ವಾಲಿಬಾಲ್ ಪಂದ್ಯಾಟ: ಸ್ಪಾರ್ಕ್ ಮಲ್ಪೆಗೆ ಪ್ರಶಸ್ತಿ

ಉಡುಪಿ, ನ.19: ತೋನ್ಸೆ ಹೂಡೆ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಸಾಲಿ ಹಾತ್ ಕ್ರೀಡಾಂಗಣದಲ್ಲಿ ರವಿವಾರ ಏರ್ಪಡಿಸಲಾದ ವಾಲಿಬಾಲ್ ಪಂದ್ಯಾ ಕೂಟದಲ್ಲಿ ಸ್ಪಾರ್ಕ್ ಮಲ್ಪೆತಂಡ ಪ್ರಥಮ ಹಾಗೂ ಹೂಡೆಯ ಫ್ಯಾನ್ ಆ್ಯಟಾಕರ್ಸ್ ತಂಡ ದ್ವಿತೀಯ ಸ್ಥಾನವನ್ನು ಗೆದ್ದುಕೊಂಡಿದೆ.
ಅತ್ಯುತ್ತಮ ಸ್ಮಾಶರ್ ಪ್ರಶಸ್ತಿಯನ್ನು ದಾನೀಶ್ ಮಲ್ಪೆ, ಅತ್ಯುತ್ತಮ ಲಿಫ್ಟರ್ ಪ್ರಶಸ್ತಿಯನ್ನು ಮುಸ್ತಾಫ ಹಾಗೂ ಅಲ್ರೌಂಡರ್ ಪ್ರಶಸ್ತಿಯನ್ನು ಫಾರೂಕ್ ಹೂಡೆ ಪಡೆದುಕೊಂಡರು. ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿ ಗಳಾಗಿ ಗಣಪತಿ ಸಹಕಾರಿ ಸೌಹಾರ್ದ ಸೊಸೈಟಿಯ ಉಪಾಧ್ಯಕ್ಷ ಬಿ.ಅಫ್ಜಲ್ ಸಾಲಿಹಾತ್ ಸಂಸ್ಥೆಯ ಆಡಳಿತಾಧಿಕಾರಿ ಅಸ್ಲಮ್ ಹೈಕಾಡಿ, ಇಸ್ಮಾಯಿಲ್ ಕಿದೆವರ್, ಅಲ್ತಾಫ್ ನಾಕ್ವ ಬಹುಮಾನ ವಿತರಿಸಿದರು.
ಪಂದ್ಯಾಟವನ್ನು ಹೂಡೆ ಸಾಲಿಹಾತ್ ಸಮೂಹ ಸಂಸ್ಥೆಯ ಕಾರ್ಯದರ್ಶಿ ಇಮ್ತಿಯಾಜ್ ಜಿ. ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಅಬ್ದುಲ್ ಕಾದಿರ್ ಮೊಯ್ದಿನ್, ಸಾದಿಕ್ ಯು., ಸ್ಪೋರ್ಟ್ಸ್ ಕ್ಲಬ್ನ ಅಧ್ಯಕ್ಷ ಡಾ.ರಫೀಕ್ ಹೂಡೆ ಉಪಸ್ಥಿತರಿದ್ದರು.
Next Story





