ಪಡುಬಿದ್ರಿಯಲ್ಲಿ ವರ್ಣ ವಿಹಾರ ಚಿತ್ರಬಿಡಿಸುವ ಸ್ಪರ್ಧೆ

ಪಡುಬಿದ್ರಿ, ನ. 19: ರೋಟರಿ ಕ್ಲಬ್ ಪಡುಬಿದ್ರಿ ವತಿಯಿಂದ ಸಾಯಿರಾಧ ಹೆರಿಟೇಜ್ ಇವರ ಪ್ರಾಯೋಜಕತ್ವದಲ್ಲಿ ಮಕ್ಕಳ ದಿನಾಚರಣೆಯ ಪ್ರಯುಕ್ತ ಉಭಯ ಜಿಲ್ಲಾ ಶಾಲಾ ವಿದ್ಯಾರ್ಥಿಗಳಿಗೆ ಏರ್ಪಡಿಸಿದ ಚಿತ್ರಬಿಡಿಸುವ ಸ್ಪರ್ಧೆ ವರ್ಣ ವಿಹಾರ -2017 ಪಡುಬಿದ್ರಿಯ ಬೀಚ್‌ನಲ್ಲಿ ನಡೆಯಿತು.
ಉಡುಪಿಯ ಆರ್ಟಿಸ್ಟ್ ಫಾರಂನ ಉಪಾಧ್ಯಕ್ಷ ಪುರುಷೋತ್ತಮ ಅಡ್ವೆ ಚಿತ್ರಬಿಡಿಸುವ ಮೂಲಕ ಸ್ಪರ್ಧೆಗೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಬಣ್ಣದ ಜತೆ ಆಟವಾಡಿ ತಮ್ಮಲ್ಲಿ ಆತ್ಮ ವಿಶ್ವಾಸ ಬೆಳೆಸಿಕೊಳ್ಳುವ ಮೂಲಕ ಕಲಾ ಪ್ರತಿಭೆಯನ್ನು ಬೆಳಕಿಗೆ ತರಬೇಕಾಗಿದೆ. ಮಕ್ಕಳಲ್ಲಿ ವಿಭಿನ್ನ ಕಲೆಗಳಿರುತ್ತದೆ. ಅವರ ಆ ಕಲೆಗಳನ್ನು ಗುರುತಿಸಿ ಪ್ರೋತ್ಸಾಹಿಸುವುದು ಪೋಷಕರ ಆದ್ಯಕರ್ತವ್ಯವಾಗಿದ್ದು, ಅವರ ಕಲಾ ಪ್ರತಿಭೆಗೆ ಎಂದು ಅಡ್ಡಿಯಾಗಬಾರದು ಎಂದು ಹೇಳಿದರು. ಚಿತ್ರಕಲೆಗಳಲ್ಲಿ ನಾನಾ ವಿಧಗಳು ಇವೆ. ಎಲ್ಲಾ ಕಲೆಗಳಲ್ಲೂ ನೀವು ಕೈಯಾಡಿಸಿ ಅದರಲ್ಲಿ ಪರಿಣಿತಹೊಂದಿದರೆ ಮುಂದಿನ ಭವಿಷ್ಯ ಉಜ್ವಲವಾಗಬಹುದು ಎಂದು ಅಂತರಾಷ್ಟ್ರೀಯ ಚಿತ್ರಕಲಾವಿದೆ ಶಭರಿ ಗಾಣಿಗ ಹೇಳಿದರು.
ಪಡುಬಿದ್ರಿ ರೋಟರಿ ಕ್ಲಬ್ ಅಧ್ಯಕ್ಷ ರಮೀರ್ ಹುಸೈನ್ ಅಧ್ಯಕ್ಷತೆ ವಹಿಸಿದ್ದರು. ಯುವಕಾಂಗ್ರೆಸ್ ಜಿಲ್ಲಾಧ್ಯಕ್ಷ ವಿಶ್ವಾಸ್ ಅಮೀನ್, ಗ್ರಾಮ ಪಂಚಾಯ್ತಿ ಸದಸ್ಯರಾದ ಬುಡಾನ್ ಸಾಹೇಬ್, ಸೇವಂತಿ ಸದಾಶಿವ್, ರವಿ ಶೆಟ್ಟಿ, ವಲಯ ಸಂಯೋಜಕ ಹೇಮಚಂದ್ರ, ಸಾಯಿರಾಧ ಹೆರಿಟೇಜ್‌ನ ಸಂಯೋಜಕ ಅಭಿಜಿತ್, ಕಾರ್ಯದರ್ಶಿ ಸಂದೀಪ್ ಫಲಿಮಾರ್, ರಾಜೇಶ್ ಶೆಟ್ಟಿಗಾರ್ ಕೇಶವ ಸಾಲ್ಯಾನ್ ಉಪಸ್ಥಿತರಿದ್ದರು.
