ಆಟೊ ಚಾಲಕನ ಕೊಲೆ ಪ್ರಕರಣ: ಐವರ ಬಂಧನ
ಬೆಂಗಳೂರು, ನ.20: ಕ್ಷುಲ್ಲಕ ಕಾರಣಕ್ಕೆ ಆಟೊ ಚಾಲಕನನ್ನು ಕೊಲೆಗೈದಿದ್ದ ಪ್ರಕರಣ ಸಂಬಂಧ ಐವರನ್ನು ಇಲ್ಲಿನ ಮಹಾಲಕ್ಷ್ಮೀ ಲೇಔಟ್ ಠಾಣಾ ಪೊಲೀಸರು ಐವರನ್ನು ಬಂಧಿಸಿದ್ದಾರೆ.
ಜಯಮಾರು ನಗರದ ರಾಜೇಶ್(22), ಮಣಿ(25), ವಿನಯ್(20), ರಾಜಶೇಖರ್(26), ಚಂದನ್(25) ಬಂಧಿತ ಆರೋಪಿಗಳೆಂದು ಪೊಲೀಸರು ಗುರುತಿಸಿದ್ದಾರೆ.
ಆಟೊ ನಿಲ್ಲಿಸುವ ವಿಚಾರಕ್ಕೆ ಆಟೊ ಚಾಲಕ ಆಂಡ್ರೋಸ್(26) ಎಂಬಾತನೊಂದಿಗೆ ಆರೋಪಿಗಳು ಜಗಳವಾಡಿಕೊಂಡಿದ್ದರು. ದ್ವೇಷದಿಂದ ಆಂಡ್ರೋಸ್‌ನನ್ನು ನ.14ರ ಮುಂಜಾನೆ 3:30ರ ಸುಮಾರಿಗೆ ಮಹಾಲಕ್ಷ್ಮೀ ಲೇಔಟ್ ಪ್ರವೇಶದ್ವಾರದ ಮೆಟ್ರೋ ನಿಲ್ದಾಣದ ಬಳಿ ಮಾರಕಾಸ್ತ್ರಗಳಿಂದ ಹೊಡೆದು ಪರಾರಿಯಾಗಿದ್ದರು ಎಂದು ತಿಳಿದು ಬಂದಿದೆ.
ಈ ಸಂಬಂಧ ಮೊಕದ್ದಮೆ ದಾಖಲಿಸಿಕೊಂಡಿದ್ದ ಪೊಲೀಸರು, ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಇದೇ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕೆಲವು ಆರೋಪಿಗಳು ತಲೆ ಮರೆಸಿಕೊಂಡಿದ್ದು, ಅವರ ಪತ್ತೆಗೂ ತನಿಖೆ ಮುಂದುವರೆಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Next Story





