Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. 30 ವರ್ಷ ಕೆಳಗಿನ ಫೋರ್ಬ್ಸ್ ಸಾಧಕರ...

30 ವರ್ಷ ಕೆಳಗಿನ ಫೋರ್ಬ್ಸ್ ಸಾಧಕರ ಪಟ್ಟಿಯಲ್ಲಿ ದಿಲ್ಲಿಯ ಯುವಕ

ವಾರ್ತಾಭಾರತಿವಾರ್ತಾಭಾರತಿ22 Nov 2017 11:03 PM IST
share
30 ವರ್ಷ ಕೆಳಗಿನ ಫೋರ್ಬ್ಸ್ ಸಾಧಕರ ಪಟ್ಟಿಯಲ್ಲಿ ದಿಲ್ಲಿಯ ಯುವಕ

  ಹೊಸದಿಲ್ಲಿ, ನ.22: ವಿಶ್ವದಾದ್ಯಂತದ ಯುವ ಉದ್ಯಮಿಗಳು, ಸಂಶೋಧಕರು ಹಾಗೂ ಕ್ರಾಂತಿಕಾರಿ ಶೋಧಕರನ್ನು ಗುರುತಿಸುವ ‘ಫೋರ್ಬ್ಸ್ 30ರ ಕೆಳಗಿನ’ ಪಟ್ಟಿಯಲ್ಲಿ ದಿಲ್ಲಿ ಮೂಲದ ತೀರ್ಥಕ್ ಸಹಾ ಎಂಬ 25ರ ಹರೆಯದ ಯುವಕ ಸ್ಥಾನಪಡೆದಿದ್ದಾರೆ.

ಈ ಪ್ರತಿಷ್ಠಿತ ಮನ್ನಣೆಗೆ ವಿಶ್ವದಾದ್ಯಂತ ಸುಮಾರು 15,000 ಯುವಜನತೆ ನಾಮನಿರ್ದೇಶನಗೊಂಡಿದ್ದು ಇವರಲ್ಲಿ ಆಯ್ದ 600 ಮಂದಿಯಲ್ಲಿ ಸಹಾರನ್ನು ಆಯ್ಕೆಮಾಡಲಾಗಿದೆ.

600 ಪ್ರವೇಶಪತ್ರಗಳಲ್ಲಿ ಸಹಾ ಅವರ ಯೋಜನೆ ದ್ವಿತೀಯ ಸ್ಥಾನ ಪಡೆದಿದೆ. ಸಹಾ ಪ್ರಸ್ತುತಪಡಿಸಿದ ವಿಶ್ವಸನೀಯ ವಿದ್ಯುಚ್ಛಕ್ತಿ ಸರಬರಾಜು ಯೋಜನೆಯನ್ನು ತನ್ನ ಜಾಲತಾಣದಲ್ಲಿ ಬಳಸಿಕೊಳ್ಳುವುದಾಗಿ ಸಹಾ ಉದ್ಯೋಗಿಯಾಗಿರುವ ‘ಎಇಪಿ’ ಸಂಸ್ಥೆ ತಿಳಿಸಿದೆ.

 ‘ವಿದ್ಯುಚ್ಛಕ್ತಿ’ ವಿಭಾಗದಲ್ಲಿ ಸಹಾ ಆಯ್ಕೆಗೊಂಡಿದ್ದು ವಿದ್ಯುಚ್ಛಕ್ತಿ ಉತ್ಪಾದನೆ ಮತ್ತು ವಿತರಣೆ ಕುರಿತ ಸಂಶೋಧನಾ ಕಾರ್ಯಕ್ಕೆ ಫೋರ್ಬ್ಸ್‌ನ ಮನ್ನಣೆ ದೊರಕಿದೆ. ವ್ಯಕ್ತಿಯ ವೃತ್ತಿಜೀವನದ ಸಾಧನೆಯನ್ನು ಪರಿಗಣಿಸಿ ನೀಡುವ ಈ ಮಾನ್ಯತೆ ಜೀವಮಾನದ ಸಾಧನೆ, (ಆದರೆ 30ರ ಕೆಳಹರೆಯದಲ್ಲಿ ) ಪ್ರಶಸ್ತಿಗೆ ಸಮಾನವಾಗಿದೆ . ಇದೊಂದು ಅದ್ಭುತ ಗೌರವವಾಗಿದೆ ಎಂದು ಸಹಾ ಪ್ರತಿಕ್ರಿಯಿಸಿದ್ದಾರೆ.

