ನ.24 ರಿಂದ ಬುಡೋಕಾನ್ ಕರಾಟೆ ಸ್ಪರ್ಧೆ
ಬೆಂಗಳೂರು, ನ.22: ಬುಡೋಕಾನ್ ಕರಾಟೆ ಸ್ಪರ್ಧೆಯನ್ನು ನ.24 ರಿಂದ ಮೂರು ದಿನಗಳ ಕಾಲ ನಗರದ ಕೋರಮಂಗಲದ ಒಳಾಂಗಣ ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಕೆಐ ಸಂಸ್ಥೆಯ ಅಧ್ಯಕ್ಷ ಸಿ.ಹನುಮಂತ ರಾವ್, ನಗರದಲ್ಲಿ ನಡೆಯಲಿರುವ ಸ್ಫರ್ಧೆಯನ್ನು ಇನ್ಸ್‌ಟಿಟ್ಯೂಟ್ ಆಫ್ ಕರಾಟೆ ಎಂಡ್ ಅಲೈಡ್ ಆರ್ಟ್ಸ್ ಸಂಸ್ಥೆ ನಡೆಸಿಕೊಡಲಿದ್ದು, ಇದರಲ್ಲಿ 20 ರಾಜ್ಯಗಳ 2 ಸಾವಿರ ಕರಾಟೆ ಪಟುಗಳು ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.
ಈ ಸ್ಪರ್ಧೆಯಲ್ಲಿ ವೈಯಕ್ತಿಕ ಕಟಾ, ತಂಡ ಕಟಾ, ವೈಯಕ್ತಿಕ ಕುಮಿಟೆ ಹಾಗೂ ತಂಡ ಕುಮಿಟೆ ಎಂಬ ನಾಲ್ಕು ಮುಖ್ಯ ವಿಭಾಗಗಳಿವೆ. ಪ್ರತೀ ವಿಭಾಗದಲ್ಲೂ ಬೆಲ್ಟ್ ಪ್ರಕಾರವಿದ್ದು, ವಯಸ್ಸು, ದೇಹ ತೂಕಕ್ಕನುಗುಣವಾಗಿ ಉಪ ವಿಭಾಗಗಳನ್ನು ಮಾಡಲಾಗಿದೆ. ಸ್ಪರ್ಧೆಯಲ್ಲಿ 250 ಜನರಿಗೆ ಪದಕ ನೀಡಲಿದ್ದು, ಡಬ್ಲುಕೆಎಫ್ ನಿಯಮಗಳಿಗೆ ಅನುಗುಣವಾಗಿ ಸ್ಪರ್ಧೆ ನಡೆಯಲಿದೆ ಎಂದು ವಿವರಿಸಿದರು.
Next Story





