ಜಾಫರ್ ಸಾಧುಗೆ ಉತ್ತಮ ರೈಡರ್,ಎ.ಆರ್.ಶಬ್ಬೀರ್ ವೇಗದ ಚಾಲಕ ಪ್ರಶಸ್ತಿ
ರಾಜ್ಯಮಟ್ಟದ ಡರ್ಟ್ಟ್ರಾಕ್ ಮೋಟಾರ್ ಸ್ಟೋರ್ಟ್

ಎ.ಆರ್.ಶಬ್ಬೀರ್
ತುಮಕೂರು,ನ.19:ನಗರದ ಹೊರವಲಯದ ಯಲ್ಲಾಪುರದಲ್ಲಿ ಆಟೋ ಟ್ರಾಕ್ ಮ್ಯಾಗಜೀನ್ನ 10 ನೇ ವಾರ್ಷಿಕೋತ್ಸವದ ಅಂಗವಾಗಿ ವಾಸು ಆಟೋ ಸ್ಟೋರ್ಟ್ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಡರ್ಟ್ ಟ್ರಾಕ್ಟ್ ಸ್ಪರ್ಧೆಯ ದ್ವಿಚಕ್ರವಾಹನ ವಿಭಾಗದಲ್ಲಿ ಜಾಫರ್ ಸಾಧು ಉತ್ತಮ ರೈಡರ್ ಮತ್ತು ನಾಲ್ಕು ಚಕ್ರವಿಭಾಗದಲ್ಲಿ ಎ.ಆರ್.ಶಬ್ಬೀರ್ ವೇಗದ ಚಾಲಕನಾಗಿ ಬಹುಮಾನ ಪಡೆದಿದ್ದಾರೆ.
ದ್ವಿಚಕ್ರವಾಹನದ ಮೂರು ವಿಭಾಗದಲ್ಲಿ ನಲವತ್ತು ದ್ವಿಚಕ್ರ ವಾಹನಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದು,ನೋವಿಸ್ನಲ್ಲಿ ತೃತೀಯ,ಎಕ್ಸ್ ಪರ್ಟ್ ಕ್ಲಾಸ್ ನಲ್ಲಿ ದ್ವಿತೀಯ ಮತ್ತು ಇಚಿಡಿಯನ್ ಓಪನ್ ವಿಭಾಗದಲ್ಲಿ ಮೊದಲು ಸ್ಥಾನ ಪಡೆದ ಜಾಫರ್ ಸಾಧು ಉತ್ತಮ ರೈಡರ್ ಆಗಿ ಹೊರಹೊಮ್ಮಿದ್ದಾರೆ.
ಉಳಿದಂತೆ ನೋವಿಸ್ನಲ್ಲಿ ಸತೀಶ್ ಪ್ರಥಮ, ಸೈಯದ್ ಇಬ್ರಾಹಿಂ ದ್ವಿತೀಯ ಸ್ಥಾನ ಪಡೆದರೆ,ಎಕ್ಸ್ ಪರ್ಟ್ ಕ್ಲಾಸ್ನಲ್ಲಿ ಮೊಹಮದ್ ಝಾಹಿರ್ ಪ್ರಥಮ ಮತ್ತು ಸತೀಶ್ ತೃತೀಯ ಸ್ಥಾನ ಪಡೆದಿದ್ದಾರೆ. ಇಚಿಡಿಯನ್ ಓಪನ್ನಲ್ಲಿ ಸತೀಶ್ ದ್ವೀತಿಯ ಮತ್ತು ಮೊಹಮದ್ ಝಾಹಿರ್ ತೃತೀಯ ಸ್ಥಾನ ಪಡೆದಿದ್ದಾರೆ. ಪ್ರತಿ ವಿಭಾಗದಲ್ಲಿಯೂ ಓರ್ವ ರೈಡರ್ 14 ಸುತ್ತು ವಾಹನ ಚಲಾಯಿಸಬೇಕಾಗಿತ್ತು.
ನಾಲ್ಕು ಚಕ್ರವಿಭಾಗದಲ್ಲಿ ಸುಮಾರು 60ಕ್ಕೂ ಹೆಚ್ಚು ವಾಹನಗಳು ಭಾಗವಹಿಸಿದ್ದು,800ಸಿಸಿಯಲ್ಲಿ ಪ್ರಥಮ ಬಹುಮಾನವನ್ನು ರಾಜಶೇಖರಗೌಡ,ದ್ವಿತೀಯ ಸ್ಥಾನವನ್ನು ಬಬನ್ಖಾನ್, ತೃತೀಯ ಸ್ಥಾನವನ್ನು ಶ್ರೀಹರಿ ಮೂಡಿಗೆರೆ ಪಡೆದಿದ್ದಾರೆ.
ಅದೇ ರೀತಿ ನೊವಿಸ್ ನಲ್ಲಿ ಪ್ರಥಮ ವಿವೇಕ್ ಮೂಡಿಗೆರೆ,ದ್ವಿತೀಯ ಫ್ಹಾರೂಕ್ ಮೂಡಿಗೆರೆ,ಇಂಡಿಯನ್ ಓಪನ್ ನಲ್ಲಿ ಎ.ಆರ್.ಶಬ್ಬೀರ್ ಪ್ರಥಮ, ಲೋಕೇಶ್ ಗೌಡ ದ್ವಿತೀಯ,ಬಬನ್ಖಾನ್ ತೃತೀಯ,ನೋವಿಸ್ನಲ್ಲಿ ರಕ್ಷೀತ್ ಐಯ್ಯರ್ ಪ್ರಥಮ, ನವೀನ್ ಪುಟ್ಟಣ್ಣ ದ್ವಿತೀಯ ಸ್ಥಾನ ಪಡೆದಿದ್ದಾರೆ.
1001-1400 ಸಿಸಿ ವಿಭಾಗದಲ್ಲಿ ರೂಪೇಶ್ ಬಿ.ಸಿ. ಪ್ರಥಮ, ಅಶ್ವಿನ್ ರೆಡ್ಡಿ ದ್ವಿತೀಯ, ಎಆರ್.ಶಬ್ಬೀರ ತೃತೀಯ ಸ್ಥಾನ ಪಡೆದಿದ್ದಾರೆ.ಇದೇ ವಿಭಾಗದ ನೋವಿಸ್ನಲ್ಲಿ ನಿಜಾಮುದ್ದೀನ್ ಪ್ರಥಮ್, ನವೀನ್ ಪುಟ್ಟಣ್ಣ ದ್ವಿತೀಯ ಸ್ಥಾನ ಪಡೆದಿದ್ದಾರೆ.
1401-1600 ಸಿಸಿ ವಿಭಾಗದಲ್ಲಿ ಬಬನ್ಖಾನ್ ಪ್ರಥಮ, ಲೋಕೇಶ್ ಗೌಡ ದ್ವಿತೀಯ ಮತ್ತು ರೂಪೇಶ್.ಬಿ.ಸಿ. ತೃತೀಯ ಸ್ಥಾನ ಪಡೆದಿದ್ದಾರೆ. ಇದೇ ವಿಭಾಗದ ನೋವಿಸ್ ನಲ್ಲಿ ರಕ್ಷಿತ್ ಐಯ್ಯರ್ ಪ್ರಥಮ ಮತ್ತು ಅವಿನಾಶ್ ದ್ವಿತೀಯ ಸ್ಥಾನ ಪಡೆದಿದ್ದಾರೆ







