ಹರೇಕಳ: ಬೈಕ್‌ಗೆ ಟಿಪ್ಪರ್ ಢಿಕ್ಕಿ
ಮಂಗಳೂರು, ನ.21: ಹರೇಕಳ ಗ್ರಾಮದ ರಾಮಕೃಷ್ಣ ಹೈಸ್ಕೂಲ್ ಬಳಿ ಮಂಗಳವಾರ ಬೈಕೊಂದಕ್ಕೆ ಟಿಪ್ಪರ್ ಡಿಕ್ಕಿ ಹೊಡೆದ ಘಟನೆ ನಡೆದಿದ್ದು, ಇದರಿಂದ ಬೈಕ್ ಸವಾರರು ಗಾಯಗೊಂಡು ಎರಡು ಖಾಸಗಿ ಆಸ್ಪತ್ರೆಗಳಿಗೆ ದಾಖಲಾಗಿದ್ದಾರೆ.
ಹರೇಕಳದ ಇಬ್ರಾಹೀಂ ತನ್ನ ಸ್ನೇಹಿಯ ಮುಹಮ್ಮದ್ ರಫೀಕ್‌ರ ಬೈಕ್‌ನಲ್ಲಿ ಮುಡಿಪು ಕಡೆಗೆ ಕೆಲಸಕ್ಕೆ ತೆರಳುತ್ತಿದ್ದಾಗ ವಿರುದ್ಧ ದಿಕ್ಕಿನಲ್ಲಿ ಬಂದ ಟಿಪ್ಪರ್ ಢಿಕ್ಕಿ ಹೊಡೆಯಿತು ಎನ್ನಲಾಗಿದ್ದು, ಇದರಿಂದ ಇಬ್ಬರಿಗೂ ಗಾಯವಾಗಿದೆ. ಆರೋಪಿ ಟಿಪ್ಪರ್ ಚಾಲಕನ ವಿರುದ್ಧ ಮಂಗಳೂರು ಸಂಚಾರ ದಕ್ಷಿಣ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
Next Story





