ಮೆರವಣಿಗೆಯ ಮೂಲಕ ನೂತನ ಧ್ವಜ ಸ್ತಂಭ ಸಮರ್ಪನೆ
ಪೊಳಲಿ ರಾಜರಾಜೇಶ್ವರೀ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯ

ಬಂಟ್ಟಾಳ, ನ. 19: : ಅತೀ ಪುರಾತನ, ಐತಿಹಾಸಿಕ ಹಿನ್ನಲೆಯಳ್ಳ ಬಂಟ್ವಾಳ ತಾಲೂಕಿನ ಪೊಳಲಿ ರಾಜರಾಜೇಶ್ವರೀ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯ ನಡೆಯುತ್ತಿರುವ ಹಿನ್ನಲೆಯಲ್ಲಿ ಕ್ಷೇತ್ರಕ್ಕೆ ಬಿಲ್ಲವ ಸಮಾಜದ ಸೇವಾ ರೂಪವಾಗಿ ಸಮರ್ಪಿಸುವ ನೂತನ ಧ್ವಜ ಸ್ತಂಭವನ್ನು ಮೆರವಣಿಗೆಯ ಮೂಲಕ ರವಿವಾರ ಸಾಗಿಸಲಾಯಿತು.
ಬಿ.ಸಿ.ರೋಡಿನ ಬ್ರಹ್ಮಶ್ರೀ ನಾರಾಯಣಗುರು ವೃತ್ತದ ಬಳಿ ಧ್ವಜ ಸ್ತಂಭಕ್ಕೆ ವಿವಿಧ ಧಾರ್ಮಿಕ ವಿಧಿ ವಿಧಾನದ ಬಳಿಕ ಕೇಂದ್ರದ ಮಾಜಿ ಸಚಿವ ಬಿ.ಜನಾರ್ದನ ಪೂಜಾರಿಯವರು ಅದ್ದೂರಿಯ ಮೆರವಣಿಗೆಗೆ ಚಾಲನೆ ನೀಡಿ ಶುಭ ಹಾರೈಸಿದರು.
ಈ ಸಂದರ್ಭ ಮಾಣಿಲ ಧಾಮದ ಮೋಹನದಾಸ ಸ್ವಾಮೀಜಿ, ಗುರುಪುರ ವಜ್ರದೇಹಿ ಮಠದ ರಾಜ ಶೇಖರಾನಂದ ಸ್ವಾಮೀಜಿ, ಪೊಳಲಿ ರಾಮಕೃಷ್ಣ ತಪೋವನದ ವಿವೇಕಚೈತಾನ್ಯಾನಂದ ಸ್ವಾಮೀಜಿ, ಕಣಿಯೂರು ಚಾಮುಂಡೇಶ್ವರೀ ಕ್ಷೇತ್ರದ ಮಹಾಬಲ ಸ್ವಾಮೀಜಿ, ಸಂಸದ ನಳಿನ್ ಕುಮಾರ್ ಕಟೀಲ್, ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ, ಪ್ರಗತಿಪರ ಕೃಷಿಕ ರಾಜೇಶ್ ನಾಯ್ಕಾ ಉಳಿಪ್ಪಾಡಿಗುತ್ತು, ಮಾಜಿ ಶಾಸಕ ರುಕ್ಮಯ ಪೂಜಾರಿ, ಬಿಲ್ಲವ ಮುಖಂಡ ಹರಿಕೃಷ್ಣ ಬಂಟ್ವಾಳ, ಜಿಪಂಸದಸ್ಯ ಚಂದ್ರಪ್ರಕಾಶ ಶೆಟ್ಟಿ, ಮಾಜಿ ಸಚಿವ ನಾಗರಾಜ ಶೆಟ್ಟಿ ಮುಖ್ಯಅತಿಥಿಗಳಾಗಿ ಭಾಗವಹಸಿದ್ದರು. ವಿವಿಧ ವಾದ್ಯಗೋಷ್ಠಿ, ಗೊಂಬೆ ಕುಣಿತ, ಹುಲಿವೇಷ ಕುಣಿತ, ಭಜನೆ ಮೆರವಣಿಗೆಗೆ ವಿಶೇಷ ಮೆರಗು ನೀಡಿತು.
ಸಮಿತಿಯ ಗೌರವಾಧ್ಯಕ್ಷ ರಾಮದಾಸ ಕೋಟ್ಯಾನ್ ಮಜಿಲಗುತ್ತು, ಅಧ್ಯಕ್ಷ ಕೆ.ಸೇಸಪ್ಪ ಕೋಟ್ಯಾನ್, ಪದಾಧಿಕಾರಿಗಳಾದ ಬಳ್ಳಿ ಚಂದ್ರಶೇಖರ ಕೈಕಂಬ, ಗೋಪಾಲಕೃಷ್ಣ ಕೈಕಂಬ, ನಾರಾಯಣ ಎಂ.ಅಮ್ಮುಂಜೆ, ಯಶವಂತ ಪೊಳಲಿ, ಚಂದಪ್ಪ ಅಂಚನ್ ಮಜಿಲಗುತ್ತು ಗಂಗಾಧರ ಜೆ.ಪೂಜಾರಿ ಕೊಪ್ಪಳ, ಜಿ.ಆನಂದ, ದೇವದಾಸ ಶೆಟ್ಟಿ, ಸತ್ಯಜೀತ್ ಸುರತ್ಕಲ್, ಚಂದ್ರಹಾಸ ಕರ್ಕೇರ, ಅಶ್ವಿನ್ ಕುಮಾರ್ ರೈ, ಮಾಯಿಲಪ್ಪ ಸಾಲ್ಯಾನ್, ವೆಂಕಪ್ಪ ಪೂಜಾರಿ, ಭುವನೇಶ್ ಪಚ್ಚಿನಡ್ಕ, ಬೇಬಿ ಕುಂದರ್, ರವೀಂದ್ರಕಂಬಳಿ, ಸೋಮಪ್ಪ ಕೋಟ್ಯಾನ್, ಪ್ರಕಾಶ್ ಅಂಚನ್, ಸಂಜೀವ ಪೂಜಾರಿ, ಕೃಷ್ಣಪ್ಪ ಪೂಜಾರಿ ಕಲ್ಲಡ್ಕ ಹಾಗೂ ಹಿಂದೂ ಪರ ಸಂಘಟನಯ ಪ್ರಮುಖರು ಭಾಗವಹಿಸಿದ್ದರು.







