ನ.27ರಿಂದ ಚುನಾವಣೆ ನೀತಿ ಸಂಹಿತೆ ಜಾರಿ
ಗ್ರಾಪಂ ಉಪ ಚುನಾವಣೆ
ಬೆಂಗಳೂರು, ನ.22: ರಾಜ್ಯದ ವಿವಿಧ ಜಿಲ್ಲೆಗಳ 207 ಗ್ರಾಮ ಪಂಚಾಯತ್ ಗಳಲ್ಲಿ ತೆರವಾಗಿರುವ 287 ಸದಸ್ಯ ಸ್ಥಾನಗಳಿಗೆ ಉಪ ಚುನಾವಣೆ ನಡೆಸಲು ರಾಜ್ಯ ಚುನಾವಣೆ ಆಯೋಗ ನ.22ರ ಬುಧವಾರ ತೀರ್ಮಾನಿಸಿದೆ.
ಚುನಾವಣೆ ನಡೆಯುವ ಗ್ರಾಪಂ ವ್ಯಾಪ್ತಿಯಲ್ಲಿ ಹಾಗೂ ತಾಲೂಕು ಪಂಚಾಯತ್ ಗಳ ಕ್ಷೇತ್ರಗಳ ವ್ಯಾಪ್ತಿಯಲ್ಲಿ ನ.27 ರಿಂದ ಡಿ.20ರವರೆಗೆ ಚುನಾವಣೆ ನೀತಿ ಸಂಹಿತೆಯು ಜಾರಿಯಲ್ಲಿರುತ್ತದೆ.
ಜಿಲ್ಲಾಧಿಕಾರಿಗಳು ಚುನಾವಣಾ ಅಧಿಸೂಚನೆ ಹೊರಡಿಸುವ ನ.27, ನಾಮಪತ್ರಗಳನ್ನು ಸಲ್ಲಿಸಲು ಕೊನೆಯ ದಿನ ನ.30, ನಾಮಪತ್ರಗಳನ್ನು ಪರಿಶೀಲಿಸುವ ಕೊನೆಯ ದಿನ ಡಿ.1, ಉಮೇದುವಾರಿಕೆಗಳನ್ನು ಹಿಂತೆಗೆದುಕೊಳ್ಳಲು ಕೊನೆಯ ದಿನ ನ.4, ಮತದಾನ ಅವಶ್ಯವಿದ್ದರೆ, ಮತದಾನವನ್ನು ನಡೆಸಬೇಕಾದ ದಿನ ಡಿ.17, ಮರು ಮತದಾನ ಅವಶ್ಯವಿದ್ದಲ್ಲಿ, ಮತದಾನವನ್ನು ನಡೆಸಬೇಕಾದ ದಿನ ಡಿ.19, ಮತಗಳ ಎಣಿಕೆ ದಿನ ಡಿ.20, ಚುನಾವಣೆಯನ್ನು ಯಾವ ದಿನಾಂಕಕ್ಕೆ ಮುಂಚೆ ಮುಕ್ತಾಯಗೊಳಿಸಬೇಕೋ ಆ ದಿನಾಂಕ ಮತ್ತು ದಿನ ಡಿ.20 ಎಂದು ರಾಜ್ಯ ಚುನಾವಣಾ ಆಯೋಗದ ಪ್ರಕಟಣೆ ತಿಳಿಸಿದೆ.
Next Story





