರೆ ಎಂದು ಪಿ.ಎಫ್.ಐ ಬಿಸಿರೋಡ್ ವಲಯ ಕಾರ್ಯದರ್ಶಿ ಶಬೀರ್ ತಲಪಾಡಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.





