ವಾಹನ ಢಿಕ್ಕಿ: ಇಬ್ಬರು ಪಾದಚಾರಿಗಳಿಗೆ ಗಾಯ

ಬಣಕಲ್, ನ.20: ವಾಹನವೊಂದು ಇಬ್ಬರು ಪಾದಾಚಾರಿಗಳಿಗೆ ಢಿಕ್ಕಿ ಹೊಡೆದು ಕಂದಕಕ್ಕೆ ಬಿದ್ದ ಘಟನೆ ಕೊಟ್ಟಿಗೆಹಾರ ಸಮೀಪದ ಚಾರ್ಮಾಡಿ ಘಾಟ್ ನ ಏಕಲವ್ಯ ಶಾಲೆಯ ಬಳಿ ಸೋಮವಾರ ನಡೆದಿದೆ.
ತರುವೆ ಗ್ರಾಮದ ಜೀವನ್ ಜ್ಯೋತಿ ಎಸ್ಟೇಟ್ ಕೂಲಿ ಕಾರ್ಮಿಕರಾದ ಅಸ್ಸಾಂನ ಬಿಲಾಲ್ ಆಲಿ ಆಲಿಯಾಸ್ ಬಿಲಾಲ್ ಹುಸೈನ್ ಮತ್ತು ಇಸ್ಮಾಯೀಲ್ ಆಲಿ ರಾಷ್ಟ್ರೀಯ ಹೆದ್ದಾರಿ 234 ರಲ್ಲಿ ಬಣಕಲ್ ಸಂತೆಗೆ ತರಕಾರಿ ತರಲು ಕೊಟ್ಟಿಗೆಹಾರಕ್ಕೆ ನಡೆದುಕೊಂಡು ಬರುತ್ತಿರುವಾಗ ಮಂಗಳೂರು ಕಡೆಯಿಂದ ಪಿಕ್ ಅಪ್ ವಾಹನವು ಅತಿವೇಗದ ಅಜಾಗರೂಕತೆಯ ಚಾಲನೆಯಿಂದ ಕೂಲಿಕಾರ್ಮಿಕರಿಗೆ ಢಿಕ್ಕಿ ಹೊಡೆದು ಕಂದಕಕ್ಕೆ ಬಿದ್ದಿದೆ ಎನ್ನಲಾಗಿದೆ.
ಢಿಕ್ಕಿ ಹೊಡೆದ ಪರಿಣಾಮ ಇಸ್ಮಾಯೀಲ್ ಆಲಿ ಮತ್ತು ಬಿಲಾಲ್ ಹುಸೈನ್‍ಗೆ ತೀವ್ರ ಸ್ವರೂಪದ ಗಾಯಗಳಾಗಿದ್ದು, ಸ್ಥಳೀಯರು ಕೂಡಲೇ ದೌಡಾಯಿಸಿ ಅವರನ್ನು ಬಣಕಲ್ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಮಂಗಳೂರು ಆಸ್ಪತ್ರೆಗೆ ಸೇರಿಸಲಾಗಿದೆ. ಅದರಲ್ಲಿ ಬಿಲಾಲ್ ಆಲಿ ಆಲಿಯಾಸ್ ಬಿಲಾಲ್ ಹುಸೈನ್ ತೀವ್ರ ಸ್ವರೂಪದ ಗಾಯವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಬಗ್ಗೆ ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.





