ಉಪ್ಪಾರಹಳ್ಳಿ ರೈಲ್ವೆ ಅಂಡರ್ ಪಾಸ್ ಲೋಕಾರ್ಪಣೆ

ತುಮಕೂರು,ನ.19:ನಗರದ ಉಪ್ಪಾರಹಳ್ಳಿ ರೈಲ್ವೆ ಗೇಟ್ ಬಳಿ ಸಾರ್ವಜನಿಕರು ಹಾಗೂ ಸಣ್ಣ ವಾಹನಗಳ ಓಡಾಟಕ್ಕೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ನಿರ್ಮಿಸಿರುವ ರೈಲ್ವೆ ಕೆಳ ಸೇತುವೆಯನ್ನು ಸಂಸದ ಎಸ್.ಪಿ.ಮುದ್ದಹನುಮೇಗೌಡ ಉದ್ಘಾಟಿಸಿದರು.
ಕಳೆದ 8 ವರ್ಷಗಳ ಹಿಂದೆ ಉಪ್ಪಾರಹಳ್ಳಿಯ ರೈಲ್ವೆ ಒವರ್ ಬ್ರಿಡ್ಜ್ ಉದ್ಘಾಟನೆಗೆ ನಂತರ ಅದರಲ್ಲಿದ್ದ ಹಲವಾರು ಲೋಪ ದೋಷಗಳಿಂದ ಸೈಕಲ್ ಸವಾರರು,ತಳ್ಳು ಗಾಡಿಯವರು,ಶಾಲಾ ಮಕ್ಕಳು,ಆಟೋ ರಿಕ್ಷಾಗಳು ಓಡಾಡಲು ತೀವ್ರ ತೊಂದರೆ ಯಾಗಿತ್ತು.ಈ ಹಿನ್ನೆಲೆಯಲ್ಲಿ ಈ ಭಾಗದ ನಾಗರಿಕರು ಸಂಸದರಿಗೆ ಮನವಿ ಸಲ್ಲಿಸಿ, ಸಣ್ಣ ವಾಹನಗಳ ಓಡಾಟಕ್ಕೆ ಅನುಕೂಲ ವಾಗುವಂತೆ ಅಚಿಡರ್ ಪಾಸ್ ನಿರ್ಮಿಸಿಕೊಡಲು ಮನವಿ ಮಾಡಿದ್ದರು. ನಾಗರಿಕರ ಮನವಿಗೆ ಸ್ಪಂದಿಸಿದ ಸಂಸದರು, ರೈಲ್ವೆ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ,ಅಂಡರ್ ಪಾಸ್ ಮಂಜೂರು ಮಾಡಿಸಿ,ನಿರ್ಮಾಣ ಕಾಮಗಾರಿಯನ್ನು ಪೂರ್ಣ ಗೊಳಿಸಿದ್ದರು.ಸದರಿ ಅಂಡರ್ ಪಾಸನ್ನು ಸಾರ್ವಜನಿಕರ ಓಡಾಟಕ್ಕೆ ಇಂದು ಮುಕ್ತಗೊಳಿಸಲಾಯಿತು.
ಈ ವೇಳೆ ಮಾತನಾಡಿದ ಸಂಸದ ಎಸ್.ಪಿ.ಮುದ್ದಹನುಮೇಗೌಡ,ಸಂಸದನಾಗಿ ಜನರ ಭಾವನೆಗಳಿಗೆ ಸ್ಪಂದಿಸಿ ಕೆಲಸ ಮಾಡುತ್ತಿರುವುದಕ್ಕೆ ಇದು ಸಾಕ್ಷಿಯಾಗಿದೆ.ಕಳೆದ ಒಂದು ವರ್ಷದ ಹಿಂದೆ ಜನರು ಮನವಿ ಮಾಡಿ, ಒತ್ತಡ ತಂದಿದ್ದರೂ, ರೈಲ್ವೆ ಯೋಜನೆಯಲ್ಲಿ ಪ್ರಸ್ತಾವನೆ ಇಲ್ಲದಿದ್ದರೂ ಜನರ ಅನುಕೂಲಕ್ಕಾಗಿ ಅಂಡರ್ ಪಾಸ್ ನಿರ್ಮಿಸಲಾಗಿದೆ. ಎರಡು ಬದಿಯ ನಗರಪಾಲಿಕೆ ಸದಸ್ಯರು ಸಹಕಾರ,ಶಾಸಕ ಡಾ.ರಫೀಕ್ ಅಹಮದ್ ಅವರ ಸಹಕಾರದಿಂದ ಬಹುಬೇಗ ಕಾಮಗಾರಿ ಪೂರ್ಣ ಗೊಳಿಸಲಾಗಿದೆ.