ಶಭರಿ ಗಾಣಿಗ ಅವರು ತನ್ನ ಕಲಾ ಪ್ರತಿಭೆಯಿಂದ ಕ್ಷಣ ಮಾತ್ರದಲ್ಲಿ ಅಬ್ದುಲ್ ಕಲಾಂ ಅವರ ಚಿತ್ರ ಮೂಡಿಸಿ ಗಮನಸೆಳೆದರು. ಅವರನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು. ಉಭಯ ಜಿಲ್ಲೆಯಿಂದ 100ಕ್ಕೂ ಅಧಿಕ ಸ್ಪರ್ಧಾಳುಗಳು ಪಾಲ್ಗೊಂಡಿದ್ದರು.
ಫಲಿತಾಂಶ: 5ರಿಂದ 7ರ ವಿಭಾಗದ ಪ್ರಕೃತಿಯ ಚಿತ್ರ ಬಿಡಿಸುವ ಸ್ಪರ್ಧೆಯಲ್ಲಿ ಪ್ರಥಮ: ಪ್ರಾಪ್ತಿ ಪ್ರದೀಪ್ (ವಿದ್ಯೋದಯ ಪಬ್ಲಿಕ್ ಸ್ಕೂಲ್ ಉಡುಪಿ), ದ್ವಿತೀಯ ಲೀಶಾ (ಸಾಗರ್ ವಿದ್ಯಾಮಂದಿರ ಪಡುಬಿದ್ರಿ), ತೃತೀಯ: ಪ್ರಾರ್ಥನಾ ಹೆಬ್ಬಾರ್ (ವಿದ್ಯೋದಯ ಪಬ್ಲಿಕ್ ಸ್ಕೂಲ್ ಉಡುಪಿ), ಎಂಟರಿಂದ 10ನೇ ತರಗತಿಯವರೆಗೆ ಕರಾವಳಿಯ ಕಡಲು ವಿಭಾಗದಲ್ಲಿ ಪ್ರಥಮ : ಹೃತೇಶ್ ಆರ್ಯ ಪೂಜಾರ್ (ಸಾಗರ್ ವಿದ್ಯಾಮಂದಿರ ಪಡುಬಿದ್ರಿ, ದ್ವಿತೀಯ: ತೇಜಸ್ ಬಿ.ರಾವ್ (ವಿದ್ಯೋದಯ ಪಬ್ಲಿಕ್ ಸ್ಕೂಲ್ ಉಡುಪಿ), ಶಿಶೀರ್ (ದಂಡತೀರ್ಥ ಹೈಸ್ಕೂಲ್ ಕಾಪು)
ಬಹುಮಾನ ವಿತರಣೆ:
ಪಡುಬಿದ್ರಿ ರೋಟರಿ ಕ್ಲಬ್ ಅಧ್ಯಕ್ಷ ರಮೀರ್ ಹುಸೈನ್ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಸದಸ್ಯ ಶಶಿಕಾಂತ್ ಪಡುಬಿದ್ರಿ, ಕಾಪು ಬಿಜೆಪಿ ವಿಧಾನಸಭಾ ಕ್ಷೇತ್ರ ಅಧ್ಯಕ್ಷ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಗ್ರಾಮ ಪಂಚಾಯ್ತಿ ಸದಸ್ಯ ಅಶೋಕ್ ಸಾಲ್ಯಾನ್, ನವೀನ್ ಎನ್.ಶೆಟ್ಟಿ, ರಾಜೇಶ್ ಶೆಟ್ಟಿಗಾರ್, ವಲಯ ಸಂಯೋಜಕ ಹೇಮಚಂದ್ರ, ಸಾಯಿರಾಧ ಹೆರಿಟೇಜ್‌ನ ಸಂಯೋಜಕ ಅಭಿಜಿತ್, ಎಚ್.ಆರ್. ದಿವಾಕರ ರಾವ್, ಕೇಶವ ಸಾಲ್ಯಾನ್ ಉಪಸ್ಥಿತರಿದ್ದರು. ಸುಧಾಕರ ಕೆ, ಸಂತೋಷ್ ಪಡುಬಿದ್ರಿ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯದರ್ಶಿ ಸಂದೀಪ್ ಫಲಿಮಾರ್ ವಂದಿಸಿದರು.







