Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಓ ಮೆಣಸೇ
  4. ಓ ಮೆಣಸೇ..

ಓ ಮೆಣಸೇ..

ಪಿ.ಎ.ರೈಪಿ.ಎ.ರೈ20 Nov 2017 12:20 AM IST
share
ಓ ಮೆಣಸೇ..

 ಮೀನಿನ ಎಣ್ಣೆ ಮಾರುವ ಸಚಿವ ಪ್ರಮೋದ್ ಮಧ್ವರಾಜ್ ಜನರಿಗೆ ಟೋಪಿ ಹಾಕುತ್ತಾರೆ - ಡಿ.ವಿ.ಸದಾನಂದ ಗೌಡ, ಕೇಂದ್ರ ಸಚಿವ

 ಸಿದ್ದರಾಮಯ್ಯರ ತಲೆಯ ಅಳತೆಗೆ ತಕ್ಕ ಟೋಪಿಯೊಂದನ್ನು ಹೊಲಿಯುವುದರಲ್ಲಿ ಮಗ್ನರಾಗಿದ್ದಾರೆ, ಗಡಿಬಿಡಿ ಮಾಡಬೇಡಿ.

---------------------
ಈಶ್ವರಪ್ಪ ಮೈಯಲ್ಲಿರುವುದು ಪಿಶಾಚಿಗಳ ರಕ್ತ - ಸಿದ್ದರಾಮಯ್ಯ, ಮುಖ್ಯಮಂತ್ರಿ

ಇದನ್ನು ಕೇಳಿ ಪಿಶಾಚಿಗಳೆಲ್ಲ ತಮ್ಮ ತಮ್ಮ ರಕ್ತ ಪರೀಕ್ಷೆ ಮಾಡಿಕೊಳ್ಳಲು ಪ್ರಯೋಗಾಲಯದಲ್ಲಿ ಸಾಲು ನಿಂತಿವೆ.
---------------------
ಸಿ.ಎಂ.ಸಿದ್ದರಾಮಯ್ಯ ಭೇಟಿ ನೀಡಿದರೆ ಉಡುಪಿ ಕೃಷ್ಣಮಠ ಅಪವಿತ್ರವಾಗುತ್ತದೆ - ಕೆ.ಎಸ್.ಈಶ್ವರಪ್ಪ, ಬಿಜೆಪಿ ನಾಯಕ

ಅವರಿಗಾಗಿ ಕನಕನ ಕಿಂಡಿ ಕೊರೆದಿಟ್ಟರೆ ನಿಮಗಾಗಿ ಪೇಜಾವರ ಶ್ರೀಗಳು ಸಣ್ಣದೊಂದು ಬಿಲ ಕೊರೆದು ಇಟ್ಟಿದ್ದಾರೆ. ಅದರಲ್ಲೇ ನೀವು ಇಣುಕಬೇಕಾಗುತ್ತದೆ.

---------------------
ಪ್ರಶ್ನಿಸುವವರನ್ನೇ ಟೀಕಿಸುವುದು ಅಪಾಯಕಾರಿ - ಪ್ರಕಾಶ್ ರೈ, ನಟ

ಪ್ರಶ್ನಿಸುವವರನ್ನು ಕೊಲ್ಲುವುದಕ್ಕಿಂತ ವಾಸಿ.

---------------------
ಇರುವುದೊಂದೇ ಕಿಂಡಿ, ಅದು ಕನಕನ ಕಿಂಡಿ - ವಿಶ್ವೇಶ ತೀರ್ಥ ಸ್ವಾಮೀಜಿ, ಪೇಜಾವರ ಮಠ

ಕಿಂಡಿ ಕುರುಬರ ಪಾಲಿಗೆ ಬಾಗಿಲು ಆಗುವುದು ಯಾವಾಗ?
---------------------

ಕಾಂಗ್ರೆಸ್ ಹೈಕಮಾಂಡ್ ವೀಕ್ ಆಗಿದೆ - ಜಗದೀಶ್ ಶೆಟ್ಟ್ಟರ್, ಬಿಜೆಪಿ ನಾಯಕ

ಅದಕ್ಕಾಗಿ ಬಿಜೆಪಿಯ ವಿರುದ್ಧ ನೀವೇ ಕಾರ್ಯಾಚರಣೆಗೆ ಇಳಿದ ಹಾಗಿದೆ.

---------------------

ಯೋಗ ಯಾವುದೇ ಜಾತಿಯ ಅಭ್ಯಾಸವಲ್ಲ - ಬಾಬಾರಾಮ್‌ದೇವ್, ಯೋಗ ಗುರು

ಅದೀಗ ಅಭ್ಯಾಸವಲ್ಲ, ಉದ್ಯಮ.

