Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಕಿಡ್ನಿ, ಹೃದಯದ ಬಳಿಕ ನಡೆದಿದೆ ಯಶಸ್ವಿ...

ಕಿಡ್ನಿ, ಹೃದಯದ ಬಳಿಕ ನಡೆದಿದೆ ಯಶಸ್ವಿ ತಲೆಯ ಕಸಿ !

ವೈದ್ಯಕೀಯ ಕ್ಷೇತ್ರದಲ್ಲಿ ಮಹತ್ವದ ಬೆಳವಣಿಗೆ

ವಾರ್ತಾಭಾರತಿವಾರ್ತಾಭಾರತಿ19 Nov 2017 11:03 PM IST
share
ಕಿಡ್ನಿ, ಹೃದಯದ ಬಳಿಕ ನಡೆದಿದೆ ಯಶಸ್ವಿ ತಲೆಯ ಕಸಿ  !

ಕಿಡ್ನಿ, ಹೃದಯ ಹೀಗೆ ಮಾನವನ ಹಲವು ಅಂಗಾಂಗಗಳ ಕಸಿಯ ಬಗ್ಗೆ ಕೇಳಿದ್ದೇವೆ. ಆದರೆ ಜಗತ್ತಿನಲ್ಲಿ ಇದೇ ಮೊದಲ ಬಾರಿಗೆ ಮಾನವ ತಲೆಯ ಕಸಿ ನಡೆಸಿರುವುದಾಗಿ ವೈದ್ಯರೊಬ್ಬರು ತಿಳಿಸಿದ್ದಾರೆ.

ಈ ರೀತಿ ತಲೆಯ ಕಸಿ ಶಸ್ತ್ರಚಿಕಿತ್ಸೆಯನ್ನು ಮೃತದೇಹವೊಂದರ ಮೇಲೆ ನಡೆಸಲಾಗಿದ್ದು ಅದು ಯಶಸ್ವಿಯಾಗಿದೆ ಎಂದು ತಿಳಿಸಿರುವ ಇಟಲಿ ಮೂಲದ ವಿವಾದಾತ್ಮಕ ವೈದ್ಯ ಡಾ. ಸರ್ಜಿಯೊ ಕಾನವೆರೊ ತಾನು ಮತ್ತು ತನ್ನ ತಂಡ ಈಗ ಈ ಶಸ್ತ್ರಚಿಕಿತ್ಸೆಯನ್ನು ಜೀವಂತ ಮನುಷ್ಯರ ಮೇಲೆ ನಡೆಸಲು ಸಿದ್ಧರಾಗಿದ್ದೇವೆ ಎಂದು ತಿಳಿಸಿದ್ದಾರೆ.

 ತಲೆಕಸಿಯ ಶಸ್ತ್ರಚಿಕಿತ್ಸೆಯನ್ನು ಡಾ. ಕ್ಸಿಯೊಪಿಂಗ್ ರೆನ್ ಅವರ ನೇತೃತ್ವದಲ್ಲಿ ನಡೆಸಲಾಗಿದ್ದು ಇವರು ಕಳೆದ ವರ್ಷ ಕೋತಿಯ ತಲೆಯ ಕಸಿಯನ್ನು ಮಾಡಿದ್ದರು ಎಂದು ಟ್ಯೂರಿನ್ ಅಡ್ವಾನ್ಸ್ಡ್ ನ್ಯೂರೊಮೊಡ್ಯುಲೇಶನ್ ಯುನಿವರ್ಸಿಟಿಯ ಮುಖ್ಯಸ್ಥರಾಗಿರುವ ಡಾ. ಸರ್ಜಿಯೊ ತಿಳಿಸಿದ್ದಾರೆ.