   ದಿಲ್ಲಿಯ ದ್ವಾರಕ ನಗರದಲ್ಲಿ ಜನಿಸಿದ್ದ ತೀರ್ಥಕ್ ಸಹಾ ದಿಲ್ಲಿಯ ಸೈಂಟ್ ಕೊಲಂಬಿಯಾ ಶಾಲೆ ಮತ್ತು ಮಣಿಪಾಲದಲ್ಲಿ ಶಿಕ್ಷಣ ಪಡೆದ ಬಳಿಕ 2013ರಲ್ಲಿ ಅಮೆರಿಕಕ್ಕೆ ತೆರಳಿದ್ದರು.ಇದೀಗ ಅಮೆರಿಕದ ಇಂಡಿಯಾನದಲ್ಲಿ ವಾಸಿಸುತ್ತಿರುವ ಸಹಾ, ಅಮೆರಿಕದ 11 ರಾಜ್ಯಗಳ ಸುಮಾರು 5.4 ಮಿಲಿಯ ಜನರಿಗೆ ವಿದ್ಯುಚ್ಛಕ್ತಿ ಸರಬರಾಜು ಮಾಡುತ್ತಿರುವ ಅಮೆರಿಕನ್ ಇಲೆಕ್ಟ್ರಿಕ್ ಪವರ್ (ಎಇಪಿ)ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.

 ಅಮೆರಿಕದಲ್ಲಿರುವ ವಿದ್ಯುತ್ ಸ್ಥಾವರಗಳು ಸುಮಾರು ಶತಮಾನದಷ್ಟು ಹಳೆಯದಾಗಿದ್ದು ನವೀನ ಬದಲಾವಣೆ ನಡೆದಿಲ್ಲ. ಈ ನಿಟ್ಟಿನಲ್ಲಿ ಸ್ಮಾರ್ಟ್ ಗ್ರಿಡ್ ತಂತ್ರಜ್ಞಾನ ಬಳಸಿ ಎಇಪಿಯ ವಿದ್ಯುತ್ ಸ್ಥಾವರಗಳನ್ನು ಸುರಕ್ಷಿತ ಹಾಗೂ ಹೆಚ್ಚು ವಿಶ್ವಸನೀಯಗೊಳಿಸಬಹುದು ಎಂದು ಸಹಾ ತಮ್ಮ ಯೋಜನೆಯಲ್ಲಿ ತಿಳಿಸಿದ್ದಾರೆ.

    ಸಹಾಗೆ ದಿಲ್ಲಿ ವಿವಿಯಲ್ಲಿ ಖಗೋಳಭೌತಶಾಸ್ತ್ರ ಅಧ್ಯಯನ ಮಾಡುವ ಆಸಕ್ತಿಯಿತ್ತು. ಆದರೆ ಈ ಪದವಿಗೆ ಪ್ರವೇಶ ಪಡೆಯಲು ಅಗತ್ಯವಿದ್ದ ಅಂಕ ಹೊಂದಿರದ ಕಾರಣ ಮಣಿಪಾಲ್ ವಿವಿಯಲ್ಲಿ ಇಲೆಕ್ಟ್ರಿಕಲ್ ಇಂಜಿನಿಯರಿಂಗ್‌ಗೆ ಸೇರ್ಪಡೆಗೊಂಡರು ಎಂದು ಅವರ ತಾಯಿ ತಿಳಿಸಿದ್ದಾರೆ. ಬಳಿಕ ಸ್ಕಾಲರ್‌ಷಿಪ್ ಪಡೆದು ಫಿಲಡೆಲ್ಫಿಯಾದ ವಿವಿಯಲ್ಲಿ ವಿಜ್ಞಾನದಲ್ಲಿ ಪದವಿ ಪಡೆದರು. ಈ ಸಂದರ್ಭ ನಡೆದ ಕ್ಯಾಂಪಸ್ ಸಂದರ್ಶನದಲ್ಲಿ ಎಇಪಿ ಅವರನ್ನು ಆಯ್ಕೆ ಮಾಡಿಕೊಂಡಿತು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X