ಬಾಳ್ತಿಲ ಮಹಿಳಾ ಕಾಂಗ್ರೆಸ್ ಗ್ರಾಮ ವಾಸ್ತವ್ಯ
ಬಂಟ್ವಾಳ, ನ. 20: ಪಾಣೆಮಂಗಳೂರು ಬ್ಲಾಕ್ ಮಹಿಳಾ ಕಾಂಗ್ರೆಸ್ ಆಶ್ರಯದಲ್ಲಿ ಬಾಳ್ತಿಲ ಗ್ರಾಮದ ಸುಧೇಕಾರ್ ನಿವಾಸಿ ವಿಧವೆ ಜಯಂತಿ ಅವರ ಮನೆಯಲ್ಲಿ ಶನಿವಾರ ರಾತ್ರಿ ಪಕ್ಷದ ಪ್ರಮುಖ ಮಹಿಳೆಯರು ಗ್ರಾಮ ವಾಸ್ತವ್ಯ ಮಾಡಿದರು.
ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಉಪಸ್ಥಿತಿಯಲ್ಲಿ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಜಯಂತಿ ಪೂಜಾರಿ ಅವರು ವಿಧವೆ ಮಹಿಳೆಗೆ ಸೀರೆಯನ್ನು ಉಡುಗೊರೆ ನೀಡಿದರು ಮತ್ತು ಅವರ ಇಬ್ಬರು ಮಕ್ಕಳಿಗೆ ಶೈಕ್ಷಣಿಕ ಉದ್ದೇಶದ ಧನ ಸಹಾಯ ನೀಡುವುದಾಗಿ ತಿಳಿಸಿದರು. ಜಿ.ಪಂ.ಸದಸ್ಯ ಚಂದ್ರಪ್ರಕಾಶ ಶೆಟ್ಟಿ, ಎಂ.ಎಸ್. ಮಹಮ್ಮದ್, ಮಂಜುಳಾ ಮಾವೆ, ಎಪಿಎಂಸಿ ಅಧ್ಯಕ್ಷ ಕೆ.ಪದ್ಮನಾಭ ರೈ, ಉಪಾಧ್ಯಕ್ಷ ಚಂದ್ರಶೇಖರ ಪೂಜಾರಿ, ತಾ.ಪಂ. ಉಪಾಧ್ಯಕ್ಷ ಅಬ್ಬಾಸ್ ಅಲಿ, ರಾಜ್ಯ ಮಹಿಳಾ ಕಾಂಗ್ರೆಸ್ ಕಾರ್ಯದರ್ಶಿ ಐಡಾ ಸುರೇಶ್, ಮೆಸ್ಕಾಂ ನಿರ್ದೇಶಕಿ ಮಲ್ಲಿಕಾ ಪ್ರಶಾಂತ್ ಪಕ್ಕಳ, ಜಿಲ್ಲಾ ಮಹಿಳಾ ಕಾಂಗ್ರೆಸ್ ಸದಸ್ಯೆ ದೇವಿಕಾ ರೈ, ಗ್ರಾ.ಪಂ.ಸದಸ್ಯೆ ರಮಣಿ, ವೀಣಾ, ಭಾರತಿ ರಮಾನಂದ ಪೂಜಾರಿ, ಯುವ ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿ ಮಹೇಶ್ ನಾಯಕ್, ಬಾಳ್ತಿಲ ಗ್ರಾ.ಪಂ.ಸದಸ್ಯೆ ರೇಣುಕಾ, ವಲಯ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ಪ ಬಾಳ್ತಿಲ, ನಾರಾಯಣ ಸಾಲ್ಯಾನ್, ಸುದೀಪ್ ಶೆಟ್ಟಿ ಮತ್ತ್ತು ಇತರರು ಉಪಸ್ಥಿತರಿದ್ದರು.





