ಪತಿಯಿಂದಲೇ ಪತ್ನಿಯ ಇಮೇಲ್ ಹ್ಯಾಕ್: ದೂರು
ಉಡುಪಿ, ನ.17: ಪತ್ನಿಯ ಇಮೇಲ್ ಖಾತೆಯನ್ನು ಹ್ಯಾಕ್ ಮಾಡಿರುವ ಪತಿಯ ವಿರುದ್ಧ ಉಡುಪಿಯ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಂಕರಪುರ ದುರ್ಗಾನಗರದ ಚೆರಿಲ್ ಪೌಲ್ ಮಾರ್ಟಿಸ್(35) ಹಾಗೂ ಅವರ ಪತಿ ಅಶೋಕ್ ಜೋನ್ ಸಿಕ್ವೇರ ಪ್ರಸ್ತುತ ಪ್ರತ್ಯೇಕವಾಗಿ ವಾಸಿಸುತ್ತಿದ್ದು, ಅ.26ರಂದು ರಾತ್ರಿ ವೇಳೆ ಚೆರಿಲ್ ಪೌಲ್‌ರ ಇ-ಮೇಲ್ ಖಾತೆಯನ್ನು ಪತಿ ಅಶೋಕ್ ಹ್ಯಾಕ್ ಮಾಡಿರುವುದಾಗಿ ದೂರಲಾಗಿದೆ.
ಇದರಿಂದಾಗಿ ಚೆರಿಲ್ ಪೌಲ್ ಅವಶ್ಯಕವಾಗಿರುವ ಎಂಪ್ಲಾಯರ್ ಇನ್ ಫಾರ್ಮೆಶನ್, ಎಂಪ್ಲಾಯರ್ ಕಾಂಟೆಕ್ಟ್ ಡಿಟೈಲ್ಸ್, ಸ್ಯಾಲರಿ ಇನ್‌ಫಾರ್ಮೆಶನ್ ಅಶೋಕ್‌ಗೆ ಲಭಿಸುತ್ತಿದೆ. ಇದು ಮುಂದಕ್ಕೆ ತೊಂದರೆ ಆಗಬಹುದು ಎಂಬುದಾಗಿ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
Next Story





