ನ.24: ಕೆ.ಸಿ.ನಗರದಲ್ಲಿ ಹುಬ್ಬುರ್ರಸೂಲ್ ಕಾನ್ಫರೆನ್ಸ್
ಮಂಗಳೂರು, ನ.22: ಸುನ್ನೀ ಕೋ ಓರ್ಡಿನೇಶನ್ ಕಮಿಟಿ ತಲಪಾಡಿ ರೇಂಜ್ (ಎಸ್‌ಜೆಎಂ, ಎಸ್‌ಎಂಎ, ಎಸ್‌ವೈಎಸ್, ಎಸ್ಸೆಸ್ಸೆಫ್) ಇದರ ವತಿಯಿಂದ ನ.24ರಂದು ಸಂಜೆ 4 ಕ್ಕೆ ಕೆ.ಸಿ. ನಗರ ಜಂಕ್ಷನ್‌ನ ತಾಜುಲ್ ಉಲಮಾ ವೇದಿಕೆಯಲ್ಲಿ ಹುಬ್ಬುರ್ರಸೂಲ್ ಕಾನ್ಫರೆನ್ಸ್ ನಡೆಯಲಿದೆ.
ಅಸೈಯದ್ ಶಹೀರ್ ತಂಙಳ್ ಮಳ್‌ಹರ್ ಪೊಸೋಟು ದುಆ ಮಾಡಲಿದ್ದು, ಖಾಝಿ ಶೈಖುನಾ ಇಬ್ರಾಹೀಂ ಮುಸ್ಲಿಯಾರ್ ಬೇಕಲ್ ಉದ್ಘಾಟಿಸಲಿದ್ದಾರೆ. ಕೆ.ಸಿ. ಹುಸೈನ್ ಸಅದಿ ಕೆ.ಸಿ.ರೋಡ್ ಅಧ್ಯಕ್ಷತೆ ವಹಿಸಲಿದ್ದು, ಎಮ್ಮೆಸ್ಸೆಂ ಅಬ್ದುರ್ರಶೀದ್ ಝೈನಿ ಕಾಮಿಲ್ ಸಖಾಫಿ ಮುನ್ನುಡಿ ಭಾಷಣ ಮಾಡಲಿದ್ದಾರೆ. ಪೆರೋಡ್ ಅಬ್ದುರ್ರಹ್ಮಾನ್ ಸಖಾಫಿ ಮುಖ್ಯ ಭಾಷಣ ಮಾಡಲಿದ್ದು, ಸಚಿವ ಯು.ಟಿ.ಖಾದರ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
Next Story