ಹರ್ಬಿನ್ ವೈದ್ಯಕೀಯ ವಿಶ್ವವಿದ್ಯಾಲಯದಲ್ಲಿ ನಡೆದ ಈ ಶಸ್ತ್ರಚಿಕಿತ್ಸೆಯಿಂದ ಬೆನ್ನೆಲುಬು, ನರಗಳು ಮತ್ತು ರಕ್ತಗ್ರಂಥಿಗಳ ಮರುಜೋಡಣೆ ಮೂಲಕ ಎರಡು ದೇಹಗಳನ್ನು ಒಂದಾಗಿಸಲು ಸಾಧ್ಯವಾಗುವ ತನ್ನ ತಂತ್ರ ಫಲನೀಡುತ್ತದೆ ಎಂಬುದು ಸಾಬೀತಾಗುತ್ತದೆ ಎಂದು ಕಾನವೆರೊ ತಿಳಿಸಿದ್ದಾರೆ. ಬೆನ್ನುಮೂಳೆಯ ಕಾಯಿಲೆಯಿಂದ ಬಳಲುತ್ತಿರುವ ರಷ್ಯ ಮೂಲದ ಕಂಪ್ಯೂಟರ್ ವಿಜ್ಞಾನಿ ವಲೆರಿ ಸ್ಪಿರಿಡೊನೊವ್ ಈ ಶಸ್ತ್ರಚಿಕಿತ್ಸೆಗೆ ಒಳಗಾದ ಮೊದಲ ಜೀವಂತ ವ್ಯಕ್ತಿಯಾಗಲು ಒಪ್ಪಿಕೊಂಡಿದ್ದರೂ ವೈದ್ಯರ ತಂಡ ಮಾತ್ರ ಈ ಶಸ್ತ್ರಚಿಕಿತ್ಸೆಯನ್ನು ಮೊದಲಿಗೆ ಚೈನೀಸ್ ವ್ಯಕ್ತಿ ಮೇಲೆ ನಡೆಸುವುದಾಗಿ ಹೇಳಿಕೊಂಡಿದೆ. ಯಾಕೆಂದರೆ ಚೈನೀಸ್ ವ್ಯಕ್ತಿ ದೇಹದಾನ ಮಾಡುವ ಸಾಧ್ಯತೆಗಳು ಹೆಚ್ಚಿವೆ ಎಂದವರು ತಿಳಿಸಿದ್ದಾರೆ.

ಈ ಶಸ್ತ್ರಚಿಕಿತ್ಸೆಯನ್ನು ಇಲಿಗಳು ಮತ್ತು ಕೋತಿಗಳ ಮೇಲೆ ಯಶಸ್ವಿಯಾಗಿ ನಡೆಸಿರುವುದಾಗಿ ತಿಳಿಸಿರುವ ಕನಾವೆರೊ ಮೃತದೇಹದ ಮೇಲೆ ತಲೆಕಸಿ ಶಸ್ತ್ರಚಿಕಿತ್ಸೆ ಮಾಡಿದ ಮತ್ತು ಪ್ರಥಮ ಜೀವಂತ ಮನುಷ್ಯರ ಮೇಲೆ ಈ ಶಸ್ತ್ರಚಿಕಿತ್ಸೆ ಮಾಡಿರುವ ಬಗ್ಗೆ ಪ್ರಕ್ರಿಯೆನ್ನು ಮತ್ತು ಮಾಹಿತಿಯನ್ನು ಹೊಂದಿರುವ ವೈಜ್ಞಾನಿಕ ದಾಖಲೆಗಳನ್ನು ಕೆಲವೇ ದಿನಗಳಲ್ಲಿ ಬಿಡುಗಡೆ ಮಾಡುವುದಾಗಿ ತಿಳಿಸಿದ್ದಾರೆ.

