ದ.ಕ. ಜಿಲ್ಲಾ ಅಧ್ಯಕ್ಷರಾಗಿ ಸಿದ್ಧಿಕ್ ಅಬ್ದುಲ್ ಖಾದರ್
ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್

ಮಂಗಳೂರು, ನ. 21: ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್‌ನ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಅಧ್ಯಕ್ಷರಾಗಿ ಸಿದ್ಧಿಕ್ ಅಬ್ದುಲ್ ಖಾದರ್ ಬಂಟ್ವಾಳ್ ಆಯ್ಕೆಯಾಗಿದ್ದಾರೆ.
ಜಿಲ್ಲಾ ಸಹಕಾರಿ ಸಭಾ ಭವನದಲ್ಲಿ ಹಾಲಿ ಅಧ್ಯಕ್ಷ ಅಹ್ಮದ್ ಜಮಾಲ್ ಅವರ ಅಧ್ಯಕ್ಷತೆಯಲ್ಲಿ ರವಿವಾರ ನಡೆದ ಜಿಲ್ಲಾ ಕೌನ್ಸಿಲ್ ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಪ್ರಧಾನ ಕಾರ್ಯದರ್ಶಿಯಾಗಿ ಟಿ.ಯು.ಇಸ್ಮಾಯಿಲ್ ಬಿ.ಸಿ ರೋಡ್, ಉಪಾಧ್ಯಕ್ಷರಾಗಿ ರಶೀದ್ ಹಾಜಿ ಪುತ್ತೂರು ಹಾಗೂ ಶರೀಫ್ ಹಾಜಿ ಜೋಕಟ್ಟೆ, ಕಾರ್ಯದರ್ಶಿಯಾಗಿ ಬಶೀರ್ ಉಳ್ಳಾಲ ಹಾಗೂ ಅಶ್ರಫ್ ಬೆಂಗರೆ ಆಯ್ಕೆಯಾಗಿದ್ದಾರೆ.
ಕೋಶಾಧಿಕಾರಿ ಇಬ್ರಾಹೀಂ ಸಜಿಪ, ಲೀಗ್‌ನ ನೂತನ ಪಾರ್ಲಿಮೆಂಟ್ ಬೋರ್ಡ್ ಸಂಚಾಲಕರಾಗಿ ಸಿ.ಅಹ್ಮದ್ ಜಮಾಲ್, ಸದಸ್ಯರಾಗಿ ಸಯ್ಯದ್ ಅಹಮ್ಮದ್ ಬಾಷಾ ತಂಙಳ್, ಸುಲೈಮಾನ್ ಎಸ್ ಆಯ್ಕೆಯಾಗಿದ್ದಾರೆ. ಇದೇ ಸಂದರ್ಭದಲ್ಲಿ ದ.ಕ. ಜಿಲ್ಲಾ ಮುಸ್ಲಿಂ ಯೂತ್ ಲೀಗ್ ಘಟಕದ ಜಿಲ್ಲಾಧ್ಯಕ್ಷ ರಾಗಿ ಸಿದ್ಧಿಕ್ ತಲಪಾಡಿ ಹಾಗೂ ಎಂಎಸ್‌ಎಫ್ ಅಧ್ಯಕ್ಷರಾಗಿ ಅಬ್ದುಲ್ ಹಮೀದ್ ಆಯ್ಕೆಯಾಗಿದ್ದಾರೆ.
ನೂತನ ಪದಾಧಿಕಾರಿಗಳ ಆಯ್ಕೆ ಸಭೆಯಲ್ಲಿ ಲೀಗ್‌ನ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಜಿ ಮುಹಮ್ಮದ್ ಇಲ್ಯಾಸ್, ರಾಜ್ಯ ಕಾರ್ಯದರ್ಶಿ ಇಬ್ರಾಹೀಂ ಎಂ.ಜೋಕಟ್ಟೆ, ರಾಜ್ಯ ಸಂಘಟನಾ ಸಮಿತಿ ಸಂಚಾಲಕ ಡಾ.ಮುಹಮ್ಮದ್ ಫಾರೂಕ್, ಸದಸ್ಯರಾದ ಮುನೀರ್ ಅಹ್ಮದ್, ಸಮೀವುಲ್ಲಾ ಖಾದ್ರಿ, ಮಂಜೇಶ್ವರ ತಾಲೂಕು ಪಂಚಾಯತ್ ಅಧ್ಯಕ್ಷ ಎಂ.ಕೆ.ಅಶ್ರಫ್, ಮಂಜೇಶ್ವರ ಯೂತ್ ಲೀಗ್ ಅಧ್ಯಕ್ಷ ಸಯ್ಯದ್ ಸೈಫ್‌ಲ್ಲಾ ತಂಙಳ್ ಮೊದಲಾದವರು ಉಪಸ್ಥಿತರಿದ್ದರು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.







