2020ರ ವೇಳೆಗೆ ರೈತರ ಆದಾಯ ದ್ವಿಗುಣ ಹೊಂದಬೇಕೆಂಬುದು ಮೋದಿಯವರ ಗುರಿ: ದಿನೇಶ್

ಹನೂರು, ನ.21: ರೈತರ ಆದಾಯವು 2020 ರ ವೇಳೆಗೆ ದ್ವಿಗುಣ ಹೊಂದಬೇಕೆಂದು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಗುರಿ ಹೂಂದಿದ್ದಾರೆ ಎಂದು ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ.ಎಂ ಆರ್. ದಿನೇಶ್ ತಿಳಿಸಿದ್ದಾರೆ.
ತಾಲೂಕಿನ ಸಮೀಪದ ಉದ್ದನೂರು ಗ್ರಾಮದ ಎಂ.ಎಲ್ ರಾಮಚಂದ್ರ ತೋಟದಲ್ಲಿ ಆಯೋಜಿಸಿದ್ದ ಭಾರತೀಯ ತೋಟಗಾರಿಕೆ ಸಂಸ್ಥೆ ಮತ್ತು ಭಾ.ಕೃ.ಅ.ಪದ ವತಿಯಿಂದ ಅರ್ಕಾ ರಕ್ಷಕ್ ಟಮೋಟ ಹೈಬ್ರಿಡ್ ತಳಿಯ ಕ್ಷೇತ್ರೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭಾರತದಲ್ಲಿ 95 ಮೀಲಿಯನ್ ಹೆಕ್ಟೇರ್ ನಳ್ಳಿ ಮತ್ತು 23 ರಾಜ್ಯಗಳಲ್ಲಿ ಅರ್ಕಾ ರಕ್ಷಕ್ ಅರ್ಕಾ ಸಾರ್ಮಾಟ್ ತಳಿಯನ್ನು ಬೆಳಯುತ್ತಿದ್ದು, ಹೆಚ್ಚು ಅಧಿಕ ಇಳುವರಿ ಮತ್ತು ಹೆಚ್ಚು ಲಾಭ ಪಡೆಯಲಾಗುತ್ತಿದೆ. ರೈತರು ಇಂತಹ ಸಂದರ್ಭದಲ್ಲಿ ಅರ್ಕಾ ರಕ್ಷಕ್ ಅರ್ಕಾ ಸಾಮ್ರಾಟ್ ಎಂಬ ಹೈಬ್ರಿಡ್ ತಳಿಗಳನ್ನು ಉಪಯೋಗಿಸಿ ತ್ರಿರೋಗ ನೀರೋಧಕ ಅಧಿಕ ಇಳುವರಿ ಪಡೆಯಬೇಕು ಎಂದರು.
ರಾಜ್ಯ ರೈತರ ಸಂಘದ ಕುರುಬೂರು ಶಾಂತಕುಮಾರ್ ಮಾತನಾಡಿ, ರೈತರು ತಾವು ಬೆಳದ ಬೆಳೆಗೆ ಉತ್ತಮ ಮಾರುಕಟ್ಟೆ ಕಂಡು ಕೂಳ್ಳದೆ ದಳ್ಳಾಳಿಗಳ ಮೋರೆ ಹೋಗುವುದು ದುರದೃಷ್ಟಕರ ಇದ್ದನಲ್ಲ ಮನಗಂಡು ಇಂದು 1200 ಜನಸಂಖ್ಯೆಯೊಂದಿಗೆ 8 ಲಕ್ಷ ಬಂಡವಾಳ ಹೂಡಿ ಮೈಸೂರಿನಲ್ಲಿ ರೈತ ಮಿತ್ರ ಎಂಬ ಸಂಸ್ಥೆಯನ್ನು ಸ್ಥಾಪಿಸಿ ಮಧ್ಯವರ್ತಿಗಳಿಗೆ ಆಸ್ಪದ ನೀಡದಂತೆ ನೇರವಾಗಿ ರೈತರಿಗೆ ನ್ಯಾಯ ಒದಗಿಸಲು ಸಬಲರಾಗಿದ್ದೆವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಐಐಎಚ್‍ಆರ್ ಜಂಟಿ ನಿರ್ದೆಶಕ ನಾಗರಾಜು, ವಿಜ್ಞಾನಿಗಳಾದ ಡಾ.ಎ.ಟಿ ಸದಾಶಿವ, ಡಾ.ಉಮೇಶ್, ಡಾ.ಕೃಷ್ಣರೆಡ್ಡಿ, ತಾಲೂಕು ತೋಟಗಾರಿಕೆ ಉಪನಿರ್ದೇಶಕರಾದ ಶಿವಪ್ರಸಾದ್ ಮತ್ತು ದಾಮೋದರ್ ಇನ್ನಿತರರು ಹಾಜರಿದ್ದರು.







