ಕರಾವಳಿ ಉತ್ಸವ ಮೆರವಣಿಗೆಗೆ ಸಾಂಸ್ಕೃತಿಕ ತಂಡಗಳ ಆಹ್ವಾನ
ಮಂಗಳೂರು, ನ.19: ಕರಾವಳಿ ಉತ್ಸವದ ಪ್ರಯುಕ್ತ ಡಿ.22ರಂದು ವೈಶಿಷ್ಟಪೂರ್ಣವಾದ ಸಾಂಸ್ಕೃತಿಕ ಮೆರವಣಿಗೆ ದಿಬ್ಬಣ ಸ್ವರೂಪದಲ್ಲಿ ಹಮ್ಮಿಕೊಳ್ಳಲಾಗಿದೆ. ನಾಡುನುಡಿಯನ್ನು ಪ್ರತಿಬಿಂಬಿಸುವ ವೇಷಧಾರಿ ತಂಡಗಳು, ದಫ್, ತಾಲೀಮು, ಗೊಂಬೆ ಕುಣಿತ, ಯಕ್ಷಗಾನ, ಕೋಲಾಟ, ಮಂಗಳವಾದ್ಯ, ಹುಲಿವೇಷ, ಹಾಗೂ ಹೊರರಾಜ್ಯ ಮತ್ತು ಕರ್ನಾಟಕದ ಇತರ ಜಿಲ್ಲೆಗಳ ಜಾನಪದ ಮತ್ತು ಸಂಸ್ಕೃತಿಯನ್ನು ಬಿಂಬಿಸುವ ಸಾಂಸ್ಕೃತಿಕ ತಂಡಗಳಿಗೆ ಸಂಘ-ಸಂಸ್ಥೆಗಳಿಗೆ ಈ ಮೆರವಣಿಗೆಯಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ.
ಆಸಕ್ತ ತಂಡಗಳು ಡಿ.13ರೊಳಗೆ ಪ್ರಸ್ತುತ ಪಡಿಸುವ ಸಾಂಸ್ಕೃತಿಕ ಪ್ರಕಾರ, ಸದಸ್ಯರ ಸಂಖ್ಯೆ ಇನ್ನಿತರ ವಿವರಗಳನ್ನು ಸದಸ್ಯ ಕಾರ್ಯದರ್ಶಿಗಳು ಕರಾವಳಿ ಉತ್ಸವ ಮೆರವಣಿಗೆ ಸಮಿತಿ, ತಹಶೀಲ್ದಾರರ ಕಚೇರಿ, ಮಂಗಳೂರು ತಾಲೂಕು ಆಫೀಸು, ಮಂಗಳೂರು ಅಥವಾ ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಕಲ್ಕೂರ ಪ್ರತಿಷ್ಠಾನ, ಕೃಷ್ಣ ಸಂಕೀರ್ಣ, ಎಂ.ಜಿ. ರೋಡ್ ಮಂಗಳೂರು (ದೂ.ಸಂ: 0824-2492239, 2492789) ಇಲ್ಲಿಗೆ ತಲುಪಿಸಬಹುದು ಎಂದು ಪ್ರಕಟನೆ ತಿಳಿಸಿದೆ.
Next Story





