ಸ್ಕೂಬಾ ಡೈವಿಂಗ್ ತರಬೇತಿಗೆ ಅರ್ಜಿ ಆಹ್ವಾನ
ಉಡುಪಿ, ನ.22: ಜಿಲ್ಲಾಡಳಿತ ಹಾಗೂ ಪ್ರವಾಸೋದ್ಯಮ ಇಲಾಖೆ ವತಿಯಿಂದ ಕಾಪು ಕಡಲ ತೀರದಲ್ಲಿ ಸ್ಕೂಬಾ ಡೈವಿಂಗ್ ಸಾಹಸ ಕ್ರೀಡೆನ್ನು ನಡೆಸಲು ಮುಂಬಯಿಯ ವೆಸ್ಟ್‌ಕೋಸ್ಟ್ ಅಡ್ವಂಚರ್ಸ್‌ಗೆ 3 ವರ್ಷಗಳ ಪರವಾನಗಿಯನ್ನು ನೀಡಿದ್ದು, ಈ ಸಂಸ್ಥೆ ಸಾಹಸ ಕ್ರೀಡೆಯ ಉಚಿತ ತರಬೇತಿ ಯನ್ನು ಸ್ಥಳೀಯ ಆಸಕ್ತ ಯುವತಿಯರಿಗೆ ನೀಡಲು ಉದ್ದೇಶಿಸಿದೆ.
ಇದಕ್ಕಾಗಿ ಎಸ್ಸೆಸೆಲ್ಸಿ ತೇರ್ಗಡೆಗೊಂಡ ಇಂಗ್ಲೀಷ್, ಹಿಂದಿ, ಕನ್ನಡ ಬಾಷೆ ಬಲ್ಲ ಆರೋಗ್ಯವಂತ ಹಾಗೂ ಈಜು ಬಲ್ಲ ಯುವತಿಯರು ತಮ್ಮ ಹೆಸರನ್ನು ಈ ಕೆಳಕಂಡ ಸಂಸ್ಥೆಯಲ್ಲಿ ನೊಂದಾಯಿಸಿಕೊಳ್ಳಲು ಕೋರಲಾಗಿದೆ. ತರಬೇತಿ ಎರಡು ಹಂತದ್ದಾಗಿದ್ದು, ಓಪನ್ ವಾಟರ್ ಸರ್ಟಿಫಿಕೇಷನ್ ಹಾಗೂ ಡೈವ್ ಮಾಸ್ಟರ್ ಸರ್ಟಿಫಿಕೇಷನ್ ಆಗಿದೆ. ತರಬೇತಿ ಹೊಂದಿದ ಒಬ್ಬ ಮಹಿಳಾ ಡೈವರ್ ಕಾಪುವಿನಲ್ಲಿ ಉದ್ಯೋಗ ಪಡೆಯಲು ಅವಕಾಶವಿದೆ ಎಂದು ಪ್ರಕಟಣೆ ತಿಳಿಸಿದೆ.
ಆಸಕ್ತರು ಸಹಾಯಕ ನಿರ್ದೇಶಕರ ಕಚೇರಿ, ಪ್ರವಾಸೋದ್ಯಮ ಇಲಾಖೆ, ರಜತಾದ್ರಿ, ಜಿಲ್ಲಾಧಿಕಾರಿಗಳ ಕಚೇರಿ ಸಂರ್ಕೀಣ ,ಎ ಬ್ಲಾಕ್, 2ನೇ ಮಹಡಿ, ಮಣಿಪಾಲ, ಉಡುಪಿ-576104 (ದೂರವಾಣಿ-0820-2574868) ಹಾಗೂ ಪವನ್ ಶೌರಿ, ವೆಸ್ಟ್ ಕೋಸ್ಟ್ ಅರ್ಡ್ವೆಂಚರ್ ಕಚೇರಿ, ಕಾಪು ಕಡಲ ತೀರ, ಕಾಪು (ಮೊಬೈಲ್-0611150639), ಇ-ಮೇಲ್: pawanwestcoastadventures.in ಗೆ ಎಲ್ಲಾ ದಾಖಲೆಗಳೊಂದಿಗೆ ಡಿ.5ರೊಳಗೆ ಸಂಪರ್ಕಿಸಲು ಕೋರಲಾಗಿದೆ.





