ನ.25ರಿಂದ ಕೋಡಿಜಾಲ್‌ನಲ್ಲಿ ಧಾರ್ಮಿಕ ಪ್ರವಚನ
ಮಂಗಳೂರು, ನ.22: ಕೊಣಾಜೆ ಸಮೀಪದ ಕೋಡಿಜಾಲ್‌ನ ಖಿದ್ಮತುಲ್ ಇಸ್ಲಾಂ ಎಸೋಸಿಯೇಶನ್‌ನ 39ನೆ ವಾರ್ಷಿಕೋತ್ಸವದ ಅಂಗವಾಗಿ ನ. 25ರಿಂದ 30ರವರೆಗೆ ಮಸೀದಿಯ ಖತೀಬ್ ಹಾಜಿ ಎಂ.ಎಚ್. ಅಬೂಬಕರ್ ಸಖಾಫಿಯ ಅಧ್ಯಕ್ಷತೆಯಲ್ಲಿ ಧಾರ್ಮಿಕ ಪ್ರವಚನ ಕಾರ್ಯಕ್ರಮ ನಡೆಯಲಿದೆ.
ನ. 25ರಂದು ಯು.ಕೆ. ಮುಹಮ್ಮದ್ ಹನೀಫ್ ನಿಝಾಮಿ, ನ.26ರಂದು ಬಿ.ಕೆ. ಅಬ್ದುಲ್ ಹಮೀದ್ ಫೈಝಿ ಕಿಲ್ಲೂರು, ನ.27ರಂದು ಹಾಶಿರ್ ಹಾಮಿದಿ, ನ.28ರಂದು ಪಿ.ಎ. ಝುಬೈರ್ ದಾರಿಮಿ, ನ.29ರಂದು ಅಬೂಬಕರ್ ಸಿದ್ದೀಕ್ ಅಲ್ ಜಲಾಲಿ ಪ್ರವಚನ ನೀಡಲಿದ್ದಾರೆ.
ಕೋಡಿಜಾಲ್ ರಿಫಾಯಿ ಜುಮಾ ಮಸ್ಜಿದ್, ಖಿದ್ಮತುಲ್ ಇಸ್ಲಾಂ ಎಸೋಸಿಯೇಶನ್, ಹಯಾತುಲ್ ಇಸ್ಲಾಂ ಮದ್ರಸ ಕೋಡಿಜಾಲ್ ಇದರ ಸಹಭಾಗಿತ್ವದಲ್ಲಿ ಡಿ.1ರಂದು ಬೆಳಗ್ಗೆ 9ಕ್ಕೆ ಮೀಲಾದುನ್ನೆಬಿ ಕಾರ್ಯಕ್ರಮವು ಮಸೀದಿಯ ಅಧ್ಯಕ್ಷ ಹಾಜಿ ಇಬ್ರಾಹೀಂ ಕೋಡಿಜಾಲ್‌ರ ಅಧ್ಯಕ್ಷತೆಯಲ್ಲಿ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.
Next Story





