ಬೆಳ್ತಂಗಡಿ: ವಿದ್ಯುತ್ ಕಂಬ ಮುರಿದುಬಿದ್ದು ಕಾರ್ಮಿಕ ಮೃತ್ಯು
ಬೆಳ್ತಂಗಡಿ, ನ. 21: ಕೊಯ್ಯೂರು ಸನಿಹದ ಹರ್ಪಳ ಎಂಬಲ್ಲಿ ವಿದ್ಯುತ್ ಕಂಬ ಸರಿಪಡಿಸುತಿದ್ದ ವೇಳೆ ಕಂಬ ಮುರಿದು ಮೈಮೇಲೆ ಬಿದ್ದು ಕಾರ್ಮಿಕನೋರ್ವ ಸ್ಥಳದಲ್ಲೇ ಮೃತಪಟ್ಟ ಘಟನೆ ಮಂಗಳವಾರ ಸಂಭವಿಸಿದೆ.
ಮೃತರನ್ನು ಬೆಳ್ತಂಗಡಿ ತಾಲೂಕಿನ ಇಂದಬೆಟ್ಟು ಗ್ರಾಮದ ಬೆದ್ರಬೆಟ್ಟು ನಿವಾಸಿ ಪ್ರಸಾದ್ (28) ಎಂದು ಗುರುತಿಸಲಾಗಿದೆ.
ಇವರು ಬಂಟ್ವಾಳದ ಲೆವಿನ್ ಇಲೆಕ್ಟ್ರಿಕಲ್ಸ್‌ನಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದರು. ಹಳೆ ವಿದ್ಯುತ್ ಕಂಬವನ್ನು ಸರಿಪಡಿಸುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ. ಗಾಯಾಳು ವನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಲಾಯಿತಾದರೂ ದಾರಿ ಮಧ್ಯೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





