ಅಲ್ ಹಕ್ ಫೌಂಡೇಶನ್‌ನಿಂದ ರಕ್ತದಾನ ಶಿಬಿರ

ಮಂಗಳೂರು, ನ.19: ನಗರದ ಅಲ್ ಹಕ್ ಫೌಂಡೇಶನ್‌ನಿಂದ ನಗರದ ನೆಲ್ಲಿಕಾಯಿ ರಸ್ತೆಯಲ್ಲಿರುವ ದಾರುಲ್ ಖೈರ್ ಸಭಾಂಗಣದಲ್ಲಿ ರಕ್ತದಾನ ಶಿಬಿರ ರವಿವಾರ ಜರಗಿತು.
ಈ ಸಂದರ್ಭ ಶಾಸಕ ಜೆ.ಆರ್.ಲೋಬೊ ಅಲ್ ಹಕ್ ಫೌಂಡೇಶನ್‌ನ ಪರಿಚಯದ ಬ್ರೊಷರ್ ಬಿಡುಗಡೆಗೊಳಿಸಿ ಶುಭ ಹಾರೈಸಿದರು. ಅಲ್ಲದೆ ಖಲೀಲ್ ಇಬ್ರಾಹೀಂ ಮಸ್ಜಿದ್‌ನ ಕಾಮಗಾರಿಗೆ 4 ಲಕ್ಷ ರೂ.ಮೊತ್ತದ ಚೆಕ್ ಅನ್ನು ಮಸೀದಿಯ ಪದಾಧಿಕಾರಿಗಳಿಗೆ ವಿತರಿಸಿದರು.
ಬಂದರ್ ಇನ್‌ಸ್ಪೆಕ್ಟರ್ ಶಾಂತರಾಮ ಕುಂದರ್, ಖಲೀಲ್ ಇಬ್ರಾಹೀಂ ಮಸ್ಜಿದ್ ಹಾಗೂ ಎಸ್ಕೆಎಸ್ಸೆಂ ಅಧ್ಯಕ್ಷ ಅಬ್ದುಲ್ ರಝಾಕ್, ಮಸ್ಜಿದ್‌ನ ಟ್ರಸ್ಟಿ ಅಹ್ಮದ್ ಅನ್ಸಾರ್, ಬಶೀರ್ ಶಾಲಿಮಾರ್ ಉಪಸ್ಥಿತರಿದ್ದರು.
ಸದಸ್ಯರಾದ ಅಬ್ದುಲ್ ರವೂಫ್ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಅಬ್ದುಲ್ ಲತೀಫ್ ವಂದಿಸಿದರು.
Next Story