---------------------

ನಿದ್ದೆಯಲ್ಲಿರುವ ಕುಂಭಕರ್ಣ ಸಿದ್ದರಾಮಯ್ಯರನ್ನು ಬದಿಗೊತ್ತಿ ರಾಮಭಕ್ತ ಯಡಿಯೂರಪ್ಪ ಬರುತ್ತಿದ್ದಾರೆ - ನಳಿನ್ ಕುಮಾರ್ ಕಟೀಲು, ಸಂಸದ

ಆಜನ್ಮ ಬ್ರಹ್ಮಚಾರಿ ಆಂಜನೇಯನಿಗೆ ಯಡಿಯೂರಪ್ಪರನ್ನು ಹೋಲಿಸಿರುವುದು ವ್ಯಂಗ್ಯವಲ್ಲದೆ ಇನ್ನೇನು?
---------------------

ಯಡಿಯೂರಪ್ಪರ ಆಡಳಿತ ಈಗಿನ ಕಾಂಗ್ರೆಸ್ ಆಡಳಿತಕ್ಕಿಂತ ಉತ್ತಮವಾಗಿತ್ತು - ಜಯಪ್ರಕಾಶ್ ಹೆಗ್ಡೆ, ಮಾಜಿ ಸಂಸದ

ದೋಚುವವರ ಪಾಲಿಗೆ ಮಾತ್ರ.

---------------------
 ಭಾರತದಲ್ಲಿ ಶೀಘ್ರವೇ ರಾಮರಾಜ್ಯ ನಿರ್ಮಾಣವಾಗಲಿದೆ - ಯೋಗಿ ಆದಿತ್ಯನಾಥ್, ಉ.ಪ.ಮುಖ್ಯಮಂತ್ರಿ

ಹೆಣ್ಣು ಮಕ್ಕಳೆಲ್ಲ ತಮ್ಮ ತಮ್ಮ ಕಿವಿ, ಮೂಗುಗಳ ರಕ್ಷಣೆಗಾಗಿ ರಾವಣನನ್ನು ಕರೆಯಬೇಕಾಗಿದೆ.
---------------------

ದೇವಾಲಯಕ್ಕೆ ಹೋದ ದಲಿತರು ಉದ್ಧಾರವಾಗಿಲ್ಲ - ಎಚ್.ಆಂಜನೇಯ, ಸಚಿವ

ದಲಿತರ ಉದ್ಧಾರ ಬೇಡವೆಂದು ತಾವು ಕೃಷ್ಣ ಮಠಕ್ಕೆ ಹೋದಿರೆಂದು ಕಾಣುತ್ತದೆ.

---------------------

ಭಾರತ ಜಾತ್ಯತೀತ ರಾಷ್ಟ್ರವಾಗಬೇಕು - ವರುಣ್ ಗಾಂಧಿ, ಸಂಸದ

ಬಿಜೆಪಿ ನಾಯಕರೊಂದಿಗೆ ಭಿನ್ನಮತ ಎದುರಾದಾಗಷ್ಟೇ ಜಾತ್ಯತೀತ ಪದ ನೆನಪಾದರೆ ಸಾಕೇ?
---------------------

ಕನ್ನಡದ ಶ್ರೇಷ್ಠ ಕೃತಿ ಇಂಗ್ಲಿಷ್‌ಗೆ ಅನುವಾದಗೊಂಡರೆ ನೊಬೆಲ್ ಪ್ರಶಸ್ತಿ ಗ್ಯಾರಂಟಿ - ವೀರಪ್ಪ ಮೊಯ್ಲಿ, ಸಂಸದ

ತಮ್ಮ ಕಾದಂಬರಿಗಳನ್ನು ಇಂಗ್ಲಿಷ್‌ಗೆ ಅನುವಾದಿಸಲು ಹೊರಟಂತಿದೆ.

---------------------
ಜೀವ ಇರುವವರೆಗೆ ಬಿಜೆಪಿ ಬಿಡುವುದಿಲ್ಲ - ರಘುಪತಿ ಭಟ್, ಮಾಜಿ ಶಾಸಕ

ಬಿಜೆಪಿಯ ಜೀವ ಇರುವವರೆಗೆ ತಾನೆ?
---------------------
ಸದ್ಯಕ್ಕಂತೂ ಗುಜರಾತ್‌ನಲ್ಲಿ ಬಿಜೆಪಿಗೆ ಯಾವುದೇ ಅಪಾಯ ಇಲ್ಲ - ನಿತೀಶ್ ಕುಮಾರ್, ಬಿಹಾರ ಮುಖ್ಯಮಂತ್ರಿ

ಜನರಿಗೆ ಅಪಾಯವಿದೆಯೆಂದಾಯಿತು.

