Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ವೈದ್ಯಕೀಯ ಪವಾಡದಿಂದ ಎರಡು ಬಾರಿ ಜನಿಸಿದ...

ವೈದ್ಯಕೀಯ ಪವಾಡದಿಂದ ಎರಡು ಬಾರಿ ಜನಿಸಿದ ಮಗು

ವಾರ್ತಾಭಾರತಿವಾರ್ತಾಭಾರತಿ19 Nov 2017 4:30 PM IST
share
ವೈದ್ಯಕೀಯ ಪವಾಡದಿಂದ ಎರಡು ಬಾರಿ ಜನಿಸಿದ ಮಗು

ಒಂದು ವರ್ಷದ ಹಿಂದೆ ಅಧಿಕೃತವಾಗಿ ಈ ಧರೆಯಲ್ಲಿ ಅವತರಿಸಿರುವ ಪುಟ್ಟ ಬಾಲಕಿಯೀಗ ಆರೋಗ್ಯವಂತಳಾಗಿ ಬೆಳೆಯುತ್ತಿದ್ದಾಳೆ. ಇದರಲ್ಲೇನು ವಿಶೇಷ ಎನ್ನುತ್ತೀರಾ? ಈ ಮಗು ಎರಡು ಬಾರಿ ಜನಿಸಿದ್ದು, ಇದಕ್ಕಾಗಿ ಆಧುನಿಕ ವೈದ್ಯಕೀಯಕ್ಕೆ ಕೃತಜ್ಞತೆಗಳನ್ನು ಹೇಳಬೇಕಾಗಿದೆ.

ಅಮೆರಿಕದ ಹ್ಯೂಸ್ಟನ್‌ನಲ್ಲಿರುವ ಮಕ್ಕಳ ಆಸ್ಪತ್ರೆಯ ಸರ್ಜನ್‌ಗಳಾದ ಡ್ಯಾರೆಲ್ ಕಾಸ್ ಮತ್ತು ಒಲುಯಿಂಕ್ ಒಲ್ಟೊಯಿ ಅವರು ಕಳೆದ ವರ್ಷ ಸೋನೊಗ್ರಾಮ್ ಪರೀಕ್ಷೆಯಲ್ಲಿ ಆಗ ಕೇವಲ 23 ವಾರ ಪ್ರಾಯವಾಗಿದ್ದ ಲಿನ್ಲೀ ಹೋಪ್‌ಳ ಮಿದುಳು ಬಳ್ಳಿಯ ಬುಡದಲ್ಲಿ ಭಾರೀ ಗಡ್ಡೆಯೊಂದು ಬೆಳೆದಿರುವುದು ಪತ್ತೆಯಾದ ಬಳಿಕ ಆ ಶಿಶುವನ್ನು ತಾಯಿ ಮಾರ್ಗರೆಟ್ ಬೋಮರ್(38)ಳ ಗರ್ಭಕೋಶದಿಂದ ಹೊರಕ್ಕೆ ತೆಗೆದಿದ್ದರು. ಆಗ ಮೊದಲ ಬಾರಿಗೆ ಶಿಶು ಈ ಧರೆಗಿಳಿದಿತ್ತು.

ಅದು(ಗಡ್ಡೆ) ಹೆಚ್ಚುಕಡಿಮೆ ಇನ್ನೊಂದು ತಲೆಯಂತೆ ಕಾಣುತ್ತಿತ್ತು ಎಂದು ಮಾರ್ಗರೆಟ್ ನೆನಪಿಸಿಕೊಂಡಿದ್ದಾಳೆ.

ಗರ್ಭಕೋಶದಲ್ಲಿನ ಶಿಶುವಿನ ಮಿದುಳು ಬಳ್ಳಿಯಲ್ಲಿದ್ದ ಗಡ್ಡೆ ಇನ್ನೂ ಬೆಳೆಯುತ್ತಲೇ ಇತ್ತು. ಗಡ್ಡೆಯ ಬೃಹತ್ ಗಾತ್ರದಿಂದಾಗಿ ಈ ಶಿಶು ಬದುಕುಳಿಯುವುದಿಲ್ಲ ಎಂದು ವೈದ್ಯರು ಮಾರ್ಗರೆಟ್‌ಗೆ ತಿಳಿಸಿದ್ದರು.

ಸ್ಯಾಕ್ರೋಕೊಸಿಜೀಲ್ ಟೆರಾಟೋಮಾ ಎಂದು ವೈದ್ಯಕೀಯ ಭಾಷೆಯಲ್ಲಿ ಹಣೆಪಟ್ಟಿ ಅಂಟಿಸಿಕೊಂಡಿದ್ದ ಈ ಟ್ಯೂಮರ್ ಭ್ರೂಣದಿಂದ ರಕ್ತವನ್ನು ಸೆಳೆಯುತ್ತಿತ್ತು ಮತ್ತು ಇದರಿಂದಾಗಿ ಹೃದಯಾಘಾತದ ಅಪಾಯ ಹೆಚ್ಚಾಗಿತ್ತು.

