ನ.22: ಫರೀದ್‌ನಗರಕ್ಕೆ ಪೇರೋಡ್ ಉಸ್ತಾದ್
ಉಳ್ಳಾಲ, ನ.19: ಎಸ್‌ವೈಎಸ್ ಮತ್ತು ಎಸ್ಸೆಸ್ಸೆಫ್ ಹರೇಕಳ ಫರೀದ್‌ನಗರ ಶಾಖೆಯ ಜಂಟಿ ಆಶ್ರಯದಲ್ಲಿ ಹುಬ್ಬುರ್ರಸೂಲ್ ಕಾನ್ಫರೆನ್ಸ್ ಹಾಗೂ ಮೆಹಫಿಲೆ ತ್ವೈಬಾ ಮಜ್ಲಿಸ್ ಕಾರ್ಯಕ್ರಮವು ನ.22ರಂದು ಸಂಜೆ 4ಕ್ಕೆ ಫರೀದ್‌ನಗರ ಮಸ್ಜಿದ್ ವಠಾರದಲ್ಲಿ ನಡೆಯಲಿದೆ.
ಮೆಹಫಿಲೆ ತ್ವೈಬಾ ಮಜ್ಲಿಸ್ ಉದ್ಘಾಟಿಸಲಿದ್ದು,ಅಸೈಯದ್ ಕೂರತ್ ತಂಙಳ್ ನೇತೃತ್ವ ವಹಿಸಲಿದ್ದಾರೆ. ಅಸೈಯದ್ ಶರಫುದ್ದೀನ್ ತಂಙಳ್ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದು, ಕೆ.ಪಿ ಸಿರಾಜುದ್ದೀನ್ ಸಖಾಫಿ ಕನ್ಯಾನ ಉದ್ಘಾಟಿಸಲಿದ್ದಾರೆ. ಪೇರೋಡ್ ಉಸ್ತಾದ್ ಮುಖ್ಯ ಪ್ರಭಾಷಣ ಮಾಡಲಿದ್ದಾರೆ. ಸಿದ್ದೀಕ್ ಸಖಾಫಿ ಮೂಳೂರು, ಇಸ್ಹಾಕ್ ಝುಹ್‌ರಿ, ಮುನೀರ್ ಕಾಮಿಲ್ ಸಖಾಫಿ, ಸಚಿವ ಯು.ಟಿ ಖಾದರ್ ಭಾಗವಹಿಸಲಿದ್ದಾರೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story





