ತಿರುವನಂತಪುರಂ: ಸಿಪಿಎಂ ಕಾರ್ಯಕರ್ತನ ಮೇಲೆ ದುಷ್ಕರ್ಮಿಗಳಿಂದ ದಾಳಿ

ಕೊಚ್ಚಿ, ನ.19: ಸಿಪಿಎಂ ಕಾರ್ಯಕರ್ತನೊಬ್ಬನ ಮೇಲೆ ಬೈಕ್ ನಲ್ಲಿ ಬಂದ ದುಷ್ಕರ್ಮಿಗಳು ದಾಳಿ ನಡೆಸಿರುವ ಘಟನೆ ತಿರುವನಂತಪುರಂನಲ್ಲಿ ನಡೆದಿದೆ.
ಸ್ಥಳೀಯ ಕಮಿಟಿಯ ಮಾಜಿ ಸದಸ್ಯ ಹಾಗು ಪತ್ರಿಕೆಯೊಂದರ ಏಜೆಂಟ್ ಆಗಿರುವ ಶಶಿಕುಮಾರ್ ತನ್ನ ಕೆಲಸ ಮುಗಿಸಿ ವಾಪಸಾಗುತ್ತಿದ್ದಾಗ ಈ ಘಟನೆ ನಡೆದಿದೆ. ದಾಳಿ ನಡೆದ ಪ್ರದೇಶದಲ್ಲಿದ್ದ ಸಿಸಿ ಕ್ಯಾಮರಾದಲ್ಲಿ ಘಟನೆಯ ದೃಶ್ಯಗಳು ಸೆರೆಯಾಗಿವೆ. ಶಶಿಕುಮಾರ್ ಓಡುತ್ತಿದ್ದಂತೆ ದುಷ್ಕರ್ಮಿಗಳು ಅವರ ಮೇಲೆ ಮಾರಕಾಯುಧಗಳಿಂದ ದಾಳಿ ನಡೆಸಿದ್ದಾರೆ.
ಗಾಯಾಳು ಶಶಿಕುಮಾರ್ ರನ್ನು ನೆಯ್ಯತಿಂಕರ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಕಟ್ಟಕ್ಕಡ ಸಬ್ ಇನ್ ಸ್ಪೆಕ್ಟರ್ ಮಾಹಿತಿ ನೀಡಿದ್ದಾರೆ.
ಪೊಲೀಸರಿಗೆ ನೀಡಿದ ದೂರಿನಲ್ಲಿ ಶಶಿಕುಮಾರ್ ಅವರು ದಾಳಿ ನಡೆಸಿದವರು ಎಸ್ ಡಿಪಿಐ ಕಾರ್ಯಕರ್ತರು ಎಂದು ಆರೋಪಿಸಿದ್ದಾರೆ. ಆದರೆ ಈ ಆರೋಪವನ್ನು ಎಸ್ ಡಿಪಿಐ ನಿರಾಕರಿಸಿದೆ.
ಕಳೆದ ಎರಡು ದಿನಗಳಲ್ಲಿ ಎಸ್ ಡಿಪಿಐ, ಸಿಪಿಎಂ ಕಾರ್ಯಕರ್ತರ ನಡುವೆ ಘರ್ಷಣೆಗಳು ನಡೆಯುತ್ತಲೇ ಇವೆ. ಕೊಲ್ಲಂನಲ್ಲಿ ನಡೆದ ಎಸ್ ಡಿಪಿಐ ರ್ಯಾಲಿಯ ಮೇಲೆ ಸಿಪಿಎಂ ಕಾರ್ಯಕರ್ತರು ದಾಳಿ ನಡೆಸಿದ್ದಾರೆ ಎಂದು ಆರೋಪಿಸಲಾಗಿದ್ದು, ಆನಂತರ ಘರ್ಷಣೆಗಳು ನಡೆಯುತ್ತಿವೆ.
CCTV: CPM worker attacked in Thiruvananthapuram's Kattakkada, CPM alleges SDPI workers were behind the attack #Kerala pic.twitter.com/v4GXOCJo74
— ANI (@ANI) November 19, 2017