ಅದು ಎಂತಹ ಬಿಕ್ಕಟ್ಟನ್ನು ಸೃಷ್ಟಿಸಿತ್ತೆಂದರೆ ವೈದ್ಯರು ಕಾಯುವಂತಿರಲಿಲ್ಲ, ಶಿಶು ಬದುಕುಳಿಯಬೇಕೆಂದರೆ ಅವರು ತಕ್ಷಣವೇ ಶಸ್ತ್ರಚಿಕಿತ್ಸೆಯನ್ನು ನಡೆಸಲೇಬೇಕಾಗಿತ್ತು.

ವೈದ್ಯರ ತಂಡ ಶಿಶುವನ್ನು ತಾಯಿಯ ಗರ್ಭಕೋಶದಿಂದ ಹೊರಗೆ ತೆಗೆದಿದ್ದರು. ಐದು ಗಂಟೆಗಳ ಸುದೀರ್ಘ ಅವಧಿಯ ಶಸ್ತ್ರಚಿಕಿತೆಯನ್ನು ನಡೆಸುತ್ತಿದ್ದಾಗ ಮಗುವಿನ ಸಾವು-ಬದುಕಿನ ಸಾಧ್ಯತೆ 50:50ರಷ್ಟಿತ್ತು.

ಪೂರ್ತಿ 20 ನಿಮಿಷಗಳ ಕಾಲ ಶಿಶು ತಾಯಿಯ ಶರೀರದಿಂದ ಹೊರಗಿತ್ತು ಮತ್ತು ಟ್ಯೂಮರ್‌ನ್ನು ಬೇರ್ಪಡಿಸಿದಾಗ ಅದರ ತೂಕ ಕೇವಲ ಒಂದು ಪೌಂಡ್ ಮೂರು ಔನ್ಸ್ ಅಂದರೆ 538.64 ಗ್ರಾಮ್‌ಗಳಷ್ಟಿತ್ತು. ಶಸ್ತ್ರಚಿಕಿತ್ಸೆ ಪೂರ್ಣಗೊಂಡ ಬಳಿಕ ಭ್ರೂಣವನ್ನು ಅತ್ಯಂತ ಎಚ್ಚರಿಕೆಯಿಂದ ತಾಯಿಯ ಗರ್ಭಾಶಯದಲ್ಲಿ ಮರು ಸ್ಥಾಪಿಸಲಾಗಿತ್ತು.

ಮೂರು ತಿಂಗಳುಗಳ ಬಳಿಕ ಸಿಸೇರಿಯನ್ ಶಸ್ತ್ರಚಿಕಿತ್ಸೆಯ ಮೂಲಕ ಲಿನ್ಲೀ ಎರಡನೇ ಬಾರಿ, ಅಂದರೆ ಈ ಬಾರಿ ಅಧಿಕೃತವಾಗಿ ಜನಿಸಿದಾಗ ಐದು ಪೌಂಡ್ ಐದು ಔನ್ಸ್(2.410 ಕೆ.ಜಿ) ತೂಗುತ್ತಿದ್ದಳು.

ಈಗ ಒಂದು ವರ್ಷ ಪ್ರಾಯವಾಗಿರುವ ಲಿನ್ಲೀ ಯಾವುದೇ ಆರೋಗ್ಯ ಸಮಸ್ಯೆಯಲ್ಲದೆ ಸೊಂಪಾಗಿ ಬೆಳೆಯುತ್ತಿದ್ದಾಳೆ. ತನ್ನ ಮಗು ಎಷ್ಟೊಂದು ಜಾಣೆಯಾಗಿದ್ದಾಳೆ ಎಂದು ತಾಯಿ ಮಾರ್ಗರೆಟ್‌ಗೆ ಹೆಮ್ಮೆಯೋ ಹೆಮ್ಮೆ.

ಅವಳು ನಡೆಯುವುದನ್ನು ಮತ್ತು ಓಡುವುದನ್ನು ಇಷ್ಟಪಡುತ್ತಾಳೆ. ಇದೊಂದು ದೊಡ್ಡ ಪವಾಡವಾಗಿದೆ. ಅವಳು ನಮ್ಮ ಪಾಲಿಗೆ ಅದ್ಭುತ ಆನಂದವಾಗಿದ್ದಾಳೆ ಎನ್ನುತ್ತಾಳೆ ಆಕೆ.

ವರ್ಷದಲ್ಲಿ ಎರಡು ಬಾರಿ ಹುಟ್ಟುಹಬ್ಬ ಆಚರಿಸುತ್ತಿರುವ ಲಿನ್ಲೀಯ ಭವಿಷ್ಯ ಉಜ್ವಲವಾಗಿದೆ. ಆಕೆ ತನ್ನ ಮನಸ್ಸಿಗೆ ಬಂದಿದ್ದನ್ನು ಮಾಡಲಿ, ಅವಳಿಗೆ ಯಾವುದೇ ಮಿತಿಯಿಲ್ಲ ಎನ್ನುತ್ತಾಳೆ ಮಾರ್ಗರೆಟ್.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X