ಕಲೆಯು ಜೀವನದ ಆಂತರಿಕ ವಿಚಾರ: ವಸಂತ ರಾವ್

ಉಡುಪಿ, ನ.21: ಭಾರತ ಮತ್ತು ಪಾಶ್ಚಿಮಾತ್ಯ ದೇಶಗಳ ಕಲೆಗಳ ಮಧ್ಯೆ ಸಾಕಷ್ಟು ವ್ಯತ್ಯಾಸಗಳಿವೆ. ಭಾರತೀಯ ಕಲೆಯು ನಮ್ಮ ಪ್ರತಿನಿತ್ಯದ ಜೀವನ ದಲ್ಲಿ ಕಾಣ ಸಿಗುವುದಿಲ್ಲ. ಅದು ನಮ್ಮ ಜೀವನದ ಆಂತರಿಕ ವಿಷಯ ಎಂದು ಉಡುಪಿ ಆರ್ಟ್ ಗ್ಯಾಲರಿಯ ನಿರ್ದೇಶಕ ಹಾಗೂ ಕಲಾವಿದ ವಸಂತ್ ರಾವ್ ಹೇಳಿದ್ದಾರೆ.
ಉಡುಪಿ ಚಿತ್ರಕಲಾ ಮಂದಿರ ಕಲಾ ವಿದ್ಯಾಲಯದ ವತಿಯಿಂದ ವಿದ್ಯಾ ಲಯದಲ್ಲಿ ಆಯೋಜಿಸಲಾದ ಪದವಿ ವಿದ್ಯಾರ್ಥಿಗಳ ಆರು ದಿನಗಳ ಚಿತ್ರಕಲಾ ಪ್ರದರ್ಶನ ‘ಸ್ಪರ್ಶ’ವನ್ನು ಮಂಗಳವಾರ ಉದಾ್ಘಟಿಸಿ ಅವರು ಮಾತನಾಡುತ್ತಿ ದ್ದರು.
ವಿದೇಶಿಗರ ದಾಳಿ ನಡೆಯದಿದ್ದರೆ ಭಾರತೀಯ ಕಲೆಯು ಇಂದು ಜಗತ್ತಿ ನಲ್ಲಿಯೇ ಅತ್ಯುತ್ತಮ ಕಲೆ ಎಂದು ಮೊದಲ ಸ್ಥಾನದಲ್ಲಿ ಇರುತ್ತಿತ್ತು. ಆದರೆ ದುರಂತ ಅಂದರೆ ನಮ್ಮ ಕಲೆಯನ್ನು ಹಾಳು ಮಾಡಿ ಕಳೆದುಹೋಗುವಂತೆ ಮಾಡಲಾಯಿತು. ಅದೇ ರೀತಿ ಬ್ರಿಟಿಷರ ದಾಳಿಗೆ ಜಾನಪದ ಹಾಗೂ ಆದಿ ವಾಸಿ ಕಲೆಗಳು ಕೂಡ ನಾಶವಾದವು ಎಂದು ಅವರು ಆರೋಪಿಸಿದರು.
ಭಾರತೀಯ ಕಲೆಯಲ್ಲಿ ಮೂರ್ತ, ಅಮೂರ್ತ ಎಲ್ಲವೂ ಅಡಗಿದೆ. ಇದರಲ್ಲಿ ವಿದ್ಯೆ, ಸಂಸ್ಕೃತಿ, ಸಂಶೋಧನೆ, ಬಣ್ಣ, ಆಧ್ಯಾತ್ಮಿಕ ಎಲ್ಲವೂ ಇದೆ. ಇದನ್ನು ನಾವು ಮುಂದುವರಿಸಿಕೊಂಡು ಹೋದರೆ ಇಡೀ ಜಗತ್ತಿನಲ್ಲಿ ಮುಂಚೂಣಿಗೆ ಬರಬಹುದಾಗಿದೆ ಎಂದು ಅವರು ಅಭಿಪ್ರಾಯ ಪಟ್ಟರು.
ಈ ಸಂದರ್ಭದಲ್ಲಿ ಕಲಾ ವಿದ್ಯಾಲಯದ ನಿರ್ದೇಶಕ ಯು.ನಿರಂಜನ್, ಪ್ರಾಂಶುಪಾಲ ರಾಜೇಂದ್ರ ತ್ರಾಸಿ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಚೇತನ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಪವನಿ ವಂದಿಸಿದರು.
ಇಲ್ಲಿ ಜಲವರ್ಣ, ಅಕ್ರಲಿಕ್, ಪೆನ್ಸಿಲ್ ಶೇಡ್, ಇಂಕ್ ಮುಂತಾದ ಮಾಧ್ಯಮಗಳಿಂದ ಕ್ಯಾನ್‌ವಾಸ್‌ನಲ್ಲಿ ಮೂಡಿಬಂದ ಒಟ್ಟು 28 ಕಲಾಕೃತಿಗಳನ್ನು ಪ್ರದರ್ಶಿಸಲಾ ಗಿದ್ದು, ನ.26ರವರೆಗೆ ಪ್ರತಿದಿನ ಬೆಳಗ್ಗೆ 10ರಿಂದ ಸಂಜೆ 5ಗಂಟೆ ವರೆಗೆ ವೀಕ್ಷಣೆಗೆ ಲಭ್ಯವಿದೆ.