ವಜ್ರದಿಂದ ಮಾಡಲ್ಪಟ್ಟ ಚಾಕುವಿನಿಂದ ದಾನಿ ಮತ್ತು ದಾನ ಪಡೆಯುವಾತನ ಬೆನ್ನುಹುರಿಯನ್ನು ತುಂಡು ಮಾಡಲು ಯೋಜಿಸಿರುವ ಕನಾವೆರೊ ಶಸ್ತ್ರಚಿಕಿತ್ಸೆಯ ಸಮಯದಲ್ಲಿ ದಾನಪಡೆಯುವಾತನ ಮೆದುಳನ್ನು ಸಂರಕ್ಷಿಸುವ ಸಲುವಾಗಿ ಅದನ್ನು ಲಘೂಷ್ಣತೆಯ (ಹೈಪೊಥರ್ಮಿಯಾ) ಹಂತಕ್ಕೆ ತಂಪಾಗಿಸಲಾಗುವುದು ಎಂದು ತಿಳಿಸಿದ್ದಾರೆ. ಚೀನಾದಲ್ಲಿ ತನ್ನ ತಂಡವು ಈ ತಂತ್ರವನ್ನು ಮಾನವ ಮೃತದೇಹದ ಮೇಲೆ ಪ್ರಯೋಗಿಸಿದ್ದಾರೆ ಎಂದು ವಿಜ್ಞಾನಿಯು ಹೇಳಿಕೊಂಡಿದ್ದು. ಅದರ ಹೊರತಾಗಿ ಎಲ್ಲಿಯೂ ಮಾನವ ದೇಹದ ಮೇಲೆ ಈ ರೀತಿಯ ಪ್ರಯೋಗ ನಡೆದಿಲ್ಲ ಎಂದು ಯುಎಸ್‌ಎ ಟುಡೆ ವರದಿ ಮಾಡಿದೆ.

ಬಹುತೇಕ ವೈದ್ಯಕೀಯ ತಜ್ಞರು ಈ ಪ್ರಕ್ರಿಯೆ ಅತ್ಯಂತ ಅಪಾಯದಿಂದ ಕೂಡಿದೆ ಮತ್ತು ಇದೊಂದು ಜೀವವೈದ್ಯಕೀಯ ಸಿದ್ಧಾಂತದ ಪ್ರಶ್ನೆಯಾಗಿದೆ ಎಂದು ತಿಳಿಸುತ್ತಾರೆ. ಇಂಥಾ ಪ್ರಯೋಗಗಳನ್ನು ನಡೆಸುವುದಕ್ಕೂ ಮುನ್ನ ಸಾಕಷ್ಟು ಅಧ್ಯಯನ ನಡೆಸುವ ಅಗತ್ಯವಿದೆ ಎಂದು ತಿಳಿಸುವ ಜಾರ್ಜ್‌ಟೌನ್ ವಿಶ್ವವಿದ್ಯಾಲಯದ ಉಪನ್ಯಾಸಕರಾದ ಡಾ. ಜೇಮ್ಸ್ ಜಿಯೊರ್ಡಾನೊ, ಕನಾವೆರೊ ಇದರ ಬದಲಾಗಿ ಬೆನ್ನುಹುರಿಯನ್ನು ಮರುನಿರ್ಮಿಸುವ ಪ್ರಯತ್ನವನ್ನು ನಡೆಸಿದ್ದರೆ ರೋಗಿಗಳಿಗೆ ಹೆಚ್ಚು ಉಪಯೋಗವಾಗುತ್ತಿತ್ತು ಎಂದು ಹೇಳಿದ್ದಾರೆ. ಆದರೆ ಕನಾವೆರೊ ಮಾಡಿರುವ ಸಾಧನೆಗೆ ಅವರು ಕೂಡಾ ಮೆಚ್ಚುಗೆ ಸೂಚಿಸುತ್ತಾರೆ.

 ಈ ಶಸ್ತ್ರಚಿಕಿತ್ಸೆಯಲ್ಲಿ ದಾನಪಡೆದ ರೋಗಿಯ ಗುರುತು ಮತ್ತು ಹಕ್ಕಿಗೆ ಸಂಬಂಧಪಟ್ಟಂತೆ ಹಲವು ಪ್ರಮುಖ ಪ್ರಶ್ನೆಗಳಿಗೆ ಇನ್ನು ಕೂಡಾ ಉತ್ತರ ನೀಡಲಾಗಿಲ್ಲ ಎಂದು ಹಾವರ್ಡ್ ವಿಶ್ವವಿದ್ಯಾಲಯದಲ್ಲಿ ಜೀವವೈದ್ಯಕೀಯ ಸಿದ್ಧಾಂತಜ್ಞರಾಗಿರುವ ಅಸ್ಸ ಪಾಸ್ಕಲೆವ್.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X