Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಬೆಂಗಳೂರು
  3. ತಪ್ಪು ಮಾಡದ ವೃದ್ಧೆಗೆ ದಂಡ ವಿಧಿಸಿದ...

ತಪ್ಪು ಮಾಡದ ವೃದ್ಧೆಗೆ ದಂಡ ವಿಧಿಸಿದ ಬಿಎಂಟಿಸಿಗೆ 20 ಸಾವಿರ ರೂ.ದಂಡ ವಿಧಿಸಿದ ಗ್ರಾಹಕರ ನ್ಯಾಯಾಲಯ

ವಾರ್ತಾಭಾರತಿವಾರ್ತಾಭಾರತಿ21 Nov 2017 7:37 PM IST
share

ಬೆಂಗಳೂರು, ನ.21: ಯಾವುದೇ ತಪ್ಪಿಲ್ಲದಿದ್ದರೂ ವೃದ್ಧೆಯೊಬ್ಬರಿಗೆ ದಂಡ ಹಾಕಿದ್ದಕ್ಕೆ ಅದರ 100 ಪಟ್ಟು ಹೆಚ್ಚು ದಂಡವನ್ನು ತೆರಬೇಕಾದ ಪರಿಸ್ಥಿತಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಗೆ ಉಂಟಾಗಿದೆ.

ಬೆಂಗಳೂರು ದಕ್ಷಿಣದ ಸೋಮನಹಳ್ಳಿ ನಿವಾಸಿಯಾಗಿರುವ ವೆಂಕಟೇಶ್ ಮೂರ್ತಿಯವರ ಪತ್ನಿ 61 ವರ್ಷದ ಮಂಜುಳಾ ಎಂಬವರು ಮೂರು ವರ್ಷಗಳ ನಂತರ ಪರಿಹಾರ ಮೊತ್ತವನ್ನು ಪಡೆದಿದ್ದಾರೆ.

ನಗರದಲ್ಲಿನ ಗ್ರಾಹಕರ ನ್ಯಾಯಾಲಯ ಬಿಎಂಟಿಸಿಗೆ ಮಂಜುಳಾ ಅವರಿಗೆ 20 ಸಾವಿರ ರೂ. ದಂಡದ ಮೊತ್ತ ನೀಡಲು ಆದೇಶಿಸಿತು. ಬಿಎಂಟಿಸಿ ಅಧಿಕಾರಿಗಳ ವರ್ತನೆ ಮಂಜುಳಾ ಅವರಿಗೆ ಬೇರೆ ಪ್ರಯಾಣಿಕರ ಎದುರು ಅವಮಾನವುಂಟು ಮಾಡಿದ್ದಲ್ಲದೆ ಮಾನಸಿಕವಾಗಿಯೂ ಹಿಂಸೆಯಾಗಿದೆ ಎಂದು ಹೇಳಿದೆ.

ಪ್ರಕರಣವೇನು: 2013ರ ಡಿಸೆಂಬರ್ 28ರಂದು ಬೆಳಗ್ಗೆ 5 ಗಂಟೆಗೆ ಕೆ.ಆರ್.ಮಾರ್ಕೆಟ್ ಮೂಲಕ ಸರ್ಜಾಪುರ ರಸ್ತೆಯಾಗಿ ಸೋಮನಹಳ್ಳಿಯಿಂದ ಚಿಕ್ಕ ತಿರುಪತಿಗೆ ಬಸ್ ಹೋಗುತ್ತಿತ್ತು. ಅಂದು ಶನಿವಾರವಾದರೂ ನಿರ್ವಾಹಕ ಚನ್ನೇಗೌಡ ಶುಕ್ರವಾರದ ದಿನದ ಪಾಸು ಮಂಜುಳಾಗೆ ನೀಡಿದರು. ಅದನ್ನು ಮಂಜುಳಾ ಪ್ರಶ್ನಿಸಿದಾಗ ತಮಗೆ ಶುಕ್ರವಾರದ ಪಾಸು ನೀಡಲು ಅವಕಾಶ ನೀಡಿದ್ದು ಅದಕ್ಕೆ ಡಿಸೆಂಬರ್ 28ಎಂದು ಟಿಕ್ ಮಾಡಿ ಕೊಟ್ಟರು. ಯಾರೂ ನಿಮ್ಮನ್ನು ಪ್ರಶ್ನೆ ಮಾಡುವುದಿಲ್ಲ ಎಂದು ಹೇಳಿ ನಿರ್ವಾಹಕ ಟಿಕೆಟ್ ಕೊಟ್ಟರು.

