ಮಹಿಳಾ ಕಾನೂನು ಕುರಿತ ಲಿಖಿತ ಪರೀಕ್ಷೆ

ಉಡುಪಿ, ನ.21: ಕಾಲೇಜು ಶಿಕ್ಷಣ ಇಲಾಖೆಯ ಸೂಚನೆಯಂತೆ ‘ಮಹಿಳೆ ಯರಿಗಾಗಿ ಇರುವ ಕಾನೂನು ಹಕ್ಕುಗಳು’ ಎಂಬ ವಿಷಯದ ಕುರಿತು ಕಾಲೇಜು ಮಟ್ಟದ ಲಿಖಿತ ಪರೀಕ್ಷೆಯನ್ನು ಇಂದು ಅಜ್ಜರಕಾಡು ಡಾ.ಜಿ. ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆಸಲಾಯಿತು.
ರಾಷ್ಟ್ರೀಯ ಮಹಿಳಾ ಆಯೋಗವು ಮಹಿಳೆಯರಿಗಾಗಿ ಇರುವ ಕಾನೂನು ಹಕ್ಕುಗಳ ಬಗ್ಗೆ ಅರಿವು ಮೂಡಿಸಲು ನಿಟ್ಟಿನಲ್ಲಿ ರಾಷ್ಟ್ರವ್ಯಾಪಿ ಹಮ್ಮಿಕೊಳ್ಳಲಾಗಿ ರುವ ಈ ಸ್ಪರ್ಧೆಯಲ್ಲಿ ಕಾಲೇಜಿನ 240ಕ್ಕೂ ಅಧಿಕ ವಿದ್ಯಾರ್ಥಿನಿಯರು ಭಾಗ ವಹಿಸಿದ್ದರು. ಕಾಲೇಜಿನ ಮಹಿಳಾ ದೌರ್ಜನ್ಯ ತಡೆ ಸಮಿತಿಯ ಸಂಚಾಲಕಿ ಜಯಮಂಗಳ ನೇತೃತ್ವ ವಹಿಸಿದ್ದರು. ಕಾಲೇಜಿನ ಪ್ರಾಂಶುಪಾಲ ಪ್ರೊ.ಜಗದೀಶ್ ರಾವ್ ಬಿ. ಮಾರ್ಗದರ್ಶನ ನೀಡಿದರು.
Next Story





