ಮಹಿಳಾ ಕಾಂಗ್ರೆಸ್‌ನಿಂದ ಕುಡುಬಿ ಕಾಲನಿಯಲ್ಲಿ ಗ್ರಾಮ ವಾಸ್ತವ್ಯ

ಉಡುಪಿ, ನ.19: ಮಾಜಿ ಪ್ರಧಾನಿ ದಿ.ಇಂದಿರಾ ಗಾಂಧಿಯವರ 100ನೆ ಜನ್ಮದಿನಾಚರಣೆಯ ಪ್ರಯುಕ್ತ ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್ ವತಿ ಯಿಂದ ಬ್ರಹ್ಮಾವರ ಕೊಕ್ಕರ್ಣೆ ಒಳಬೈಲು ಕುಡುಬಿ ಕಾಲನಿಯಲ್ಲಿ ಶನಿವಾರ ಗ್ರಾಮ ವಾಸ್ತವ್ಯ ಕಾರ್ಯ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಹಿರಿಯರಾದ ಬುಡ್ಡು ಬಾಯಿ ಇಂದಿರಾ ಗಾಂಧೀಜಿ ಭಾವಚಿತ್ರಕ್ಕೆ ಹಣತೆಯನ್ನು ಹಚ್ಚುವುದರ ಮೂಲಕ ನೂರು ದೀಪ ನಮನ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಾರ್ಯಕ್ರಮಕ್ಕೆ ಆಗಮಿಸಿದ ಕಾಂಗ್ರೆಸ್ ಪ್ರಮುಖರು ಹಾಗೂ ಸ್ಥಳೀಯರು ನೂರು ಹಣತೆಗಳನ್ನು ಬೆಳಗಿಸಿದರು. ಬಳಿಕ ಎಲ್ಲಾ ನಿವಾಸಿ ಗಳೊಂದಿಗೆ ಸಹಭೋಜನ ಮಾಡಲಾಯಿತು. 10 ಜನ ಮಹಿಳೆಯರು ಅಲ್ಲಿ ವಾಸ್ತವ್ಯ ಹೂಡಿ ಅವರ ಜೀವನ ಶೈಲಿಯ ಬಗ್ಗೆ ವಿಚಾರ ವಿನಿಮಯ ಮಾಡಿ ಕೊಂಡರು.
ಈ ಸಂದರ್ಭದಲ್ಲಿ ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್ ಸಮಿತಿ ಸದಸ್ಯೆ ಹಾಗೂ ಜಿಲ್ಲಾ ಉಸ್ತುವಾರಿ ಶೈಲಾ ಕುಟ್ಟಪ್ಪ, ಬ್ಲಾಕ್ ಅಧ್ಯಕ್ಷ ನಿತ್ಯಾನಂದ ಶೆಟ್ಟಿ, ಜಿಪಂ ಸದಸ್ಯರಾದ ಸುಧಾಕರ ಶೆಟ್ಟಿ, ತಾಪಂ ಸದಸ್ಯೆ ಡಾ.ಸುನಿತಾ ಶೆಟ್ಟಿ, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ವೆರೋನಿಕಾ ಕರ್ನೇಲಿಯೋ ಮಾತನಾಡಿದರು. ಜಿಲ್ಲಾ ನಿಯೋಜಿತ ಅಧ್ಯಕ್ಷೆ ಗೀತಾ ವಾಗ್ಳೆ, ಬ್ಲಾಕ್ ಅಧ್ಯಕ್ಷರುಗಳಾದ ಜ್ಯೋತಿ ಪುತ್ರನ್, ಮಮತಾ ಶೆಟ್ಟಿ, ಗೋಪಿ ಕೆ.ನಾಯಕ್, ಸುಜಾತ ಆಚಾರ್ಯ, ರಾಜೀವ್ ಗಾಂಧಿ ಸಂಘಟನೆಯ ಜಿಲ್ಲಾ ಸಂಯೋಜಕಿ ರೋಶನಿ ಒಲಿವರ್, ಸಹ ಸಂಯೋಜಕಿ ವಾಣಿ ಶೆಟ್ಟಿ, ಜಿಲ್ಲಾ ಮಹಿಳಾ ಕಾಂಗ್ರೆಸ್ ಉಪಾಧ್ಯಕ್ಷೆ ಜ್ಯೋತಿ ಹೆಬ್ಬಾರ್, ರೇವತಿ ಶೆಟ್ಟಿ, ತಾಪಂ ಸದಸ್ಯೆ ಅಂಬಿಕಾ, ಮುಖಂಡರಾದ ಅಮೃತ್ ಶೆಣೈ, ಗ್ರಾಪಂ ಉಪಾಧ್ಯಕ್ಷ ದೇವಕಿ ಮೊದಲಾದವರು ಉಪಸ್ಥಿತರಿದ್ದರು.







