ಮಳೆ ನೀರುಕೊಯ್ಲು ಪಿಲ್ಟರ್‍ಗೆ ಅಕ್ವಾ ಫೌಂಢೇಶನ್ ಏಕ್ಸಲೆನ್ಸ್ ಅವಾರ್ಡ್ 2017 ಪ್ರಶಸ್ತಿ

ಚಿಕ್ಕಮಗಳೂರು, ನ.17:ಚಿಕ್ಕಮಗಳೂರಿನ ಫಾರ್ಮ್‍ಲ್ಯಾಂಡ್ ರೈನ್‍ವಾಟರ್ ಹಾರ್ವೆಸ್ಟಿಂಗ್ ಸಿಸ್ಟಮ್ಸ್ ಸಂಸ್ಥೆ ತಯಾರಿಸಿದ ಸ್ವಯಂ ಶುಧ್ಧಿಕರಣ ಹೊಂದಿದ ಮನೆ ಮೇಲ್ಛಾವಣಿಯ ಮಳೆ ನೀರುಕೊಯ್ಲು ಪಿಲ್ಟರ್‍ಗೆ ಕೈಗಾರಿಕಾ ತಂತ್ರಜ್ಞಾನ ಅವಿಷ್ಕಾರ ಅಭಿವೃದ್ದಿ ವಿಭಾಗದಲ್ಲಿ ಅಕ್ವಾ ಫೌಂಢೇಶನ್ ಏಕ್ಸಲೆನ್ಸ್ ಅವಾರ್ಡ್ 2017 ಪ್ರಶಸ್ತಿ ಲಭಿಸಿದೆ.
ನವದೆಹಲಿಯಲ್ಲಿ ನಡೆದ 11 ನೇ ವಿಶ್ವಅಕ್ವಾ (ನೀರು) ಕಾಂಗ್ರೆಸ್ 2017 ಸಮ್ಮೇಳನದಲ್ಲಿ ಭಾರತದ ಖ್ಯಾತ ವಿದ್ವಾಂಸರು ಹಾಗೂ ಪರಿಸರ ಹೋರಾಟಗಾರರು ಆದ ಡಾ. ವಂದನ ಶಿವ ರವರು ಸಂಸ್ಥೆಯ ನಿರ್ದೇಶಕ ಮೈಕಲ್ ಸದಾನಂದ ಬ್ಯಾಪ್ಟಿಸ್ಟ್ ಹಾಗೂ ವಿಜಯರಾಜರವರಿಗೆ ಪ್ರಶಸ್ತಿ ಪ್ರಧಾನ ಮಾಡಿದರು.
ಅಕ್ವಾಏಕ್ಸಲೆನ್ಸ್ ಪ್ರಶಸ್ತಿಯನ್ನು ಅಕ್ವಾ ಫೌಂಢೇಶನ್ ನೀಡುವ ಅತ್ಯುನ್ನತ ಪ್ರಶಸ್ತಿಯಾಗಿದೆ. ಇದನ್ನು ನೀರು, ಪರಿಸರ ಸಂರಕ್ಷಣೆ, ಶಕ್ತಿ ಉತ್ಪಾದನೆ, ಭೂ ವಿಜ್ಞಾನ, ಪರಿಸರ ಮಾಲಿನ್ಯತಡೆ, ವಾಯು ಮಂಡಲಿ ಹಾಗೂ ಇನ್ನಿತರ ಭೂ ಮಂಡಲ ಸಂರಕ್ಷಣಾ ವಿಜ್ಞಾನಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಮಾಡಿದ, ಅಸಾಧಾರಣ ಸಾಧನೆಗಳಿಗಾಗಿ ನೀಡಲಾಗುತ್ತಿದೆ.
ಫಾರ್ಮ್‍ಲ್ಯಾಂಡ್ ಮಳೆ ನೀರುಕೊಯ್ಲು ಸಂಸ್ಥೆಯು ಕಳೆದ ಒಂದೂವರೆ ದಶಕದಿ0ದ ಮನೆ ಮೇಲ್ಛಾವಣಿ ಮಳೆ ನೀರು ಸಂಗ್ರಹ ಮತ್ತು ಅಂತರಜಲ ಬಳಕೆ ಅಭಿವೃದ್ದಿಗಾಗಿ ವಿ ವೈರ್ ತಂತ್ರಜ್ಞಾನ ಬಳಸುತ್ತಿದೆ. ಈ ಎರಡು ತಂತ್ರಜ್ಞಾನವನ್ನು ಸಾರ್ವಜನಿಕ ಹಾಗೂ ಖಾಸಗಿ ವಲಯಗಳಲ್ಲಿ ಬಳಸಿ ಹಚ್ಚಿನ ಸಾಧನೆ ಮಾಡಲಾಗಿದೆ.
ಸಂಸ್ಥೆಯು ಚಿಕ್ಕಮಗಳೂರಿನಲ್ಲಿ ಸಂಶೋಧನೆ ಮತ್ತುಅಭಿವೃದ್ದಿ ಹಾಗೂ ಹೈಡ್ರಾಲಿಕ್ ಪರೀಕ್ಷಾ ಪ್ರಯೋಗಾಲಯವನ್ನು ಆರಂಭಿಸಿದೆ. ಇದುಆತ್ಯಾಧುನಿಕ ತಂತ್ರಜ್ಞಾನ ಹೊಂದಿದ್ದು ವಿವಿಧ ದೇಶದ ವಿದ್ಯಾರ್ಥಿಗಳಿಗೆ ನೀರು ಸಂಗ್ರಹಣೆಯ ವಿಷಯದಲ್ಲಿ ಸಂಶೋಧನೆ ಕೈಗೊಳ್ಳಲು ಮಾಡಿರುವುದು ಸಂಸ್ಥೆಯಸಾಧನೆಯಾಗಿದೆ. ಇದುವರೆವಿಗೂ 1.5 ಲಕ್ಷಕ್ಕಿಂತಲೂ ಹೆಚ್ಚು ಮನೆ ಮೇಲ್ಛಾವಣಿ ಮಳೆ ನೀರು ಸಂಗ್ರಹ ಮತ್ತು 13,800 ಅಂತರಜಲ ವೃಧ್ಧಿಸುವ ಕಾರ್ಯಗಳನ್ನು ದೇಶಾದ್ಯಂತ ಕೈಗೊಂಡಿದೆ.
ಸಂಸ್ಥೆಯ ಧ್ಯೇಯ "ನೀರು ಉಳಿಸಿ" ಗೆ 3 ರಾಷ್ಟ್ರೀಯ ಹಾಗೂ 2 ಅಂತರರಾಷ್ಟ್ರೀಯ ಪ್ರಶಸ್ತಿಗಳು ಲಭಸಿವೆ. ಇದರ ಜೊತೆ ಈಗ ಅಕ್ವಾ ಫೌಂಢೇಶನ್‍ನಿಂದ ಅಕ್ವಾ ಫೌಂಢೇಶನ್ ಏಕ್ಸಲೆನ್ಸ ಅವಾರ್ಡ್ 2017 ಪ್ರಶಸ್ತಿ ಲಭಿಸಿದೆ.