---------------------

ನಾನು ನಿದ್ದೆಗೆಟ್ಟಿದ್ದರೆ ಅದು ಜನರಿಗಾಗಿ - ರಮಾನಾಥ ರೈ, ಸಚಿವ

ನಿಮ್ಮನ್ನು ನಿದ್ದೆ ಕೆಡಿಸುವಂತೆ ಮಾಡಿದ ಪೂಜಾರಿ ಮತ್ತು ಪ್ರಭಾಕರ ಭಟ್ಟರಿಗೆ ಹೆಗ್ಗಳಿಕೆ ಸಲ್ಲುತ್ತದೆ.

---------------------
ಈಗ ಕಾಂಗ್ರೆಸ್‌ನಲ್ಲಿರುವವರು ನಿಜವಾದ ಕಾಂಗ್ರೆಸಿಗರಲ್ಲ - ವರ್ತೂರ್ ಪ್ರಕಾಶ್, ಶಾಸಕ

ನೀವೀಗ ನಿಜವಾಗಿ ಯಾರು ಎನ್ನುವುದನ್ನು ಬಹಿರಂಗಪಡಿಸಿ.

---------------------
ಕರ್ನಾಟಕದಲ್ಲಿ ಭಗವಾಧ್ವಜದಡಿ ರಾಮರಾಜ್ಯ ನಿರ್ಮಾಣವಾಗಬೇಕು - ಅನಂತಕುಮಾರ ಹೆಗಡೆ, ಕೇಂದ್ರ ಸಚಿವ 

ಕನ್ನಡ ಧ್ವಜ ಹಿಡಿದ ತರುಣರು ಅದಕ್ಕೆ ಆಸ್ಪದ ನೀಡಲಾರರು.

---------------------
ನಾನು ಸಿನೆಮಾವನ್ನು ಸಿನೆಮಾವಾಗಿಯೇ ನೋಡುತ್ತೇನೆ - ಅಬ್ಬಾಸ್ ನಖ್ವ್ವಿ,ಕೇಂದ್ರ ಸಚಿವ

ಇತಿಹಾಸವನ್ನು ಸಿನಿಮಾದಲ್ಲಿ ಹುಡುಕುವ ತಮ್ಮ ಸ್ನೇಹಿತರಿಗೂ ಇದನ್ನು ಹೇಳಿ.

---------------------

ಕುಟುಂಬ ಯೋಜನೆಯನ್ನು ಪ್ರೋತ್ಸಾಹಿಸಲು ಕೆಲ ರಾಜಕಾರಣಿಗಳು ಹಿಂದೇಟು ಹಾಕುತ್ತಾರೆ - ವೆಂಕಯ್ಯ ನಾಯ್ಡು, ಉಪರಾಷ್ಟ್ರಪತಿ

ಕುಟುಂಬ ಯೋಜನೆ ಯಶಸ್ವಿಗಾಗಿಯೇ ಪ್ರಧಾನಿ ಮೋದಿಯವರು ಪತ್ನಿಯನ್ನು ತ್ಯಜಿಸಿರುವುದಂತೆ.

---------------------

ಸಲಿಂಗಕಾಮ ಎಂಬುದು ಒಂದು ಪ್ರವೃತ್ತಿ - ರವಿಶಂಕರ್ ಗುರೂಜಿ, ಆರ್ಟ್ ಆಫ್ ಲಿವಿಂಗ್ ಸಂಸ್ಥಾಪಕ

ಅದನ್ನು ವೃತ್ತಿ ಮಾಡಿ ಬದುಕಲು ಕಲಿಯಿರಿ ಎನ್ನಲಿಲ್ಲವಲ್ಲ ಸದ್ಯ.
---------------------

ಮಹಾಪ್ರಾಣಗಳು ಇಲ್ಲವಾದರೆ ಕನ್ನಡ ಭಾಷೆಗೆ ಅನುಕೂಲ - ಎಸ್.ದಿವಾಕರ್, ಕತೆಗಾರ

ಮೊದಲು ಕನ್ನಡದ ಪ್ರಾಣ ಇನ್ನೂ ಇದೆಯಾ ಎನ್ನುವುದನ್ನು ಖಚಿತ ಪಡಿಸಿಕೊಳ್ಳೋಣ.
 

share
ಪಿ.ಎ.ರೈ
ಪಿ.ಎ.ರೈ
Next Story
X