ಪ್ರತಿಭಾರಿ ಈ ವಿಚಾರವಾಗಿ ರೈಲ್ವೆ ಅಧಿಕಾರಿಗಳನ್ನು ಭೇಟಿ ಮಾಡಿದ ಸಂದರ್ಭದಲ್ಲಿಯೂ ಅವರು ನಮ್ಮೊಂದಿಗೆ ಇದ್ದು, ಸಹಕಾರ ನೀಡಿದ್ದಾರೆ.ಜನರ ಬೇಡಿಕೆಗಳಿಗೆ ಅನುಗುಣವಾಗಿ ಎಲ್ಲಾ ಕೆಲಸ ಕಾರ್ಯ ಮಾಡಲಿದ್ದೇವೆ.ಇದೇ ರೀತಿ ಶಾಂತಿನಗರದ ಅಂಡರ್‍ಪಾಸ್ ಕಾಮಗಾರಿ ಸಹ ಆರಂಭವಾಗಿದೆ.ಇದರ ಜೊತೆಗೆ ಗೋಕುಲ ಬಡಾವಣೆಯಲ್ಲಿಯೂ ತುರ್ತಾಗಿ ಅಚಿಡರ್‍ಪಾಸ್ ಆಗಬೇಕಾಗಿದೆ.ಈ ನಿಟ್ಟಿನಲ್ಲಿ ತಕ್ಷಣವೇ ಕಾರ್ಯಪ್ರವೃತ್ತನಾಗಲಿದ್ದೇನೆ.ಶೀಘ್ರದಲ್ಲಿಯೇ ಮೇಲ್ದರ್ಜೆಗೇರಿರುವ ತುಮಕೂರು ರೈಲ್ವೆ ನಿಲ್ದಾಣದ ಉದ್ಘಾಟನೆ ಕಾರ್ಯಕ್ರಮ ಸಹ ಜರುಗಲಿದೆ ಎಂದರು.
ಶಾಸಕ ಡಾ.ರಫೀಕ್ ಅಹಮದ್ ಮಾತನಾಡಿ,ಉಪ್ಪಾರಹಳ್ಳಿ ರೈಲ್ವೆ ಮೇಲ್ಸೇತುವೆ ಅತ್ಯಂತ ಅವ್ಶೆಜ್ಞಾನಿಕವಾಗಿ ನಿರ್ಮಾಣವಾದ ಕಾರಣ,ಉಪ್ಪಾರಹಳ್ಳಿ,ಶಾಂತಿನಗರ,ಬಡ್ಡಿಹಳ್ಳಿ,ಇನ್ನಿತರ ಬಡಾವಣೆಯ ಜನರಿಗೆ ಸಾಕಷ್ಟು ತೊಂದರೆಯಾದ ಪರಿಣಾಮ ನಾಗರಿಕರು,ಸಂಸದರು ಮತ್ತು ತಮ್ಮ ಬಳಿ ಅಂಡರ್‍ಪಾಸ್ ನಿರ್ಮಾಣಕ್ಕೆ ಮನವಿ ಮಾಡಿದ್ದರೂ, ಪ್ರಸ್ತಾವನೆಯಲ್ಲಿ ಇಲ್ಲದಿದ್ದರೂ ಸಾವಿರಾರು ಜನರಿಗೆ ಅನುಕೂಲವಾಗುವ ಹಿನ್ನೆಲೆಯಲ್ಲಿ ಸಂಸದರು ರೈಲ್ವೆ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ಸುಮಾರು 99 ಲಕ್ಷ ರೂ ವೆಚ್ಚದಲ್ಲಿ ಉಪ್ಪಾರಹಳ್ಳಿ ಬಳಿ ಅಂಡರ್ ಪಾಸ್ ನಿರ್ಮಿಸಿ,ಇಂದು ಲೋಕಾರ್ಪಣೆಗೊಳಿಸಿದ್ದಾರೆ.ಇದಕ್ಕಾಗಿ ಸಂಸದರಿಗೆ ಅಭಿನಂದನೆ ಸಲ್ಲಿಸುತ್ತೇನೆ.ಶಾಂತಿನಗರ ಅಂಡರ್ ಪಾಸ್ ಕಾಮಗಾರಿ ಆರಂಭವಾಗಿದೆ.ಶೀಘ್ರದಲ್ಲಿಯೇ ಉದ್ಘಾಟನೆಯನ್ನು ನೆರವೇರಿಸಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ನಗರಪಾಲಿಕೆ ಉಪಮೇಯರ್ ಫರ್ಜಾನಾಖಾನಂ, ಪಾಲಿಕೆ ಸದಸ್ಯರಾದ ಮುಜೀದಾಖಾನಂ, ಸೈಯದ್ ನಯಾಜ್, ಕರುಣಾರಾಧ್ಯ ಮತ್ತಿತರರು ಪಾಲ್ಗೊಂಡಿದ್ದರು.