ಸರ್ಜಾಪುರಕ್ಕೆ ಮುಟ್ಟುವ ಮೊದಲು ಬಸ್ ನಿಲ್ದಾಣಕ್ಕೆ ತಲುಪುವ ಮುನ್ನ ತಪಾಸಣಾ ಅಧಿಕಾರಿಗಳು ಬಸ್ಸನ್ನು ನಿಲ್ಲಿಸಿ ಪ್ರಯಾಣಿಕರ ಟಿಕೆಟ್ ಪರೀಕ್ಷಿಸಲು ಆರಂಭಿಸಿದರು. ಮಂಜುಳಾ ಪಾಸ್ ತೋರಿಸಿದಾಗ ಅಧಿಕಾರಿಗಳು ಅದನ್ನು ಸ್ವೀಕರಿಸಲು ನಿರಾಕರಿಸಿದರು. ಆಕೆ ನಡೆದ ಸಂಗತಿಯನ್ನು ವಿವರಿಸಲು ಹೊರಟಾಗ ಅವರು ಕೇಳಿಸಿಕೊಳ್ಳಲು ಸಿದ್ದರಿರಲಿಲ್ಲ. 400 ರೂಪಾಯಿ ದಂಡ ಕಟ್ಟಲು ಹೇಳಿ ಬಸ್ಸಿನಿಂದ ಹೊರದಬ್ಬಿದರು. 400 ರೂಪಾಯಿ ದಂಡ ಕಟ್ಟಿದರೂ ಕೂಡ 220 ರೂಪಾಯಿಗೆ ರಶೀದಿ ನೀಡಿದ್ದರು.

ಈ ಬಗ್ಗೆ ಮಂಜುಳಾ ಅವರು ಬಿಎಂಟಿಸಿ ಅಧಿಕಾರಿಗಳನ್ನು ಸಂಪರ್ಕಿಸಿದರು, ಅವರಿಂದ ಸಕಾರಾತ್ಮಕ ಪ್ರತಿಕ್ರಿಯೆ ಸಿಗಲಿಲ್ಲ. ಮಂಜುಳಾ ಕಡೆಯಿಂದ ಬಂದ ಲೀಗಲ್ ನೊಟೀಸನ್ನು ನಿರಾಕರಿಸಿದರು. ಇದಕ್ಕೆ ಮಂಜುಳಾ ಹಠ ಸಾಧಿಸಿ ಗ್ರಾಹಕರ ನ್ಯಾಯಾಲಯಕ್ಕೆ 2014ರಲ್ಲಿ ದೂರು ನೀಡಿದರು.

ಮೂರು ವರ್ಷಗಳ ವಾದದ ನಂತರ 10 ಸಾವಿರ ರೂ. ಪರಿಹಾರ ಮತ್ತು 10 ಸಾವಿರ ರೂ. ಕಾನೂನು ವ್ಯಾಜ್ಯ ವೆಚ್ಚ ನೀಡಬೇಕೆಂದು ಆದೇಶಿಸಿದೆ. ಆದೇಶ ಬಂದ 30 ದಿನಗಳೊಳಗೆ ಮಂಜುಳಾಗೆ ಈ 20 ಸಾವಿರ ರೂ. ನೀಡಬೇಕೆಂದು ಆದೇಶಿಸಿದೆ. ಇದಕ್ಕೆ ಕಾರಣಕರ್ತರು ನಿರ್ವಾಹಕ ಚನ್ನೇಗೌಡ, ಬನಶಂಕರಿ ವಿಭಾಗದ ಡಿಪೊ ಮ್ಯಾನೇಜರ್ ಮತ್ತು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X