ಇರಾನ್ ಎದುರಿಸಲು ಸೌದಿಗೆ ಸಹಕಾರ ನೀಡಲು ಸಿದ್ಧ: ಇಸ್ರೇಲ್ ಸೇನಾ ಮುಖ್ಯಸ್ಥ

ಜೆರುಸಲೇಂ, ನ. 17: 'ಮಧ್ಯಪ್ರಾಚ್ಯವನ್ನು ನಿಯಂತ್ರಿಸುವ' ಇರಾನ್‌ನ ಯೋಜನೆಗಳನ್ನು ಎದುರಿಸಲು ಸೌದಿ ಅರೇಬಿಯಕ್ಕೆ ಸಹಕಾರ ನೀಡಲು ತನ್ನ ದೇಶ ಸಿದ್ಧವಾಗಿದೆ ಎಂದು ಇಸ್ರೇಲ್‌ನ ಸೇನಾ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಗಡಿ ಐಸನ್‌ಕೊಟ್ ಗುರುವಾರ ಹೇಳಿದ್ದಾರೆ.
''ಇರಾನನ್ನು ಎದುರಿಸುವುದಕ್ಕಾಗಿ ಸೌಮ್ಯವಾದಿ ಅರಬ್ ದೇಶಗಳೊಂದಿಗೆ ನಮ್ಮ ಅನುಭವ ಹಾಗೂ ಗುಪ್ತಚರ ಮಾಹಿತಿಯನ್ನು ಹಂಚಿಕೊಳ್ಳಲು ನಾವು ಸಿದ್ಧರಿದ್ದೇವೆ'' ಎಂದು ಇಸ್ರೇಲ್ ಸೇನಾ ಮುಖ್ಯಸ್ಥ ಹೇಳಿರುವುದಾಗಿ ಸೌದಿ ಅರೇಬಿಯದ ಸುದ್ದಿ ವೆಬ್‌ಸೈಟ್ 'ಇಲಾಫ್' ವರದಿ ಮಾಡಿದೆ.
ಸೌದಿ ಅರೇಬಿಯದೊಂದಿಗೆ ಯಾವುದೇ ಮಾಹಿತಿಯನ್ನು ಹಂಚಿಕೊಳ್ಳಲಾಗಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ''ಅಗತ್ಯವಿದ್ದರೆ ಮಾಹಿತಿಯನ್ನು ಹಂಚಿಕೊಳ್ಳಲು ನಾವು ಸಿದ್ಧರಿದ್ದೇವೆ. ನಮ್ಮ ಮತ್ತು ಅವರ ನಡುವೆ ಹಲವಾರು ಸಮಾನ ಹಿತಾಸಕ್ತಿಗಳಿವೆ'' ಎಂದರು.
Next Story





