ಸ್ಮಾರ್ಟ್ ಸಿಟಿ ಯೋಜನೆಯಡಿ ಮಂಗಳೂರಿಗೆ 216 ಕೋ.ರೂ. ಬಿಡುಗಡೆ

ಮಂಗಳೂರು, ನ. 22: ಸ್ಮಾರ್ಟ್ ಸಿಟಿ ಯೋಜನೆಗೆ ರಾಜ್ಯದ ಆರು ನಗರಗಳಿಗೆ ಕೇಂದ್ರ ಮತ್ತು ರಾಜ್ಯ ಸರಕಾರಗಳು ಈವರೆಗೆ 1,656 ಕೋ.ರೂ. ಬಿಡುಗಡೆ ಮಾಡಿದ್ದು, ಈ ಪೈಕಿ ಮಂಗಳೂರಿಗೆ 216 ಕೋ. ರೂ. ಬಿಡುಗಡೆಯಾಗಿದೆ ಎಂದು ಶಾಸಕ ಜೆ.ಆರ್. ಲೋಬೋ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಮಂಗಳೂರಿಗೆ ರಾಜ್ಯ ಸರಕಾರ 105 ಕೋ. ರೂ. ಮತ್ತು ಕೇಂದ್ರ ಸರಕಾರ 111 ಕೋ.ರೂ. ಬಿಡುಗಡೆ ಮಾಡಿದೆ. ಆ ಪೈಕಿ 3.13 ಕೋ.ರೂ. ಖರ್ಚು ಮಾಡಲಾಗಿದೆ. ಸ್ಮಾರ್ಟ್ ಸಿಟಿ ಪರಿಶೀಲನೆ ಮತ್ತು ಮೇಲ್ವಿಚಾರಣೆಗೆ ಸಮಿತಿಯಿದ್ದು, ಈ ಸಮಿತಿಗೆ ಆಯಾ ನಗರದ ಶಾಸಕರು ಸದಸ್ಯರಾಗಿರುತ್ತಾರೆ.
ಸ್ಮಾರ್ಟ್ ಸಿಟಿಗೆ ಕೇಂದ್ರ ಸರಕಾರವು ರಾಜ್ಯದ ಬೆಳಗಾವಿ, ದಾವಣಗೆರೆ, ಹುಬ್ಬಳ್ಳಿ-ಧಾರವಾಡ, ಮಂಗಳೂರು, ಶಿವಮೊಗ್ಗ, ತುಮಕೂರು ನಗರಗಳನ್ನು ಆಯ್ಕೆ ಮಾಡಿದೆ.
Next Story





