ಉತ್ತರ ಕೊರಿಯದಿಂದ ಪರಮಾಣು ಸಬ್‌ಮರೀನ್ ನಿರ್ಮಾಣ: ಉಪಗ್ರಹ ಚಿತ್ರಗಳಿಂದ ಬಹಿರಂಗ

ವಾಶಿಂಗ್ಟನ್, ನ. 17: ಉತ್ತರ ಕೊರಿಯ ತನ್ನ ಮೊದಲ ಪ್ರಕ್ಷೇಪಕ ಕ್ಷಿಪಣಿ ಸಬ್‌ಮರೀನ್ ನಿರ್ಮಾಣಕ್ಕಾಗಿ ಹಗಲಿರುಳು ಕೆಲಸ ಮಾಡುತ್ತಿರುವುದನ್ನು ಈ ತಿಂಗಳ ಉಪಗ್ರಹ ಚಿತ್ರಗಳು ತೋರಿಸಿವೆ ಎಂದು ವಾಶಿಂಗ್ಟನ್‌ನ '38 ನಾರ್ತ್' ಎಂಬ ಸಂಸ್ಥೆ ಗುರುವಾರ ವರದಿ ಮಾಡಿದೆ.
ಉತ್ತರ ಕೊರಿಯದ ಸೇನಾ ಚಟುವಟಿಕೆಗಳ ಮೇಲೆ ನಿಗಾ ಇಡುವುದಕ್ಕಾಗಿ '38 ನಾರ್ತ್'ನ್ನು ಅಮೆರಿಕ ಸ್ಥಾಪಿಸಿದೆ.
ನವೆಂಬರ್ 5ರಂದು ತೆಗೆಯಲಾದ ಉಪಗ್ರಹ ಚಿತ್ರಗಳು ಉತ್ತರ ಕೊರಿಯದ ಸಿನ್‌ಪೊ ಸೌತ್ ಶಿಪ್‌ಯಾರ್ಡ್‌ನಲ್ಲಿ ನಡೆಯುತ್ತಿರುವ ಚಟುವಟಿಕೆಗಳನ್ನು ತೋರಿಸಿವೆ ಎಂದು ವರದಿಯೊಂದರಲ್ಲಿ 38 ನಾರ್ತ್ ಹೇಳಿದೆ.
''ಶಿಪ್‌ಯಾರ್ಡ್‌ನಲ್ಲಿ ಸಬ್‌ಮರೀನ್‌ನ ಪ್ರೆಶರ್ ಹಲ್‌ನ ಕೆಲವು ಘಟಕಗಳು ಪತ್ತೆಯಾಗಿವೆ. ಇದು ಹೊಸ ಸಬ್‌ಮರೀನ್ ನಿರ್ಮಾಣಗೊಳ್ಳುತ್ತಿರುವುದನ್ನು ಸೂಚಿಸುತ್ತವೆ. ಇದು ಸಿನ್‌ಪೊ-ಕ್ಲಾಸ್ ಪ್ರಾಯೋಗಿಕ ಪ್ರಕ್ಷೇಪಕ ಕ್ಷಿಪಣಿ ಸಬ್‌ಮರೀನ್ ಆಗಿರಬಹುದು'' ಎಂದು ಅದು ಅಭಿಪ್ರಾಯಪಟ್ಟಿದೆ.
Next Story





