ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಾಜಿ ಎಸ್.ಎಂ. ರಶೀದ್ ರಿಗೆ ಸನ್ಮಾನ

ಬಂಟ್ವಾಳ, ನ. 22: ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಾಗೂ ಮೆಲ್ಕಾರ್ ಪದವಿಪೂರ್ವ ಮತ್ತು ಪದವಿ ಕಾಲೇಜಿನ ಸ್ಥಾಪಕಾಧ್ಯಕ್ಷ ಹಾಜಿ ಎಸ್.ಎಂ. ರಶೀದ್ ಅವರನ್ನು ಮಂಗಳೂರು ಸಮನ್ವಯ ಮುಸ್ಲಿಮ್ ಶಿಕ್ಷಕರ ಸಂಘದ ವತಿಯಿಂದ ಮೆಲ್ಕಾರ್ ಪದವಿಪೂರ್ವ ಕಾಲೇಜಿನಲ್ಲಿ ನಡೆದ ರಾಷ್ಟ್ರೀಯ ಶಿಕ್ಷಣ ದಿನಾಚರಣೆಯ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಸಂಘದ ಜಿಲ್ಲಾಧ್ಯಕ ಸಮೀವುಲ್ಲಾ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಮಜೀದ್ ಎಸ್, ತಾಲೂಕು ಘಟಕ ಅಧ್ಯಕ್ಷ ಹಮೀದ್ ಮಾಣಿ, ಜಮೀಯತುಲ್ ಫಲಾಹ್ ಅಧ್ಯಕ್ಷ ಬಿ ಎಂ ತುಂಬೆ, ಮೆಲ್ಕಾರ್ ಮಹಿಳಾ ಕಾಲೇಜು ಪ್ರಾಂಶುಪಾಲ ಅಬ್ದುಲ್ ಲತೀಫ್ ಹಾಗೂ ಮುಹಮ್ಮದ್ ಸಿನಾನ್ ಉಪಸ್ಥಿತರಿದ್ದರು.
Next Story





