ಉಡುಪಿ: ಇಂದಿರಾ ಗಾಂಧಿಗೆ 100 ದೀಪ ನಮನ

ಉಡುಪಿ, ನ.19: ಬ್ರಹ್ಮಗಿರಿ ಕಾಂಗ್ರೆಸ್ ಭವನದಲ್ಲಿ ರವಿವಾರ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ 100ನೆ ಜನ್ಮದಿನಾಚರಣೆಯನ್ನು 100 ಹಣತೆ ದೀಪಗಳನ್ನು ಬೆಳಗಿಸುವುದರ ಮೂಲಕ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮ್ವರಾಜ್ ದೀಪ ನಮನ ಸಲ್ಲಿಸಿದರು.
ಬಳಿಕ ಮಾತನಾಡಿದ ಅವರು, ಇಂದಿರಾ ಗಾಂಧಿ ಪ್ರಧಾನಿಯಾದ ನಂತರ 20 ಅಂಶದ ಕಾರ್ಯಕ್ರಮದ ಮೂಲಕ ದೇಶದ ಸಮಗ್ರ ಅಭಿವೃದ್ಧಿಗೆ ಚಾಲನೆ ನೀಡಿ, ಪ್ರತಿಯೊಬ್ಬ ಪ್ರಜೆಗೂ ಆರ್ಥಿಕ ಸ್ವಾತಂತ್ರ್ಯವನ್ನು ಒದಗಿಸಿದರು. ಈ ಮೂಲಕ ಹಿಂದುಳಿದ ವರ್ಗದ ಜನತೆಗೆ ಭೂಮಿಯ ಒಡೆತನ ಕೊಟ್ಟು ಬದುಕಿಗೆ ಆಸರೆ ನೀಡಿದ ಅಪ್ರತಿಮ ಮಹಿಳೆ. ಇವರದ್ದು ದೇಶದ ಚರಿತ್ರೆಯಲ್ಲಿ ಅಚ್ಚಳಿಯದೆ ಉಳಿದ ವ್ಯಕ್ತಿತ್ವ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಜನಾರ್ದನ ತೋನ್ಸೆ, ಮುಖಂಡ ರಾದ ದಿನೇಶ್ ಪುತ್ರನ್, ಬಿ.ನರಸಿಂಹ ಮೂರ್ತಿ, ಕೇಶವ್ ಕೋಟ್ಯಾನ್, ಪ್ರಖ್ಯಾತ್ ಶೆಟ್ಟಿ, ವಿಶ್ವಾಸ್ ಅಮೀನ್, ಯತೀಶ್ ಕರ್ಕೇರ, ಮೀನಾಕ್ಷೀ ಮಾಧವ ಬನ್ನಂಜೆ, ಅಮೃತ್ ಶೆಣೈ, ಭಾಸ್ಕರ್ ರಾವ್ ಕಿದಿಯೂರು, ಅಣ್ಣಯ್ಯ ಶೇರಿ ಗಾರ್, ಸುನಿಲ್ ಬಂಗೇರಾ, ಶೇಖರ್ ಕೋಟ್ಯಾನ್, ನಾರಾಯಣ್ ಕುಂದರ್, ಸುಜಯ ಪೂಜಾರಿ, ರಮೇಶ್ ಬಂಗೇರಾ, ನವೀನ್ ಶೆಟ್ಟಿ, ಹಸನ್, ಶಶಿರಾಜ್ ಕುಂದರ್, ಲಕ್ಷ್ಮಣ ಪೂಜಾರಿ, ಸದಾಶಿವ ಕಟ್ಟೆಗುಡ್ಡೆ ಮೊದಲಾದವರು ಉಪಸ್ಥಿತರಿದ್ದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸತೀಶ್ ಅಮೀನ್ ಪಡುಕರೆ ಸ್ವಾಗತಿಸಿದರು. ಜನಾರ್ದನ್ ಭಂಡಾರ್ಕರ್ ಕಾರ್ಯಕ್ರಮ ನಿರೂಪಿಸಿದರು.







