ಮಾಲ್ದಾರೆ : ಹುಲಿದಾಳಿಗೆ 2 ಹಸು ಬಲಿ

ಮಡಿಕೇರಿ,ನ.17 : ಮಾಲ್ದಾರೆ ಗ್ರಾಮ ವ್ಯಾಪ್ತಿಯಲ್ಲಿ ನಡೆದ ಹುಲಿ ದಾಳಿಗೆ 2 ಜಾನುವಾರುಗಳು ಬಲಿಯಾಗಿವೆ. ಮಾಲ್ದಾರೆ ಗ್ರಾ.ಪಂ. ಸದಸ್ಯೆ ಇಂದಿರಾ ಎಂಬವರಿಗೆ ಸೇರಿದ ಹಸುಗಳೆರಡನ್ನು ಮೇಯಲು ಬಿಡಲಾಗಿತ್ತು. ಈ ಸಂದರ್ಭ ಅವುಗಳ ಮೇಲೆ ಹುಲಿ ದಾಳಿ ನಡೆಸಿದೆ. ಇದರಿಂದ ಗಂಭೀರವಾಗಿ ಗಾಯಗೊಂಡ ಹಸುಗಳು ಸ್ಥಳದಲ್ಲೆ ಮೃತಪಟ್ಟಿವೆ.
ಸ್ಥಳಕ್ಕೆ ಎ.ಸಿ.ಎಫ್. ಶ್ರೀಪತಿ ಭೇಟಿ ನೀಡಿ, ಶೀಘ್ರದಲ್ಲೆ ಹುಲಿಯನ್ನು ಸೆರೆ ಹಿಡಿಯುವುದಾಗಿ ಗ್ರಾಮಸ್ಥರಿಗೆ ಭರವಸೆ ನೀಡಿದ್ದಾರೆ. ಗ್ರಾಮದಲ್ಲಿ ಆತಂಕ ಮನೆ ಮಾಡಿದೆ.
ಈ ಸಂದರ್ಭ ವಲಯ ಅರಣ್ಯಾಧಿಕಾರಿ ಅಶೋಕ್, ಉಪ ವಲಯ ಅರಣ್ಯಾಧಿಕಾರಿ ಶ್ರೀನಿವಾಸ್, ಸೇರಿದಂತೆ ಅರಣ್ಯಾಧಿಕಾರಿಗಳು ಹಾಜರಿದ್ದರು.
Next Story





